ಭಾರತದ ಅತ್ಯಂತ ಶ್ರೀಮಂತ ನಟ ಶಾರೂಕ್ ಖಾನ್‌; ಎರಡನೇ ಸ್ಥಾನದಲ್ಲಿರೋದು ಸಲ್ಮಾನ್‌, ಅಮೀರ್ ಖಾನ್ ಇಬ್ರೂ ಅಲ್ಲ!

Published : Nov 22, 2023, 12:49 PM IST

ಬಾಲಿವುಡ್‌ನ ಬಾದ್ ಷಾ ಎಂದೇ ಕರೆಸಿಕೊಳ್ಳೋ ಶಾರೂಕ್‌ ಖಾನ್‌ಗೆ ಜಗತ್ತಿನಾದ್ಯಂತ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಹಾಗೆಯೇ ಭಾರತದ ಅತ್ಯಂತ ಶ್ರೀಮಂತ ನಟ ಕೂಡಾ ಇವರೇ. ಆದರೆ ಭಾರತದ ಎರಡನೇ ಶ್ರೀಮಂತ ನಟ ಸಲ್ಮಾನ್ ಖಾನ್, ಅಮೀರ್ ಖಾನ್ ಇಬ್ರೂ ಅಲ್ಲ ಮತ್ಯಾರು?

PREV
18
ಭಾರತದ ಅತ್ಯಂತ ಶ್ರೀಮಂತ ನಟ ಶಾರೂಕ್ ಖಾನ್‌; ಎರಡನೇ ಸ್ಥಾನದಲ್ಲಿರೋದು ಸಲ್ಮಾನ್‌, ಅಮೀರ್ ಖಾನ್ ಇಬ್ರೂ ಅಲ್ಲ!

ಶಾರೂಕ್‌ ಖಾನ್ ಮತ್ತು ಸಲ್ಮಾನ್ ಖಾನ್‌ನಿಂದ ಹಿಡಿದು ಅಮೀರ್ ಖಾನ್ ಮತ್ತು ಅಕ್ಷಯ್ ಕುಮಾರ್‌ ವರೆಗೆ, ಭಾರತವು ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಬಹು ಸೂಪರ್‌ಸ್ಟಾರ್‌ಗಳನ್ನು ಹೊಂದಿದೆ. ಈ ನಟರು ತಮ್ಮ ಸಿನಿಮಾ, ಬ್ರ್ಯಾಂಡ್ ಜಾಹೀರಾತು, ಬಿಸಿನೆಸ್, ಸೋಷಿಯಲ್ ಮೀಡಿಯಾ ಪೋಸ್ಟ್‌ನಿಂದ ಕೋಟ್ಯಾಂತರ ರೂ. ಸಂಪಾದಿಸುತ್ತಾರೆ.

28

ಭಾರತದ ಅತ್ಯಂತ ಶ್ರೀಮಂತ ನಟ ಶಾರೂಕ್‌ ಖಾನ್ ಅವರ ನಿವ್ವಳ ಮೌಲ್ಯವು 735 ಮಿಲಿಯನ್ ಎಂದು ಅಂದಾಜಿಸಲಾಗಿದೆ. ಭಾರತದ ಎರಡನೇ ಶ್ರೀಮಂತ ನಟ 410 ಮಿಲಿಯನ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಆದರೆ ಈ ನಟ ಹೆಚ್ಚು ಸಿನಿಮಾಗಳಲ್ಲಿ ನಟಿಸ್ತಿರೋ ಸಲ್ಮಾನ್ ಖಾನ್‌ ಅಥವಾ ಅಕ್ಷಯ್ ಕುಮಾರ್ ಅಲ್ಲ. ಬದಲಿಗೆ ಹೃತಿಕ್ ರೋಷನ್. ಮೂರನೇ ಶ್ರೀಮಂತ ಅಮಿತಾಬ್ ಬಚ್ಚನ್. ಇವರ ಆಸ್ತಿ ಮೌಲ್ಯ 375 ಮಿಲಿಯನ್.

38

ಹೃತಿಕ್ ರೋಷನ್‌, ಚಿತ್ರವೊಂದಕ್ಕೆ 75 ರಿಂದ 100 ಕೋಟಿ ರೂ. ಗಳಿಸುತ್ತಾರೆ. ಮಾತ್ರವಲ್ಲ ಬ್ರಾಂಡ್ ಎಂಡಾರ್ಸ್‌ಮೆಂಟ್‌ಗಳಿಂದ ಅವರು ಗಮನಾರ್ಹ ಪ್ರಮಾಣದ ಹಣ ಪಡೆಯುತ್ತಾರೆ.

48

ಎಂಡಾರ್ಸ್‌ಮೆಂಟ್ ಶುಲ್ಕವಾಗಿ 10ರಿಂದ 12 ಕೋಟಿ ರೂ. ವಿಧಿಸುತ್ತಾರೆ ಎಂದು ತಿಳಿದುಬಂದಿದೆ. ಸಾಮಾಜಿಕ ಮಾಧ್ಯಮದಲ್ಲಿ ಒಂದು ಪ್ರಚಾರದ ಪೋಸ್ಟ್‌ಗೆ ಅವರು 4ರಿಂದ 5 ಕೋಟಿ ರೂ. ಪಡೆಯುತ್ತಾರೆ.
 

58

HRX ಹೆಸರಿನ ಸ್ವಂತ ಕ್ರೀಡಾ ಉಡುಪುಗಳ ಕಂಪನಿಯನ್ನು ಹೊಂದಿರುವ ಕೆಲವೇ ಕೆಲವು ನಟರಲ್ಲಿ ಹೃತಿಕ್ ಕೂಡ ಒಬ್ಬರು. ಈ ಕಂಪನಿಯ ಬ್ರಾಂಡ್ ಮೌಲ್ಯ 200 ಕೋಟಿ ರೂ. ನಟ ರಿಯಲ್ ಎಸ್ಟೇಟ್‌ನಲ್ಲಿಯೂ ಸಾಕಷ್ಟು ಹೂಡಿಕೆ ಮಾಡಿದ್ದಾರೆ.

68

ಜುಹುದಲ್ಲಿ ಡ್ಯೂಪ್ಲೆಕ್ಸ್ ಪೆಂಟ್ ಹೌಸ್ ಹೊಂದಿದ್ದು, 97.50 ಕೋಟಿ ರೂ. ಬೆಲೆ ಬಾಳುತ್ತದೆ. ಜುಹು ವರ್ಸೋವಾ ಲಿಂಕ್ ರಸ್ತೆಯಲ್ಲಿರುವ ಮನೆ 67.5 ಕೋಟಿ ರೂ. ಮೌಲ್ಯದ್ದಾಗಿದೆ.

78

ಸೈಫ್ ಅಲಿ ಖಾನ್ ಜೊತೆಗಿನ 'ವಿಕ್ರಮ್ ವೇದಾ; ಅವರ ಕೊನೆಯ ಬಿಡುಗಡೆಯಾದ ಸೂಪರ್‌ ಹಿಟ್ ಸಿನಿಮಾವಾಗಿದೆ.. ಹೃತಿಕ್‌, ಐಷಾರಾಮಿ ಕಾರುಗಳ ಬೃಹತ್‌ ಸಂಗ್ರಹವನ್ನು ಸಹ ಹೊಂದಿದ್ದಾರೆ. ಹೃತಿಕ್ ಕಾರ್‌ ಕಲೆಕ್ಷನ್‌ನಲ್ಲಿ BMW,ಮುಸ್ತಾಂಗ್, ಮರ್ಸಿಡಿಸ್ ಮತ್ತು ಇತರ ಜಾಗತಿಕ ಬ್ರ್ಯಾಂಡ್‌ಗಳ ಇತ್ತೀಚಿನ ಕಾರುಗಳು ಸೇರಿವೆ. ಹೃತಿಕ್ ಸ್ವಂತ ಡಿಸೈನರ್ ವ್ಯಾನಿಟಿ ವ್ಯಾನ್ ಹೊಂದಿದ್ದು, ಇದರ ಬೆಲೆ ಭರ್ತಿ 3 ಕೋಟಿ ರೂ.

88

ಪ್ರಸ್ತುತ, ಹೃತಿಕ್ ರೋಷನ್‌ ಸಿದ್ಧಾರ್ಥ್ ಆನಂದ್ ಅವರ ಆಕ್ಷನ್ ಥ್ರಿಲ್ಲರ್ 'ಫೈಟರ್‌'ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ಅವರು ಮೊದಲ ಬಾರಿಗೆ ದೀಪಿಕಾ ಪಡುಕೋಣೆ ಎದುರು ಜೋಡಿಯಾಗಿದ್ದಾರೆ. ಚಿತ್ರವು ಮುಂದಿನ ವರ್ಷ ಜನವರಿ 25ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. 

Read more Photos on
click me!

Recommended Stories