ಈ ಕಾರಣಕ್ಕೆ ಅರ್ಜುನ್ ಕಪೂರ್, ಸಲ್ಮಾನ್ ಖಾನ್ ಪರಸ್ಪರ ಮುಖ ನೋಡಲು ಇಷ್ಟಪಡಲ್ಲ!
First Published | Jun 26, 2022, 4:25 PM ISTಅರ್ಜುನ್ ಕಪೂರ್ (Arjun Kapoor) ಇಂದು ತಮ್ಮ 38ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅವರು 26 ಜೂನ್ 1985 ರಂದು ಮುಂಬೈನಲ್ಲಿ ಜನಿಸಿದರು. ಚಲನಚಿತ್ರ ನಿರ್ಮಾಪಕ ಬೋನಿ ಕಪೂರ್ (Boney Kapoor) ಅವರ ಮಗ ಅರ್ಜುನ್ 10 ವರ್ಷಗಳಿಂದ ಇಂಡಸ್ಟ್ರಿಯಲ್ಲಿ ಸಕ್ರಿಯರಾಗಿರಿದ್ದಾರೆ. ಇವರು ತಮ್ಮ ವೃತ್ತಿಪರ ಜೀವನಕ್ಕಿಂತ ಹೆಚ್ಚಾಗಿ ತಮ್ಮ ವೈಯಕ್ತಿಕ ಜೀವನದಿಂದ ಮುಖ್ಯಾಂಶಗಳಲ್ಲಿ ಉಳಿದಿದ್ದಾರೆ. ಅವರು ತನಗಿಂತ ಹಲವಾರು ವರ್ಷ ಹಿರಿಯ ವಯಸ್ಸಿನ ಮಲೈಕಾ ಅರೋರಾ (Maliaka Arora) ಅವರೊಂದಿಗೆ ಬಹಳ ಸಮಯದಿಂದ ಸಂಬಂಧ ಹೊಂದಿದ್ದಾರೆ. ಅರ್ಜುನ್ ಹೆಸರು ಮಲೈಕಾ ಜೊತೆ ಸೇರಿಕೊಂಡಾಗ ಸಲ್ಮಾನ್ ಖಾನ್ ಮತ್ತು ಅರ್ಜುನ್ ನಡುವಿನ ಸಂಬಂಧವು ಹದಗೆಟ್ಟಿತು. ಇಂದು ಇಬ್ಬರ ಮುಖ ಒಬ್ಬರು ನೋಡಲು ಇಷ್ಟಪಡುವುದಿಲ್ಲ.