'ತುಂಡು ಬಟ್ಟೆ ಧರಿಸಲ್ಲ' ಎಂದಿರುವ ನಟಿ ಸಾಯಿ ಪಲ್ಲವಿ ಮಾತಿನ ಹಿಂದೆ 'ಈ ಒಂದು ಸೀಕ್ರೆಟ್' ಇದೆ..!

Published : Jan 28, 2026, 12:51 PM IST

ಬಣ್ಣದಲೋಕ, ಗ್ಲಾಮರಸ್ ಜಗತ್ತಿನಲ್ಲಿ ಹಲವು ನಟಿಮಣಿಯರು ತುಂಡುಡುಗೆ ತೊಟ್ಟು ಮಿಂಚುವುದು ಸಾಮಾನ್ಯ. ಆದರೆ, ಸಾಯಿ ಪಲ್ಲವಿ ತಮ್ಮ ದೇಹದ ಭಾಗಗಳನ್ನು ಪ್ರದರ್ಶಿಸುವಂತೆ ಎಂದೂ ತುಂಡು ಬಟ್ಟೆ (Short Dress) ಬಟ್ಟೆಗಳನ್ನು ಧರಿಸುವುದಿಲ್ಲ. ಇದರ ಹಿಂದೆ ಒಂದು ದೊಡ್ಡ ಕಾರಣವಿದೆ!

PREV
18

Sai Pallavi: ಮಾಲಿವುಡ್ ಸಿನಿರಂಗದಲ್ಲಿ (Mollywood) ಮಲರ್, ಟಾಲಿವುಡ್ ನಲ್ಲಿ ಬುಜ್ಜಿ ತಲ್ಲಿ, ಕಾಲಿವುಡ್ ನಲ್ಲಿ ಆನಂದಿ, ನಮ್ಮ ಸ್ಯಾಂಡ್‌ವುಡ್ ನಲ್ಲಿ ಗಾರ್ಗಿ, ಬಾಲಿವುಡ್ ನಲ್ಲಿ ಸೀತೆ ಹೀಗೆ ನಟಿ ಸಾಯಿ ಪಲ್ಲವಿ ಅವರನ್ನು ಅಭಿಮಾನಿಗಳು ಅನೇಕ ಹೆಸರಿನಿಂದ ಗುರುತಿಸುತ್ತಾರೆ. ಸಹಜ ಸುಂದರಿ, ಕಡಿಮೆ ಮೇಕಪ್ ಚೆಲುವೆ ಎಂದರೆ ಅದು ಸಾಯಿ ಪಲ್ಲವಿ ಅಂತಾರೆ ಫ್ಯಾನ್ಸ್‌..!

28

ಹೌದು, ನಟಿ ಸಾಯಿ ಪಾಲ್ಲವಿ ಅವರು ಇತರೆ ನಟಿಯರಿಗೆ ಹೋಲಿಸಿದ್ರೆ ತುಂಬಾ ಕಡಿಮೆ ಮೇಕಪ್ ಮಾಡುತ್ತಾರೆ. ಅದರಲ್ಲೂ ಅವರು ಪಾತ್ರಕ್ಕೆ ಅತ್ಯಗತ್ಯ ಎಂದಿಲ್ಲವಾದೆರ ಯಾವುದೇ ಕಾರಣಕ್ಕೂ ಕಡಿಮೆ ಬಟ್ಟೆ ಧರಿಸುವುದಿಲ್ಲ.

48

ತುಂಡು ಬಟ್ಟೆ (Short dress) ಧರಿಸುವುದಿಲ್ಲ ಈ ಕಾರಣಕ್ಕೇ ನಟಿ ಸಾಯಿ ಹಲವರಿಗೆ ಇಷ್ಟವಾಗ್ತಾರೆ. ಹೌದು, ಬಣ್ಣದಲೋಕ, ಗ್ಲಾಮರಸ್ ಜಗತ್ತಿನಲ್ಲಿ ಹಲವು ನಟಿಮಣಿಯರು ತುಂಡುಡುಗೆ ತೊಟ್ಟು ಮಿಂಚುವುದು ಸಾಮಾನ್ಯ ಎಂಬಂತಿದೆ. ಆದರೆ, ಸಾಯಿ ಪಲ್ಲವಿ ತಮ್ಮ ದೇಹದ ಭಾಗಗಳನ್ನು ಪ್ರದರ್ಶಿಸುವಂತೆ ಎಂದೂ ಬಟ್ಟೆಗಳನ್ನು ಧರಿಸುವುದಿಲ್ಲ. ಇದರ ಹಿಂದೆ ಒಂದು ದೊಡ್ಡ ಕಾರಣವಿದೆ ಎಂದು ಸ್ವತಃ ನಟಿ ಹೇಳಿಕೊಂಡಿದ್ದಾರೆ.

58

ನಟಿ ಸಾಯಿ ಪಲ್ಲವಿ ಅವರು ತಮ್ಮ ಕಾಲೇಜು ದಿನಗಳಲ್ಲಿ ನಡೆದ ಆ ಒಂದು ಘಟನೆ ತಮ್ಮ ಈ ನಿರ್ಧಾರಕ್ಕೆ ಕಾರಣ ಎನ್ನುತ್ತಾರೆ. ಕಾಲೇಜಿನಲ್ಲಿದ್ದಾಗ ಸಾಯಿ ಪಲ್ಲವಿ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಆಗ ಸ್ಲಿಟ್ ಡ್ರೆಸ್ ಧರಿಸಿದ್ದರು.

68

ಅವರ ಈ ನೃತ್ಯದ ವೀಡಿಯೊ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿತ್ತು. ಆದ್ರೆ ಈ ವೀಡಿಯೊಗೆ ಬಂದ ಕಾಮೆಂಟ್‌ಗಳನ್ನು ಸಾಯಿ ಪಲ್ಲವಿ ನೋಡಿದಾಗ ಅವರಿಗೆ ಶಾಕ್ ಆಯ್ತು. ಅದು ಅವರ ಮನಸ್ಸನ್ನು ಸಾಕಷ್ಟು ಡಿಸ್ಟರ್ಬ್ ಮಾಡಿತ್ತು ಎಂದು ಹೇಳಿಕೊಂಡಿದ್ದಾರೆ.

78

ಏಕೆ ಹಾಗಾಯ್ತು?

'ಕೆಲವು ಜನ ನನ್ನ ಪ್ರತಿಭೆಯನ್ನು ಗುರುತಿಸುವ ಬದಲು, ಕೇವಲ ನನ್ನ ದೇಹದ ಬಗ್ಗೆ ಆಸಕ್ತಿ ತೋರಿದ್ದರು, ಆ ಬಗ್ಗೆಯೆ ಕಾಮೆಂಟ್ ಮಾಡಿದ್ದರು' ಎಂದು ಸಾಯಿ ಪಲ್ಲವಿ ಹೇಳಿಕೊಂಡಿದ್ದಾರೆ. ಈ ಘಟನೆ ಸಾಯಿ ಪಲ್ಲವಿಗೆ ಅಪಾರ ನೋವು ತಂದಿತ್ತಂತೆ. ಹೀಗಾಗಿ, ಆ ದಿನದ ಬಳಿಕ 'ನಾನು ನನ್ನ ದೇಹ ಪ್ರದರ್ಶನ ಆಗುವಂತೆ ಬಟ್ಟೆ ಧರಿಸುವುದನ್ನು ಬಿಟ್ಟುಬಿಟ್ಟಿದ್ದೇನೆ' ಎಂದು ನಟಿ ಸಾಯಿ ಪಲ್ಲವಿ ತಮ್ಮ ಕಾಲೇಜು ದಿನಗಳ ಘಟನೆ ನೆನಪಿಸಿಕೊಮಡು ಹೇಳಿದ್ದಾರೆ.

88

ಅಂದಹಾಗೆ, ಸದ್ಯ ನಟಿ ಸಾಯಿ ಪಲ್ಲವಿ ಕೈನಲ್ಲಿ ಸಾಕಷ್ಟು ಸಿನಿಮಾಗಳಿವೆ. ಅದರಲ್ಲೂ ಮುಖ್ಯವಾಗಿ, ಕನ್ನಡದ ನಟ ರಾಕಿಂಗ್ ಸ್ಟಾರ್ ಯಶ್ ಹಾಗೂ ಬಾಲಿವುಡ್ ನಟ ರಣಬೀರ್ ಕಪೂರ್ ನಟನೆಯ 'ರಾಮಾಯಣ' ಚಿತ್ರದಲ್ಲಿ ಸೀತೆಯಾಗಿ ನಟಿ ಸಾಯಿ ಪಲ್ಲವಿ ಕಾಣಿಸಿಕೊಂಡಿದ್ದಾರೆ. ಹೀಗೆ, ಬಾಲಿವುಡ್ ಬಿಗ್ ಬಜೆಟ್ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ನಟಿಯಾಗಿ ಹೊರಹೊಮ್ಮಲಿದ್ದಾರೆ ಸಾಯಿ ಪಲ್ಲವಿ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories