ಬ್ಲ್ಯಾಕ್‌ ಡ್ರೆಸ್‌ನಲ್ಲಿ ಹಾಟ್‌ ಪೋಸ್‌ ಕೊಟ್ಟ ಹೀರೋಯಿನ್ಸ್: ಫ್ಯಾನ್ಸ್‌ಗಳಿಗೆ ಅತಿಹೆಚ್ಚು ಇಷ್ಟವಾದ ನಟಿ ಯಾರು!

First Published | Nov 21, 2023, 9:00 PM IST

ಬಾಲಿವುಡ್, ಕಾಲಿವುಡ್‌, ಟಾಲಿವುಡ್‌ ಹಾಗೂ ಸ್ಯಾಂಡಲ್‌ವುಡ್‌ ಸೇರಿದಂತೆ ಅನೇಕ ಸ್ಟಾರ್‌ ನಟಿಯರು ಬ್ಲ್ಯಾಕ್‌ ಡ್ರೆಸ್‌ ಧರಿಸಿ ಫೋಟೋ ಶೂಟ್‌ ಮಾಡಿಸಿ ತಮ್ಮ ಸಾಮಾಜಿಕ ಜಾಲತಾಣಗಳಿಗೆ ಹಂಚಿಕೊಳ್ಳುತ್ತಿದ್ದಾರೆ. ಕಪ್ಪು ಬಣ್ಣದ ಬಟ್ಟೆಗಳಲ್ಲಿ ನಟಿಯರು ಸುಂದರವಾಗಿ ಕಾಣಿಸಿಕೊಳ್ಳುತ್ತೇವೆಂದು ಹೀಗೆ ಮಾಡುತ್ತಿದ್ದಾರೆ. ಫ್ಯಾನ್ಸ್‌ ಕೂಡ ನಮಗೂ ಬ್ಲ್ಯಾಕ್‌ ಡ್ರೆಸ್‌ನಲ್ಲಿಯೇ ಚೆನ್ನಾಗಿ ಕಾಣಿಸ್ತೀರಿ ಎಂದು ಹೇಳಿದ್ದಾರೆ.

ನ್ಯಾಷನಲ್‌ ಕ್ರಶ್‌ ಎಂದೇ ಖ್ಯಾತಿಯಾಗಿರುವ ಕನ್ನಡದ ಕುವರಿ ರಶ್ಮಿಕಾ ಮಂದಣ್ಣ ಕೂಡ ಬ್ಲ್ಯಾಕ್‌ ಸೀರೆಯುಟ್ಟು ಹಾಟ್‌ ಪೋಟೋಶೂಟ್‌ ಮಾಡಿಸಿಕೊಂಡಿದ್ದಾಳೆ. ಅಭಿಮಾನಿಗಳು ಪೋಸ್‌ ಚೆನ್ನಾಗಿದೆ ನಿಮ್ಮ- ದೇವರಕೊಂಡ ಲವ್‌ ನಿಜಾನಾ ಎಂದು ಕೇಳುತ್ತಿದ್ದಾರೆ. 

ಇತ್ತೀಚೆಗೆ ತೆಲುಗು ಸಿನಿಮಾ ಕ್ಷೇತ್ರದಲ್ಲಿ ಭಾರಿ ಬೇಡಿಕೆ ಸೃಷ್ಟಿಸಿರುವ ಕನ್ನಡದ ನಟಿ ಶ್ರೀಲೀಲಾ ಅವರು ಕಪ್ಪು ಸೀರೆಯುಟ್ಟು ಹಾಟ್‌ ಆಗಿ ಪೋಸ್‌ ಕೊಟ್ಟು ಫೋಟೋಶೂಟ್‌ ಮಾಡಿಸಿಕೊಂಡಿದ್ದಾರೆ.

Tap to resize

ನಟಿ ಶ್ರೀಲೀಲಾಗೆ ತೆಲುಗು ಮಾತ್ರವಲ್ಲದೇ ತಮಿಳು ಹಾಗೂ ಇತರೆ ಭಾಷೆಗಳ ಸಿನಿಮಾಗೂ ಬೇಡಿಕೆ ಬಂದಿದೆ. ಕನ್ನಡದಲ್ಲಿ ಒಂದೆರಡು ಸಿನಿಮಾದಲ್ಲಿ ಕಾಣಿಸಿಕೊಂಡ ಶ್ರೀಲೀಲಾ ಇತ್ತ ಹೆಜ್ಜೆಯನ್ನೂ ಹಾಕುತ್ತಿಲ್ಲ.
 

ಶ್ರೀಲೀಲಾ ಆಗಮನಕ್ಕೂ ಮುನ್ನವೇ ಕಾಜಲ್, ರಶ್ಮಿಕಾ, ಸಮಂತಾ, ಪೂಜಾ ಮುಂತಾದ ನಾಯಕಿಯರು ಟಾಲಿವುಡ್‌ನಲ್ಲಿ ಮಿಂಚುತ್ತಿದ್ದರು.
 

ಬಾಲಿವುಡ್‌ ನಂಬರ್‌ ಒನ್‌ ನಟಿಯಾಗಿರುವ ದೀಪಿಕಾ ಪಡುಕೋಣೆ ಕೂಡ ಬ್ಲ್ಯಾಕ್ ಡ್ರೆಸ್‌ ಮೊರೆ ಹೋಗಿದ್ದಾರೆ. ಇತ್ತೀಚೆಗೆ ನಡೆದ ಬ್ರ್ಯಾಂಡ್‌ವೊಂದರ ಫೋಟೋಶೂಟ್‌ನಲ್ಲಿ ಕಪ್ಪು ಉಡುಪಿನಲ್ಲಿ ಮಿಂಚಿದ್ದಾರೆ.
 

ದಕ್ಷಿಣ ಭಾರತದ ಸುಂದರಿ ತಮನ್ನಾ ಭಾಟಿಯಾ ಬಾಲಿವುಡ್‌ಗೆ ಹೋದ ನಂತರ ಭಾರಿ ಕ್ರೇಜ್‌ ಸೃಷ್ಟಿಸಿದ್ದಾರೆ. ತಮನ್ನಾ ಮತ್ತು ವಿಜಯ್‌ ವರ್ಮಾ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಅವರೂ ಕೂಡ ಬ್ಲ್ಯಾಕ್‌  ಡ್ರೆಸ್‌ನಲ್ಲಿಯೇ ಹೆಚ್ಚಾಗಿ ಧರಿಸುತ್ತಿದ್ದಾರೆ.
 

ಭಾರತೀಯ ಕ್ರಿಕೆಟ್‌ ತಂಡದ ಸ್ಟಾರ್‌ ಆಟಗಾರ ವಿರಾಟ್ ಕೊಹ್ಲಿ ಪತ್ನಿ ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ ಕೂಡ ಬ್ಲ್ಯಾಕ್‌ ಡ್ರೆಸ್‌ನಲ್ಲಿ ಪೋಸ್‌ ಕೊಟ್ಟಿದ್ದು, ಈಗ ಮುನ್ನೆಲೆಗೆ ಬಂದಿದೆ.
 

ಕರೀನಾ ಕಪೂರ್‌ ಕೂಡ ದೇಶ ವಿದೇಶಗಳಲ್ಲಿ ನಡೆಯುವ ಸಿನಿಮಾ ಸಂಬಂಧಿತ ಕಾರ್ಯಕ್ರಮಗಳಲ್ಲಿ ಬ್ಲ್ಯಾಕ್ ಡ್ರೆಸ್‌ಗಳನ್ನು ಧರಿಸುವುದಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ.
 

ಬಾಲಿವುಡ್ ಮತ್ತೊಬ್ಬ ಹಾಟ್‌ ಸುಂದರಿ ಕತ್ರಿನಾ ಕೈಫ್‌ ಕೂಡ ಅನೇಕ ಸಮಾರಂಭಗಳಲ್ಲಿ ಕಪ್ಪು ಬಟ್ಟೆ ಧರಿಸಿ ಪೋಸ್‌ ಕೊಟ್ಟಿದ್ದಾರೆ. ಇದಕ್ಕೆ ಅಭಿಮಾನಿಗಳು ಕೂಡ ಹೊಗಳಿಕೆ ನೀಡಿದ್ದಾರೆ.
 

ಮತ್ತೊಬ್ಬ ಬಾಲಿವುಡ್‌ ನಟಿ ಆಲಿಯಾ ಭಟ್‌ ಕೂಡ ಅನೇಕ ಕಾರ್ಯಕ್ರಮಗಳಿಗೆ ಕಪ್ಪು ಬಣ್ಣದ ಸೀರೆ ಹಾಗೂ ಡ್ರೆಸ್‌ಗಳನ್ನು ಧರಿಸಿಕೊಂಡು ಹೋಗುತ್ತಿದ್ದಾರೆ.
 

Latest Videos

click me!