ಒಟ್ಟಿಗೆ ಇಬ್ಬರ ಜೊತೆ ಡೇಟ್ ಮಾಡ್ಬೇಡ: ಮಗಳಿಗೆ ಗೌರಿ ಖಾನ್ ಕಿವಿಮಾತು, ಮಗನಿಗಿಲ್ಲ ಯಾವುದೇ ಕಂಡೀಷನ್!

First Published | Aug 5, 2024, 5:06 PM IST

ಬಾಲಿವುಡ್ ಕಿಂಗ್ ಖಾನ್ ಶಾರೂಖ್ ಮಡದಿ ಗೌರಿ ಖಾನ್ ತಮ್ಮ ಮಕ್ಕಳಿಗೆ ಹೇಳಿರುವ ಕಿವಿಮಾತಿನ ವಿಡಿಯೋ ಕ್ಲಿಪ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 

ಶಾರೂಖ್ ಖಾನ್ -ಗೌರಿ ಖಾನ್ ದಂಪತಿಗೆ ಮೂರು ಮಕ್ಕಳು. ಮೂವರಲ್ಲಿ ಆರ್ಯನ್ ಮತ್ತು ಸುಹಾನ್ ಹದಿಹರೆಯಕ್ಕೆ ಬಂದಿದ್ದು, ಇಬ್ಬರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಗೌರಿ ಖಾನ್ ಮಕ್ಕಳಿಗೆ ನೀಡಿದ ಸಲಹೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಈ ಹಿಂದೆ ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿಥ್ ಕರಣ್ ಶೋದಲ್ಲಿ ಗೌರಿ ಖಾನ್ ಭಾಗಿಯಾಗಿದ್ದರು. ಈ ವೇಳೆ ಮಕ್ಕಳಿಗೆ ಯಾವ ರೀತಿಯ ರಿಲೇಶನ್‌ಶಿಪ್ ಅಡ್ವೈಸ್ ಕೊಡುತ್ತೀರಿ ಎಂದು ಕರಣ್ ಕೇಳಿದ್ದರು.

Tap to resize

ಅಂದು ಗೌರಿ ಖಾನ್ ನೀಡಿದ ಉತ್ತರದ ಕ್ಲಿಪ್ ವೈರಲ್ ಆಗ್ತಿದೆ. ಈ ವಿಡಿಯೋಗೆ ನೀವು ಟಿಪಿಕಲ್ ಮದರ್, ಹೀಗಾಗಿ ನಿಮ್ಮ ಮಗ ಹಾಳಾಗಿರೋದು ಎಂದು ಕಮೆಂಟ್ ಮಾಡುತ್ತಿದ್ದಾರೆ. ಹಾಗಾದ್ರೆ ಗೌರಿ ಖಾನ್ ಹೇಳಿದ ಸಲಹೆ ಏನು?

shah rukh khan

ಒಂದೇ ಸಮಯದಲ್ಲಿ ಇಬ್ಬರ ಜೊತೆ ಡೇಟ್ ಮಾಡಬೇಡ ಎಂದು ಮಗಳು ಸುಹಾನಾಗೆ ಗೌರಿ ಖಾನ್ ರಿಲೇಶನ್‌ಶಿಪ್ ಅಡ್ವೈಸ್ ನೀಡಿದ್ದಾರೆ. ಆದ್ರೆ ಮಗ ಆರ್ಯನ್‌ಗೆ ಮಾತ್ರ ಯಾವುದೇ ಕಂಡಿಷನ್ ಹಾಕಿರೋದು ಅಚ್ಚರಿಯನ್ನುಂಟು ಮಾಡಿದ್ದಾರೆ.

ಮಗ ಆರ್ಯನ್‌ಗೆ ನೀನು ಎಷ್ಟು ಬೇಕಾದಷ್ಟು ಯುವತಿಯರ ಜೊತೆ ಡೇಟ್ ಮಾಡು. ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಎಲ್ಲಿಯವರೆಗೆ ಅಂದ್ರೆ ನೀನು ಮದುವೆಯ ನಿರ್ಧಾರಕ್ಕೆ ಬರೋವರೆಗೆ. ಒಮ್ಮೆ ಮದುವೆಯಾದ್ಮೇಲೆ ಎಲ್ಲದಕ್ಕೂ ಫುಲ್ ಸ್ಟಾಪ್ ಅಂತ ಹೇಳಿದ್ದಾರೆ.

ಶಾರೂಕ್ ಖಾನ್ ಮೂವರು ಮಕ್ಕಳಲ್ಲಿ ಸುಹಾನಾ ಬಾಲಿವುಡ್ ಅಂಗಳಕ್ಕೆ ಪಾದಾರ್ಪಣೆ ಮಾಡಿದ್ದಾರೆ. ದಿ ಆರ್ಚಿಸ್ ಸಿನಿಮಾದಲ್ಲಿ ಸುಹಾನಾ ನಟಿಸಿದ್ದರು. ಇದರ ಹೊರತಾಗಿಯೂ ಕಿರುಚಿತ್ರಗಳಲ್ಲಿ ಸುಹಾನಾ ನಟಿಸಿದ್ದಾರೆ.

shah rukh khan

ಇನ್ನು ಆರ್ಯನ್ ಖಾನ್ ಜೂನಿಯರ್ ಶಾರೂಖ್‌ ನಂತೆ ಕಾಣುತ್ತಾರೆ ಎಂದು ಅಭಿಮಾನಿಗಳು ಹೇಳುತ್ತಾರೆ.  ಆರ್ಯನ್ ಖಾನ್ ಜಿಮ್‌ನಿಂದ ಹೊರ ಬರುವ ಫೋಟೋ ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಮತ್ತೋರ್ವ ಮಗ ಅಬ್ರಾಹಂ ಚಿಕ್ಕವನಿದ್ದಾನೆ.

Latest Videos

click me!