Published : Apr 17, 2025, 05:02 PM ISTUpdated : Apr 17, 2025, 05:17 PM IST
82 ವರ್ಷದ ಜಿತೇಂದ್ರ ಜೀ ಅವರ ಫಿಟ್ನೆಸ್ ನೋಡಿ ಯುವಕರು ಕೂಡ ಅಚ್ಚರಿ ಪಡ್ತಾರೆ. ವಯಸ್ಸು ಅನ್ನೋದು ಕೇವಲ ಒಂದು ಸಂಖ್ಯೆ, ಅನ್ನೋದಕ್ಕೆ ಇವರು ಉತ್ತಮ ಉದಾಹರಣೆ. ಜಿತೇಂದ್ರ ಕಪೂರ್ ಅವರ ಫಿಟ್ನೆಸ್ ರಹಸ್ಯ ಇಲ್ಲಿದೆ ತಿಳಿಯಿರಿ.
82 ವರ್ಷದ ಜಿತೇಂದ್ರ ಕಪೂರ್ ಅವರ ಚಿರ ಯೌವ್ವನದ ರಹಸ್ಯ
'ಜಂಪಿಂಗ್ ಜ್ಯಾಕ್' ಎಂದು ಕರೆಯಲ್ಪಡುವ ಜಿತೇಂದ್ರ ಕಪೂರ್ (Jeetendra Kapoor) ಅವರಿಗೆ ಈಗ 82 ವರ್ಷ. ಆದರೆ ಅವರ ಫಿಟ್ನೆಸ್ ನೋಡಿದರೆ ಅವರಿಗೆ 82 ವರ್ಷಯಾರೂ ಹೇಳಲು ಸಾಧ್ಯವಿಲ್ಲ. ಮುಖದಲ್ಲಿ ಅದೇ ಹೊಳಪು, ನಡಿಗೆಯಲ್ಲಿ ಅದೇ ಉತ್ಸಾಹ, ಮತ್ತು ಸಂಪೂರ್ಣವಾಗಿ ಹೊಂದಿಕೊಳ್ಳುವ ದೇಹ. ಜಿತೇಂದ್ರ ಅವರ ಈ ಲುಕ್ ಗೆ ಕಾರಣ ಯಾವುದೇ ಮ್ಯಾಜಿಕ್ ಅಲ್ಲ. ಬದಲಾಗಿ ಅವರ ಸರಳ ಮತ್ತು ನಿಖರವಾದ ಜೀವನಶೈಲಿಯೇ ಇದಕ್ಕೆ ಕಾರಣ.
28
ಫಿಟ್ನೆಸ್ ರಹಸ್ಯವೇನು? (Fitness Secret) ಜಿತೇಂದ್ರ ಕಪೂರ್ ಫಿಟ್ ಆಗಿರಲು ಆರೋಗ್ಯಕರ ಆಹಾರ, ಉತ್ತಮ ಜೀವನಶೈಲಿ ಅಭ್ಯಾಸಗಳು ಮತ್ತು ವ್ಯಾಯಾಮ ಇತ್ಯಾದಿಗಳನ್ನು ಅನುಸರಿಸುತ್ತಾರೆ. ಅಷ್ಟೇ ಅಲ್ಲ ಅವರು ಕೆಲವು ಆಹಾರಗಳ ಸೇವನೆಯನ್ನು ಕಟ್ಟುನಿಟ್ಟಾಗಿ ತಪ್ಪಿಸುತ್ತಾರೆ.
38
25 ವರ್ಷಗಳಿಂದ ಇದನ್ನ ತಿಂದಿಲ್ಲ ಜೀತೇಂದ್ರ
ಜಿತೇಂದ್ರ 25 ವರ್ಷಗಳ ಹಿಂದೆ ಅನ್ನಕ್ಕೆ ವಿದಾಯ ಹೇಳಿದ್ದರು ಎಂದು ತಿಳಿದರೆ ನಿಮಗೆ ಅಚ್ಚರಿಯಾಗಬಹುದು. ಆದರೆ ಇದು ನಿಜಾ. ಅನ್ನ ತೂಕವನ್ನು ಹೆಚ್ಚಿಸುತ್ತದೆ ಮತ್ತು ದೇಹವು ಭಾರವಾಗಿರುತ್ತೆ ಎನ್ನುವ ಕಾರಣಕ್ಕೆ ಅವರು ಅನ್ನ ತಿನ್ನೋದೆ ಇಲ್ಲ.
48
ಸರಳ ಮತ್ತು ಆರೋಗ್ಯಕರ ಆಹಾರ
ಜಿತೇಂದ್ರ ಅವರು ಸರಳವಾದ, ಮನೆಯಲ್ಲಿ ಬೇಯಿಸಿದ ಆಹಾರವನ್ನು (boiled food) ತಿನ್ನಲು ಇಷ್ಟಪಡ್ತಾರೆ, ಇದರಲ್ಲಿ ಬೇಳೆ, ತರಕಾರಿಗಳು, ಸಲಾಡ್ ಮತ್ತು ಕೆಲವೊಮ್ಮೆ ದೇಸಿ ತುಪ್ಪವೂ ಸೇರಿರುತ್ತದೆ.
58
ಪ್ರತಿದಿನವನ್ನ ಬೇಗನೆ ಆರಂಭಿಸ್ತಾರೆ
ಬೆಳಿಗ್ಗೆ 5:30 ಕ್ಕೆ ಏಳುವುದು ಅವರ ಅಭ್ಯಾಸ. ಇದರ ನಂತರ, ಸ್ವಲ್ಪ ಯೋಗ ಮಾಡಿ ಅಥವಾ ನಡೆಯುತ್ತಾರೆ. ಜಿತೇಂದ್ರ ನಿಯಮಿತವಾಗಿ ವ್ಯಾಯಾಮ ಮಾಡ್ತಾರೆ, ಅದನ್ನ ಅವರು ತಪ್ಪಿಸೋದೆ ಇಲ್ಲ.
68
ಹೊರಗೆ ಊಟ ಮಾಡೋದನ್ನು ತಪ್ಪಿಸ್ತಾರೆ ಜಿತೇಂದ್ರ ಹೊರಗಿನಿಂದ ಕರಿದ ಆಹಾರವನ್ನು ತಿನ್ನುವುದೇ ಇಲ್ಲ. ಶೂಟಿಂಗ್‌ಗೆ ಕೂಡ ಅವರು ತಮ್ಮ ಟಿಫಿನ್ ತೆಗೆದುಕೊಂಡು ಹೋಗುತ್ತಿದ್ದರು. ಅಷ್ಟೇ ಅಲ್ಲ ಅವರು ಜಂಕ್ ಆಹಾರ (junk food)ಮತ್ತು ಸಂಸ್ಕರಿಸಿದ ಆಹಾರಗಳು ಮತ್ತು ಯಾವುದೇ ರೀತಿಯ ಸಿಹಿತಿಂಡಿಗಳನ್ನು ಕೂಡ ತಿನ್ನೋದಿಲ್ಲ.
78
ಸಾಕಷ್ಟು ನೀರು ಮತ್ತು ನಿದ್ರೆ
ಫಿಟ್ ಆಗಿರಲು ಸಾಕಷ್ಟು ನೀರು ಕುಡಿಯೋದು ಮತ್ತು ಸಾಕಷ್ಟು ನಿದ್ರೆ ಮಾಡೋದು ಅಗತ್ಯ. ಇದು ಮುಖಕ್ಕೆ ಹೊಳಪು ಮತ್ತು ದೇಹಕ್ಕೆ ಶಕ್ತಿಯನ್ನು ನೀಡುತ್ತೆ. ದೇಹದ ಚೇತರಿಕೆ ಮತ್ತು ದೇಹದ ಸಮತೋಲನಕ್ಕೆ ನಿದ್ರೆ ಬಹಳ ಮುಖ್ಯ. ದೇಹವನ್ನು ಆರೋಗ್ಯವಾಗಿಡಲು ಇದು ಅತ್ಯಂತ ಅವಶ್ಯಕ.
88
ಸಕಾರಾತ್ಮಕ ಚಿಂತನೆಯೇ ದೊಡ್ಡ ಶಕ್ತಿ
ಅಷ್ಟೇ ಅಲ್ಲ ಯಾವಾಗಲೂ ಪಾಸಿಟಿವ್ (Positive thinking) ಆಗಿರೋದು ಕೂಡ ತುಂಬಾನೆ ಮುಖ್ಯ. ಜಿತೇಂದ್ರ ಕೂಡ ತಮ್ಮನ್ನು ತಾವು ಸಂತೋಷವಾಗಿಟ್ಟುಕೊಳ್ಳುವುದು ಅತ್ಯಂತ ಮುಖ್ಯವೆಂದು ಪರಿಗಣಿಸುತ್ತಾರೆ. ಹಾಗಾಗಿಯೇ ವೃಧ್ಧಾಪ್ಯದಲ್ಲೂ ಫಿಟ್ ಆಗಿರಲು ಸಾಧ್ಯವಾಗಿದೆ.