ಆಮೀರ್ ಪುತ್ರಿ ಎಂಗೇಜ್ಮೆಂಟಲ್ಲಿ ಫಾತಿಮಾ ಸನಾ ಶೇಖ್: ಹಾಗಾದ್ರೆ ರೂಮರ್‌ಗಳು ನಿಜಾನಾ?

Published : Nov 26, 2022, 03:42 PM IST

ಆಮೀರ್ ಖಾನ್(Aamir Khan) ಪುತ್ರಿ ಇರಾ ಖಾನ್ (Ira Khan) ಇತ್ತೀಚೆಗಷ್ಟೇ ಬಾಯ್‌ಫ್ರೆಂಡ್‌ ನೂಪುರ್ ಶಿಖರೆ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನವೆಂಬರ್ 18 ರಂದು ಮುಂಬೈನಲ್ಲಿ ನಡೆದ ನಿಶ್ಚಿತಾರ್ಥ ಸಮಾರಂಭದಲ್ಲಿ ಇರಾ ಅವರ ತಂದೆ ಆಮೀರ್ ಖಾನ್, ತಾಯಿ ರೀನಾ ದತ್ತಾ, ಮಲತಾಯಿ ಕಿರಣ್ ರಾವ್ ಮತ್ತು ನಟಿ ಫಾತಿಮಾ ಸನಾ ಶೇಖ್ ಕೂಡ ಉಪಸ್ಥಿತರಿದ್ದರು. ಇರಾ ಮತ್ತು ನೂಪುರ್ ಅವರ ಎಂಗೆಜ್ಮೆಂಟ್‌ನ ಫೋಟೊಗಳು ಸಖತ್‌ ವೈರಲ್‌ ಆಗಿದೆ. ಈ ಫೋಟೋಗಳಲ್ಲಿ ಆಮೀರ್‌ ಖಾನ್‌ ಅವರ ಈಗಿನ ಗರ್ಲ್‌ಫ್ರೆಂಡ್‌ ಎಂದು ವರದಿಯಾಗಿರುವ ನಟಿ  ಫಾತಿಮಾ ಸನಾ ಶೇಖ್‌ (Fatima Sana Shaikh) ಇರುವುದು ಎಲ್ಲ ವದಂತಿಗಳಿಗೆ ಪುಷ್ಟಿ ನೀಡಿದೆ.

PREV
17
ಆಮೀರ್ ಪುತ್ರಿ ಎಂಗೇಜ್ಮೆಂಟಲ್ಲಿ ಫಾತಿಮಾ ಸನಾ ಶೇಖ್: ಹಾಗಾದ್ರೆ ರೂಮರ್‌ಗಳು ನಿಜಾನಾ?

ಸ್ವತಃ ಫಾತಿಮಾ ಸನಾ ಶೇಖ್ ಅವರು ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆಚರಣೆಯನ್ನು ನೋಡಿ ತುಂಬಾ ಸಂತೋಷವಾಯಿತು. ನಿಮ್ಮಿಬ್ಬರ ಪ್ರೀತಿಯನ್ನು ನೋಡಿ ನನ್ನ ಹೃದಯ ಕರಗುತ್ತಿದೆ. ಅದರ ಭಾಗವಾಗಲು ನನಗೆ ಸಂತೋಷವಾಗಿದೆ ಎಂದು ನಟಿ ಬರೆದಿದ್ದಾರೆ.

27

ಫಾತಿಮಾ ಅವರು ಹಂಚಿಕೊಂಡ ಫೋಟೋಗಳ ಬಗ್ಗೆ ಪ್ರತಿಕ್ರಿಯಿಸಿದ ಆಮೀರ್‌ ಖಾನ್‌ ಪುತ್ರಿ "ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ" ಎಂದಿದ್ದಾರೆ ಹಾಗೂ ಮತ್ತೊಂದು ಕಾಮೆಂಟ್‌ನಲ್ಲಿ ಎರಡನೆಯ ಚಿತ್ರ ಬಹುಶಃ ದಿನದ ನನ್ನ ನೆಚ್ಚಿನ ಚಿತ್ರವಾಗಿದೆ ಎಂದು ಇರಾ ಬರೆದಿದ್ದಾರೆ

37

ಫೋಟೋದಲ್ಲಿ ಫಾತಿಮಾ ಸನಾ ಶೇಖ್, ಇರಾ  ಖಾನ್ ಅವರನ್ನು ಚುಂಬಿಸುತ್ತಿರುವುದನ್ನು ಕಾಣಬಹುದು ಮತ್ತು ಅವರು ನೂಪುರ್ ಶಿಖರೆಯೊಂದಿಗೆ ನೃತ್ಯ ಮಾಡುವುದನ್ನು ಕಾಣಬಹುದು.


 

47

ಫಾತಿಮಾ ಸನಾ ಶೇಖ್ ಅವರು ಆಮೀರ್ ಖಾನ್ ಅವರೊಂದಿಗೆ 'ದಂಗಲ್' ಚಿತ್ರದಲ್ಲಿ ಅವರ ಮಗಳ ಪಾತ್ರದಲ್ಲಿ ಕಾಣಿಸಿಕೊಂಡರು ಮತ್ತು ನಂತರ ಅವರು 'ಥಗ್ಸ್ ಆಫ್ ಹಿಂದೂಸ್ತಾನ್' ಚಿತ್ರದಲ್ಲಿ ಅವರೊಂದಿಗೆ ಕಾಣಿಸಿಕೊಂಡರು.

57

ಅನೇಕ ಮಾಧ್ಯಮ ವರದಿಗಳು ಮತ್ತು ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಿಂದ ಫಾತಿಮಾ ಸನಾ ಶೇಖ್ ಅವರನ್ನು ಆಮೀರ್ ಖಾನ್ ಅವರ ಗರ್ಲ್‌ಫ್ರೆಂಡ್‌  ಎಂದು ವಿವರಿಸಲಾಗಿದೆ.


 

67

ಆಮೀರ್ ತನ್ನ ಪತ್ನಿ ಕಿರಣ್ ರಾವ್‌ನಿಂದ ವಿಚ್ಛೇದನ ಪಡೆಯಲು ಫಾತಿಮಾ ಕಾರಣ ಎಂದು ಹೇಳುವ ಮಟ್ಟಕ್ಕೂ ಹೋಗಿದೆ. ಆದರೆ ಇದು ಅಧಿಕೃತವಾಗಿ ದೃಢಪಟ್ಟಿಲ್ಲ.

77

ಫಾತಿಮಾ ಮತ್ತು ಅಮಿರ್‌ ನಡುವಿನ ಸಂಬಂಧದಲ್ಲಿ ಎಷ್ಟು ಸತ್ಯವಿದೆ ಎಂಬುದು ಅವರಿಗೇ ಗೊತ್ತು. ಆದರೆ ವಯಸ್ಸಿನಲ್ಲಿ, ಫಾತಿಮಾ ಆಮೀರ್‌ಗಿಂತ 27 ವರ್ಷ ಚಿಕ್ಕವರು ಮತ್ತು ಅವಳ ಮಗಳು ಇರಾಗಿಂತ ಕೇವಲ 5 ವರ್ಷ ದೊಡ್ಡವರು

Read more Photos on
click me!

Recommended Stories