Diabetes Month: 14 ವರ್ಷಕ್ಕೇ ರೋಗ, ಪ್ರಿಯಾಂಕ ಪತಿಯ ಮುಕ್ತ ಮಾತುಗಳು

First Published | Nov 18, 2021, 5:15 PM IST

ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಅವರ ಪತಿ ನಿಕ್ ಜೋನಸ್ ಅವರು 14ನೇ ವಯಸ್ಸಿಗೆ ಡಯಾಬಿಟಿಸ್ ಕಾಣಿಸಿಕೊಂಡ ಬಗ್ಗೆ ಮಾತನಾಡಿದ್ದಾರೆ. ಡಯಾಬಿಟಿಸ್ ಮಂತ್‌ನಲ್ಲಿ ನಿಕ್ ಮುಕ್ತ ಮಾತು

14 ವರ್ಷದಿಂದಲೇ ಟೈಪ್ 1 ಡಯಾಬಿಟಿಸ್‌ನಿಂದ ಬಳಲುತ್ತಿರುವ ಅಮೆರಿಕನ್ ಗಾಯಕ ನಿಕ್ ಜೋನಸ್ ಅವರು  ಆ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವಾಗ ಎಂದೂ ಹಿಂಜರಿಕೆ ಮಾಡಿಲ್ಲ. ನಟ ಹಾಗೂ ಗಾಯಕನಾಗಿರುವ ನಿಕ್ ತಮ್ಮ ಅರೋಗ್ಯದ ಕುರಿತು ಹೆಚ್ಚು ಕಾಳಜಿ ವಹಿಸುತ್ತಾರೆ.

ನಟ ವ್ಯಾಯಾಮ ಮಾಡುವುದು ಹಾಗೂ ಸರಿಯಾದ ಆಹಾರ ತಿನ್ನುವುದನ್ನು ಖಚಿತಪಡಿಸಿಕೊಳ್ಳುತ್ತಾರೆ. ಇತ್ತೀಚೆಗೆ ನಟ ಡಯಾಬಿಟಿಸ್ ಮಂತ್‌ ಕುರಿತು ತಮ್ಮ ಕೆಲವು ಯೋಚನೆಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

Tap to resize

ನಟ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಶೇರ್ ಮಾಡಿ ತಮ್ಮದೊಂದು ಸೆಲ್ಫಿ ಹಾಗು ಅದರೊಂದಿಗೆ ಒಂದು ನೋಟ್ ಶೇರ್ ಮಾಡಿದ್ದಾರೆ. ಇದರಲ್ಲಿ ಡಯಾಬಿಟಿಸ್ ಚಿಕಿತ್ಸೆ ಬಗ್ಗೆ ಅವರು ಮುಕ್ತವಾಗಿ ಮಾತನಾಡಿದ್ದಾರೆ.

ಗಾಯಕ ನಿಕ್ ಜೋನಾಸ್ ಪೋಸ್ಟ್‌ನಲ್ಲಿ, ಅವರು ಕೇವಲ ಹದಿಹರೆಯದವರಾಗಿದ್ದಾಗ ಟೈಪ್ 1 ಡಯಾಬಿಟಿಸ್ ರೋಗಕ್ಕೆ ಒಳಗಾದ ಬಗ್ಗೆ ಮಾತನಾಡಿದ್ದಾರೆ. ನಿಕ್ ಈಗ 29ವರ್ಷದವರು. ಅವರು ಮಧುಮೇಹ ಪತ್ತೆಯಾದಾಗ 13 ವರ್ಷ ವಯಸ್ಸಿನವರಾಗಿದ್ದರು. ಅವರು ಈಗ 16 ವರ್ಷಗಳಿಂದ ಹೋರಾಡುತ್ತಿದ್ದಾರೆ.

ನಾನು ಹದಿಮೂರು ವರ್ಷ ವಯಸ್ಸಿನವನಾಗಿದ್ದೆ. ನನ್ನ ಕರುಳಿನಲ್ಲಿ ಏನೋ ಸರಿ ಇಲ್ಲ ಎಂದು ನನಗೆ ತಿಳಿದಿತ್ತು. ಹಾಗಾಗಿ ನಾನು ನನ್ನ ಹೆತ್ತವರ ಬಳಿಗೆ ಹೋಗಿ ನಾನು ವೈದ್ಯರನ್ನು ನೋಡಬೇಕಾಗಿದೆ ಎಂದು ಹೇಳಿದೆ. ನನ್ನ ರೋಗಲಕ್ಷಣಗಳನ್ನು ಪರಿಶೀಲಿಸಿದ ನಂತರ ವೈದ್ಯರು ನನಗೆ ಟೈಪ್ 1 ಮಧುಮೇಹವಿದೆ ಎಂದು ತಿಳಿಸಿದರು.

ನಾನು ನೊಂದಿದ್ದೆ. ಭಯಭೀತನಾಗಿದ್ದೆ. ಇದರರ್ಥ ಜಗತ್ತನ್ನು ಸುತ್ತುವ ಸಂಗೀತವನ್ನು ನುಡಿಸುವ ನನ್ನ ಕನಸು ಕೊನೆಗೊಳ್ಳಬೇಕೇ? ಎಂದೆನಿಸಿತ್ತು ಎಂದಿದ್ದಾರೆ

ಪ್ರಸ್ತುತ ಲಂಡನ್‌ನಲ್ಲಿರುವ ನಟಿ ಪ್ರಿಯಾಂಕಾ ಚೋಪ್ರಾ ಅವರು ತಮ್ಮ ಪತಿಯ ಪೋಸ್ಟ್‌ಗೆ ಹೃದಯ-ಕಣ್ಣು ಮತ್ತು ಚಪ್ಪಾಳೆ ತಟ್ಟುವ ಎಮೋಜಿಯೊಂದಿಗೆ ಪ್ರತಿಕ್ರಿಯಿಸಿದ್ದಾರೆ. ನಿಕ್ ಅವರ ತಂದೆ ಪೌಲ್ ಕೆವಿನ್ ಜೊನಾಸ್ ಪ್ರತಿಕ್ರಿಯಿಸಿದ್ದಾರೆ. ನಾವು ಆ ದಿನವನ್ನು ಎಂದಿಗೂ ಮರೆಯುವುದಿಲ್ಲ. ನೀವು ನಮಗೆಲ್ಲರಿಗೂ ಸ್ಫೂರ್ತಿ ನೀಡುತ್ತೀರಿ ಎಂದಿದ್ದಾರೆ.

2018 ರಲ್ಲಿ, ನಿಕ್ ಜೋನಾಸ್ ಇದೇ ರೀತಿಯ ಪೋಸ್ಟ್ ಅನ್ನು ಹಂಚಿಕೊಂಡಿದ್ದರು, ಅದರಲ್ಲಿ ಅವರು ತಮ್ಮ ಮಧುಮೇಹ ರೋಗನಿರ್ಣಯದ ಬಗ್ಗೆ ಮಾತನಾಡಿದರು

Latest Videos

click me!