ಅದಕ್ಕೆ ಕಾರಣ ಕೊಡುತ್ತ ನಿಕ್ ಜೊನಾಸ್ ಅವರು 'ನಾನು ಹಾಗು ಪ್ರಿಯಾಂಕಾ ಇಬ್ಬರೂ ನಮ್ಮ ವೆಡ್ಡಿಂಗ್ ಸಲುವಾಗಿ ಬಹಳಷ್ಟನ್ನು ಖರ್ಚು ಮಾಡಿದ್ದೇವೆ. ಆ ಬಗ್ಗೆ ನನಗೆ ರೀಗ್ರೆಟ್ ಇದೆ ಎಂದಿದ್ದಾರೆ. ಅತಿಯಾಗಿ ಮಾಡಿರುವ ಖರ್ಚು ಈಗ ಇದ್ದಿದ್ದರೆ ಸಾಕಷ್ಟು ಸಹಾಯ ಮಾಡುತ್ತಿತ್ತು ಎಂದಿದ್ದಾರೆ.
ನಿಕ್ ಹೇಳಿದ್ದೇನೆಂದರೆ, ನಾವಿಬ್ಬರೂ ನಮ್ಮ ಮದುವೆಯನ್ನು ಸಿಂಪಲ್ ಆಗಿ ಮಾಡಿಕೊಂಡಿದ್ದರೆ ಸಾಕಿತ್ತು. ಯಾಕೆ ಅಷ್ಟೊಂದು ಗ್ರಾಂಡ್ ಆಗಿ, ಅಷ್ಟೊಂದು ಡಾಲರ್, ಅಷ್ಟೊಂದು ಯೂರೋ, ಅಷ್ಟೊಂದು ರೂಪಾಯಿ ವ್ಯಯಿಸಿ ಮದುವೆ ಮಾಡಿಕೊಳ್ಳಬೇಕಿತ್ತು. ಅಂದು ಅನಾವಶ್ಯಕ ಖರ್ಚು ಮಾಡಿದ್ದೇವೆ ಎನಿಸುತ್ತಿದೆ' ಎಂದಿದ್ದಾರೆ.