ಆ ಅವಕಾಶ ಸಿಕ್ಕರೆ ಖಂಡಿತ ಮಿಸ್‌ ಮಾಡಿಕೊಳ್ಳಲಾರೆ: ಪೂಜಾ ಹೆಗ್ಡೆ ಹೀಗಾ ಹೇಳೋದು!

Published : Apr 17, 2025, 04:47 PM ISTUpdated : Apr 17, 2025, 05:12 PM IST

ನಾನು ಇದುವರೆಗೂ ಬಯೋಪಿಕ್‌ ಚಿತ್ರಗಳಲ್ಲಿ ನಟಿಸಿಲ್ಲ. ಆದರೆ, ಶ್ರೀದೇವಿ ಜೀವನ ಚರಿತ್ರೆ ಆಧರಿಸಿದ ಸಿನಿಮಾದಲ್ಲಿ ನಟಿಸುವ ಆಸೆ ಇದೆ. ಶ್ರೀದೇವಿ ಪಾತ್ರ ಮಾಡುವ ಅವಕಾಶ ಸಿಕ್ಕರೆ ಖಂಡಿತ ಮಿಸ್‌ ಮಾಡಿಕೊಳ್ಳಲಾರೆ ಎನ್ನುತ್ತಾರೆ ಕರ್ನಾಟಕ ಮೂಲದ ಬಹುಭಾಷಾ ನಟಿ ಪೂಜಾ ಹೆಗ್ಡೆ.

PREV
16
ಆ ಅವಕಾಶ ಸಿಕ್ಕರೆ ಖಂಡಿತ ಮಿಸ್‌ ಮಾಡಿಕೊಳ್ಳಲಾರೆ: ಪೂಜಾ ಹೆಗ್ಡೆ ಹೀಗಾ ಹೇಳೋದು!

ಬಹುಭಾಷಾ ನಟಿ ಶ್ರೀದೇವಿ ಅವರ ಜೀವನಾಧರಿತ ಚಿತ್ರ ಸೆಟ್ಟೇರುವ ಸುದ್ದಿ ತುಂಬಾ ದಿನಗಳಿಂದಲೇ ಕೇಳಿ ಬರುತ್ತಿದೆ. ಈ ಯಶಸ್ವಿ ನಟಿಯ ಬಯೋಪಿಕ್‌ ಹೇಗಿರುತ್ತದೆ ಎನ್ನುವ ಬಗ್ಗೆ ಆಗಾಗ ಚರ್ಚೆ ಆಗುತ್ತಲೇ ಇರುತ್ತದೆ. 

26

ಈಗ ಮತ್ತೊಂದು ಸುದ್ದಿ ಬಂದಿದೆ. ಇದಕ್ಕೆ ಕಾರಣ ನಟಿ ಪೂಜಾ ಹೆಗ್ಡೆ. ತೆಲುಗು ಚಿತ್ರರಂಗದಲ್ಲಿ ಜನಪ್ರಿಯತೆ ಪಡೆದುಕೊಂಡು, ತಮಿಳು ಹಾಗೂ ಹಿಂದಿ ಚಿತ್ರರಂಗದಲ್ಲೂ ತೊಡಗಿಸಿಕೊಂಡಿರುವ ಈ ತುಳುನಾಡಿನ ಬೆಡಗಿಗೆ ಸಿನಿಮಾದಲ್ಲಿ ಶ್ರೀದೇವಿ ಆಗುವ ಆಸೆ ಇದೆ.

36

‘ನಾನು ಇದುವರೆಗೂ ಬಯೋಪಿಕ್‌ ಚಿತ್ರಗಳಲ್ಲಿ ನಟಿಸಿಲ್ಲ. ಆದರೆ, ಶ್ರೀದೇವಿ ಬಯೋಪಿಕ್‌ನಲ್ಲಿ ನಟಿಸುವ ಆಸೆ ಇದೆ. ನಾನು ಶ್ರೀದೇವಿ ನಟನೆಯ ಸಿನಿಮಾದ ಹಾಡಿಗೆ ಡ್ಯಾನ್ಸ್ ಮಾಡಿದ್ದೇನೆ. ಅವರ ದೊಡ್ಡ ಅಭಿಮಾನಿ ಕೂಡ. ಹೀಗಾಗಿ ಶ್ರೀದೇವಿ ಪಾತ್ರ ಮಾಡುವ ನನಗೆ ಅವಕಾಶ ಸಿಕ್ಕರೆ ಖಂಡಿತ ಮಿಸ್‌ ಮಾಡಿಕೊಳ್ಳಲಾರೆ’ ಎಂದು ಪೂಜಾ ಹೆಗ್ಡೆ ಹೇಳಿಕೊಂಡಿದ್ದಾರೆ.

46

ನಾನು ಬಲಿಪಶು: ಫಿಲ್ಮ್‌ಫೇರ್‌ಗೆ ನೀಡಿದ ಸಂದರ್ಶನದಲ್ಲಿ ಪೂಜಾ, ನೆಗೆಟಿವ್ ಪಿಆರ್ ತಂತ್ರದ ಬಗ್ಗೆ ಮತ್ತು ಜನರನ್ನು ಗುರಿಯಾಗಿಸಿಕೊಂಡು ಮಾಡುವ ನೆಗೆಟಿವ್ ಟ್ರೋಲ್‌ಗಳ ಬಗ್ಗೆ ಮಾತನಾಡಿದ್ದಾರೆ. ನನಗೆ ಇದು ಶಾಕ್ ಆಗಿತ್ತು. ನನ್ನ ವಿಷಯದಲ್ಲಿ ನಾನು ಪಿಆರ್‌ನಲ್ಲಿ ತುಂಬಾ ಕಳಪೆ. ಮೀಮ್ ಪೇಜ್‌ಗಳು ನನ್ನನ್ನು ಸತತವಾಗಿ ಟ್ರೋಲ್ ಮಾಡ್ತಿದ್ದ ಒಂದು ಕಾಲ ಇತ್ತು ಎಂದು ನೆನಪಿಸಿಕೊಂಡರು. 

56

ಅವರು ಯಾಕೆ ನನ್ನ ಬಗ್ಗೆ ಸತತವಾಗಿ ನೆಗೆಟಿವ್ ಆಗಿ ಮಾತಾಡ್ತಾರೆ ಅಂತ ನಾನು ಯೋಚಿಸುತ್ತಿದ್ದೆ. ಅದು ನನ್ನನ್ನು ಗುರಿಯಾಗಿಸಿಕೊಂಡು ಮಾಡ್ತಿದ್ದಾರೆ ಅಂತ ನನಗೆ ಅನಿಸ್ತಿತ್ತು. ಬೇರೆಯವರನ್ನು ತಗ್ಗಿಸೋಕೆ ಜನ ತುಂಬಾ ದುಡ್ಡು ಖರ್ಚು ಮಾಡ್ತಾರೆ ಅಂತ ಆಮೇಲೆ ನನಗೆ ಗೊತ್ತಾಯ್ತು. ಅದು ಗೊತ್ತಾದಾಗ ನನ್ನ ತಂದೆ ತಾಯಿ ಮತ್ತು ನಾನು ತುಂಬಾ ಬೇಜಾರು ಮಾಡ್ಕೊಂಡಿದ್ದೀವಿ. ಆದ್ರೆ ನಾನು ಟ್ರೋಲ್ ಮಾಡೋದನ್ನು ಹೆಮ್ಮೆಯಾಗಿ ತಗೊಂಡೆ. 

66

ಯಾಕಂದ್ರೆ ಯಾರಾದ್ರೂ ನಿಮ್ಮನ್ನ ತಗ್ಗಿಸಬೇಕು ಅಂದ್ರೆ, ನೀವು ಅವರಿಗಿಂತ ಮೇಲಿದ್ದೀರಿ ಅಂತ ಅರ್ಥ ಅಲ್ವಾ. ಪರವಾಗಿಲ್ಲ ಅಂತ ನಾನು ನನ್ನ ತಂದೆ ತಾಯಿಗೆ ಸಮಾಧಾನ ಹೇಳ್ತಿದ್ದೆ. ಆದ್ರೆ ಒಂದು ಹಂತದ ನಂತರ ಅದು ತುಂಬಾ ಜಾಸ್ತಿ ಆಯ್ತು. ನನ್ನನ್ನು ಟ್ರೋಲ್ ಮಾಡೋಕೆ ಜನ ಲಕ್ಷಾಂತರ ರೂಪಾಯಿ ಖರ್ಚು ಮಾಡ್ತಿದ್ದಾರೆ ಅಂತ ನಾನು ಕಂಡಕೊಂಡೆ ಎಂದು ಪೂಜಾ ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories