Hansika Motwani: ಡಯಟ್ ಮಾಡದೇ ಹನ್ಸಿಕಾ ಮೋಟ್ವಾನಿ ಇಷ್ಟು ಫಿಟ್ ಆಗಿರೋದು ಹೇಗೆ? ಸೀಕ್ರೆಟ್ ಹೊರಬಿತ್ತು!

Published : Jan 29, 2026, 12:37 PM IST

ನಟಿ ಹನ್ಸಿಕಾ ಮೋಟ್ವಾನಿ ಹಲವಾರು ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಆದರೆ, ನಟಿ ತಾನು ಯಾವುದೇ ಡಯಟ್ ಅನುಸರಿಸುವುದಿಲ್ಲ ಎಂದು ಹೇಳುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದರು. ಇತ್ತೀಚೆಗೆ, ಬಾಲಿವುಡ್ ನಿರ್ದೇಶಕಿ ಫರಾ ಖಾನ್ ಹನ್ಸಿಕಾ ಅವರ ಮನೆಗೆ ಭೇಟಿ ನೀಡಿ ಅವರನ್ನು ಸಂದರ್ಶಿಸಿದರು. 

PREV
19

Hansika Motwani Diet Tips : ಒಂದು ಕಾಲದ ಸ್ಟಾರ್ ನಟಿ ನಟಿ ಹನ್ಸಿಕಾ 'ನಾನು ಡಯಟ್ ಮಾಡುವುದಿಲ್ಲ' ಎಂದು ಹೇಳಿಕೊಂಡಿದ್ದಾರೆ. ಆದರೆ, ಅವರ ಫಿಟ್‌ನೆಸ್ ಕಣ್ಣಿಗೆ ಕಾಣಿಸುತ್ತಿದೆ. ಹಾಗಿದ್ರೆ, ತೂಕ ಇಳಿಸಿಕೊಳ್ಳುವುದು ಹೇಗೆ ಸಾಧ್ಯವಾಯಿತು ಎಂಬುದರ ಬಗ್ಗೆಯೂ ಅವರು ಮಾತನಾಡಿದ್ದಾರೆ. ಜೊತೆಗೆ, ಅಭಿಮಾನಿಗಳಿಗೆ ಕೆಲವೊಂದಿಷ್ಟು ಸಲಹೆಗಳನ್ನು ಸಹ ನೀಡಿದ್ದಾರೆ.

29

ಹಲವು ನಟಿಯರು ಸ್ವಲ್ಪ ತೂಕ ಜಾಸ್ತಿ ಹೊಂದಿರುವುದು ಇತ್ತಿಚೆಗೆ ಸಾಮಾನ್ಯ ಎಂಬಂತಾಗಿದೆ.ಆದರೂ ಹಾಗೂ ಗ್ಲಾಮರ್ ದೃಷ್ಟಿಯಿಂದ ಅಗತ್ಯಕ್ಕಿಂತ ಹೆಚ್ಚು ತೂಕ ಹೊಂದಿರುವುದು ಅಪಾಯ ಎಂಬ ಅಭಿಪ್ರಾಯ ಹಲವರಲ್ಲಿದೆ. ಕೆಲವರು ಏನೋ ಲೆಕ್ಕಾಚಾರದ ಮೂಲಕ ಸ್ವಲ್ಪ ಸಣ್ಣ ಆಗಿದ್ದಾರೆ. ಈ ಪೈಕಿ ನಟಿ ಹನ್ಸಿಕಾ ಮೋಟ್ವಾನಿಯೂ ಒಬ್ಬರು.

39

ನಟಿ ಹನ್ಸಿಕಾ ಮೋಟ್ವಾನಿ ಹಲವಾರು ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಆದರೆ, ನಟಿ ತಾನು ಯಾವುದೇ ಡಯಟ್ ಅನುಸರಿಸುವುದಿಲ್ಲ ಎಂದು ಹೇಳುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದರು. ಇತ್ತೀಚೆಗೆ, ಬಾಲಿವುಡ್ ನಿರ್ದೇಶಕಿ ಫರಾ ಖಾನ್ ಹನ್ಸಿಕಾ ಅವರ ಮನೆಗೆ ಭೇಟಿ ನೀಡಿ ಅವರನ್ನು ಸಂದರ್ಶಿಸಿದರು. ಆಗ ಅದೊಂದು ಸೀಕ್ರೆಟ್ ರಿವೀಲ್ ಆಯ್ತು.

ಹನ್ಸಿಕಾ ಮನೆಗೆ ಹೋಗಿದ್ದ ಫರಾ ಖಾನ್, ಆಹಾರದ ವಿಷಯ ಬಂದಾಗ ತಮಾಷೆಯಾಗಿ, "ನಾನು ನಿಮಗೆ ಸ್ವಲ್ಪ ಆಹಾರವನ್ನು ತರಬೇಕು ಅಂತ ಭಾವಿಸಿದ್ದೆ. ಆದರೆ ಅವರು ಡಯಟ್‌ನಲ್ಲಿದ್ದಾರೆ ಅಂತ ಸುಮ್ಮನಾದೆ' ಎಂದರು. ಇದಕ್ಕೆ ಹನ್ಸಿಕಾ, "ನಾನು ಡಯಟ್‌ನಲ್ಲಿಲ್ಲ ಮೇಡಂ" ಎಂದು ಹೇಳಿದರು.

49

ಅದನ್ನು ಕೇಳಿ, ಫರಾ ಖಾನ್ ಸೇರಿದಂತೆ ಹಲವರು 'ಆಹಾರ ಕ್ರಮ ಅನುಸರಿಸದೆ ತೂಕ ಇಳಿಸಿಕೊಳ್ಳಲು ಮತ್ತು ದೀರ್ಘಕಾಲದವರೆಗೆ ಅದನ್ನು ಕಾಪಾಡಿಕೊಳ್ಳಲು ಹೇಗೆ ಸಾಧ್ಯ?" ಎನ್ನುತ್ತಿದ್ದಾರೆ. ಫರಾ ಖಾನ್ ಕೂಡ ಹನ್ಸಿಕಾ ಬಳಿ ಇದೇ ವಿಷಯವನ್ನು ಕೇಳಿದರು. ಅದಕ್ಕೆ ಹನ್ಸಿಕಾ ಹೆಮ್ಮೆಯಿಂದ "ನಾನು ಪೈಲೇಟ್ಸ್ ಹುಡುಗಿ" ಎಂದು ಉತ್ತರಿಸಿದ್ದಾರೆ.

59

ಹಾಗಿದ್ದರೆ ಪೈಲೇಟ್ಸ್ ಎಂದರೇನು?

ಪೈಲೇಟ್ಸ್ ಎನ್ನುವುದು ಶಕ್ತಿ, ನಮ್ಯತೆ ಮತ್ತು ಸಮತೋಲನವನ್ನು ಸುಧಾರಿಸಲು ವಿನ್ಯಾಸಗೊಳಿಸಲಾದ ವ್ಯಾಯಾಮ. ಇದು ಪ್ರಾಥಮಿಕವಾಗಿ ಕಿಬ್ಬೊಟ್ಟೆಯ, ಶ್ರೋಣಿಯ ಮತ್ತು ಬೆನ್ನಿನ ಸ್ನಾಯುಗಳನ್ನು ಬಲಪಡಿಸುವುದರ ಮೇಲೆ ಕೇಂದ್ರೀಕರಿಸುವ ವ್ಯಾಯಾಮ. ಇದು ಕೀಲುಗಳ ಮೇಲೆ ಹೆಚ್ಚಿನ ಒತ್ತಡವನ್ನು ಬೀರದೆ ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಪೈಲೇಟ್ಸ್ ಸುಸ್ಥಿರ ದೀರ್ಘಕಾಲೀನ ವ್ಯಾಯಾಮ ಕಾರ್ಯಕ್ರಮವಾಗಿದೆ.

69

ನಟಿ ಹನ್ಸಿಕಾ ತಮ್ಮ ಹಿಂದಿನ ಸಂದರ್ಶನಗಳಲ್ಲಿ 'ತೂಕ ತರಬೇತಿ ತನಗೆ ಒಂದು ಹೋರಾಟ, ಇಡೀ ದೇಹವನ್ನು ಚಲಿಸುವ ವ್ಯಾಯಾಮಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತೇನೆ' ಎಂದಿದ್ದರು. ಅಲ್ಲದೆ, ಪ್ರತಿದಿನ ಈಜು ಮತ್ತು ನೃತ್ಯದಂತಹ ವ್ಯಾಯಾಮಗಳನ್ನು ಮಾಡುತ್ತೇನೆ, ಯೋಗ ಮಾಡುವುದನ್ನು ನಿಜವಾಗಿಯೂ ಇಷ್ಟಪಡುತ್ತೇನೆ' ಎಂದು ಹನ್ಸಿಕಾ ಹೇಳಿಕೊಂಡಿದ್ದರು.

79

ನಟಿ ಹನ್ಸಿಕಾ 'ನಮ್ಮ ದೇಹವು ನಮಗೆ ಅನಗತ್ಯವಿರುವ ಕ್ಯಾಲೊರಿಗಳಿಗಿಂತ ಹೆಚ್ಚು ಕೊಬ್ಬನ್ನು ಸಂಗ್ರಹಿಸಿದಾಗ, ದೇಹವು ದಪ್ಪವಾಗಿ ಕಾಣುತ್ತದೆ. ದೇಹದಲ್ಲಿ ಸಂಗ್ರಹವಾದ ಹೆಚ್ಚುವರಿ ಕೊಬ್ಬನ್ನು ಸುಡುವ ಮೂಲಕ ನಾವು ತೂಕವನ್ನು ಕಳೆದುಕೊಳ್ಳಬಹುದು. ಆಹಾರ ಪದ್ಧತಿಯ ಮೂಲಕ ನಾವು ನಮ್ಮ ದೇಹದ ತೂಕವನ್ನು ನಿಯಂತ್ರಣದಲ್ಲಿ ಕೂಡ ಇಟ್ಟುಕೊಳ್ಳಬಹುದು. ಹಣ್ಣುಗಳು, ತರಕಾರಿಗಳು, ಧಾನ್ಯದ ಆಹಾರಗಳು, ಕಡಿಮೆ ಕೊಬ್ಬಿನ ಡೈರಿ ಉತ್ಪನ್ನಗಳು ಮತ್ತು ಪ್ರೋಟೀನ್-ಭರಿತ ಆಹಾರಗಳು ಆರೋಗ್ಯಕರ ಜೀವನಕ್ಕೆ ಅನುಕೂಲಕರವಾಗಿವೆ. ಅವು ತೂಕ ಇಳಿಸುವ ಸಾಮರ್ಥ್ಯವನ್ನು ಹೊಂದಿವೆ' ಎಂದು ಹೇಳಿದ್ದರು.

89

ನಟಿ ಹನ್ಸಿಕಾ ಹೇಳುವ ಪ್ರಕಾರ, ತೂಕ ಇಳಿಸಿಕೊಳ್ಳುವುದರ ಜೊತೆಗೆ ತೂಕವನ್ನು ಕಾಪಾಡಿಕೊಳ್ಳುವುದು ಸಹ ಮುಖ್ಯವಾಗಿದೆ. ಹೀಗಾಗಿ ಅವರು ಪ್ರಸ್ತುತ ತಮ್ಮ ತೂಕವನ್ನು ನಿರ್ವಹಿಸುತ್ತಿದ್ದಾರೆ. ಇದಕ್ಕಾಗಿ ಸ್ಟ್ರಾಂಗ್ ಆಹಾರ ಪದ್ಧತಿಯ ಅಗತ್ಯವಿಲ್ಲ. ಅವರಿಗೆ ವಿಭಿನ್ನವಾದ ದೈನಂದಿನ ವ್ಯಾಯಾಮದ ಅಗತ್ಯವಿದೆ. ಅದೀಗ ಪೈಲೇಟ್ಸ್‌ಗ ಎಂಬ ಸೀಕ್ರೆಟ್ ಬಯಲಾಗಿದೆ.

99

ಅಂದಹಾಗೆ, ಹನ್ಸಿಕಾ ಅವರ ಮುಂಬರುವ ಚಿತ್ರಕ್ಕೆ 'ಗಾಂಧಾರಿ' ಎಂದು ಹೆಸರಿಡಲಾಗಿದೆ. ಈ ಚಿತ್ರದಲ್ಲಿ ಅವರು ದ್ವಿಪಾತ್ರದಲ್ಲಿ ನಟಿಸಿದ್ದಾರೆ, ಈ ಚಿತ್ರವನ್ನು ಆರ್. ಕಣ್ಣನ್ ನಿರ್ಮಿಸಿ ನಿರ್ದೇಶಿಸಿದ್ದಾರೆ. ಮೆಟ್ರೋ ಸಿರೀಶ್ ಸೇರಿದಂತೆ ಹಲವರು ತಾರಾಗಣದಲ್ಲಿದ್ದಾರೆ. ಚಿತ್ರಕಥೆಯನ್ನು ನಿರ್ಮಾಪಕ ಧನಂಜಯನ್ ಬರೆದಿದ್ದಾರೆ. ಈ ಚಿತ್ರವು ಭಾವನಾತ್ಮಕ ಹಾರರ್ ಥ್ರಿಲ್ಲರ್ ಆಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories