ಹೃತಿಕ್‌ ರೋಷನ್‌ ಕಸಿನ್‌ ಜೊತೆ ಸಂಬಂಧದ ಬಗ್ಗೆ ಬಾಯಿಬಿಟ್ಟ ಕಾರ್ತಿಕ್‌ ಆರ್ಯನ್‌

First Published Nov 26, 2022, 3:18 PM IST

ಕಾರ್ತಿಕ್ ಆರ್ಯನ್ (Kartik Aaryan)ತಮ್ಮ ಚಿತ್ರಗಳ ಯಶಸ್ಸಿನ ಬಗ್ಗೆ ಎಷ್ಟು ಚರ್ಚೆಯಲ್ಲಿದ್ದಾರೆಯೋ, ಅಷ್ಟೇ ಮಾಧ್ಯಮಗಳಲ್ಲಿ ಅವರ ಲವ್‌ ಆಫೇರ್‌ಗಳ ಬಗ್ಗೆ ಸುದ್ದಿಗಳು ಹರಿದಾಡುತ್ತವೆ. ಹೃತಿಕ್ ರೋಷನ್ (Hritihik Roshan) ಅವರ ಕಸಿನ್‌ ಪಶ್ಮಿನಾ ರೋಷನ್ (Pashmina Roshan) ಅವರೊಂದಿಗೆ ಕಾರ್ತಿಕ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಕೆಲ ಸಮಯದ ಹಿಂದೆ ವರದಿಯಾಗಿತ್ತು. ಇದುವರೆಗೂ ಈ ವಿಚಾರದಲ್ಲಿ ಮೌನ ವಹಿಸಿದ್ದ ನಟ ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ  ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಏನು ಹೇಳಿದ್ದಾರೆ ನೋಡಿ ಕಾರ್ತಿಕ್‌ ಆರ್ಯನ್‌?

ಪ್ರಸ್ತುತ ತಮ್ಮ ಮುಂಬರುವ ಚಿತ್ರ 'ಫ್ರೆಡ್ಡಿ' ಪ್ರಚಾರದಲ್ಲಿ ನಿರತರಾಗಿದ್ದಾರೆ ಕಾರ್ತಿಕ್ ಆರ್ಯನ್. ಅದೇ ಸಮಯದಲ್ಲಿ ಕಾರ್ತಿಕ್‌ ಹೆಸರನ್ನು ಹೃತಿಕ್ ರೋಷನ್ ಅವರ ಸೋದರಸಂಬಂಧಿ ಪಶ್ಮಿನಾ ರೋಷನ್ ಜೊತೆ ಜೋಡಿಸಲಾಗಿದೆ. ಈ ಸಂಬಂಧದ ಬಗ್ಗೆ ಮೌನ ಮುರಿದ ಕಾರ್ತಿಕ್ ಆರ್ಯನ್, ಅವರು ಹೇಳಿದ್ದೇನು ಗೊತ್ತಾ?
 
 

'ನನ್ನ ಜೀವನದ ವಿಷಯಗಳು ಸಾರ್ವಜನಿಕವಾಗಿ ಬರುತ್ತವೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ, ಆದರೆ ಅದರ ಜೊತೆಗೆ  ಯಾರ ಜೊತೆಯಾದರೂ ನಿಜವಾದ ಸ್ನೇಹ ಇದ್ದರೆ  ಜನರು ಅದಕ್ಕೆ ಹೆಸರನ್ನೂ ನೀಡುತ್ತಾರೆ. ಆದ್ದರಿಂದ ಈ ರೀತಿ ಲೇಬಲ್ ಮಾಡುವುದು ಕೆಲವೊಮ್ಮೆ ವ್ಯಕ್ತಿಗಳ ನಡುವೆ ತೊಂದರೆ ಉಂಟುಮಾಡುತ್ತದೆ, ಅದು ಸರಿಯಲ್ಲ. ನಾನು ಇದಕ್ಕೆ ಹೊಂದಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಆದರೆ ಇಂತಹ ವಿಷಯಗಳನ್ನು ನಾನು ಇನ್ನೂ ಪೂರ್ತಿಯಾಗಿ ಕಡೆಗಣಿಸಲು ಸಾಧ್ಯವಾಗಲಿಲ್ಲ' ಎಂದು ನಟ ಜೂಮ್ ಸಂಭಾಷಣೆಯಲ್ಲಿ ಹೇಳಿದರು.

ಕಾರ್ತಿಕ್ ಆರ್ಯನ್ ಅವರು ಈ ಸಂಭಾಷಣೆಯಲ್ಲಿ 2022 ಅನ್ನು ಎಂದಿಗೂ ಮರೆಯುವುದಿಲ್ಲ, ಏಕೆಂದರೆ ಇದು ಅವರ ಜೀವನವನ್ನು ಬದಲಾಯಿಸಿದೆ ಎಂದು ಹೇಳಿದರು. ಅವರ ಪ್ರಕಾರ, ಬಾಲಿವುಡ್ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಕುಸಿಯುತ್ತಿರುವ ಸಮಯದಲ್ಲಿ, ಅವರ ಚಿತ್ರ 'ಭೂಲ್ ಭುಲೈಯಾ 2' ಪ್ರೇಕ್ಷಕರನ್ನು ಥಿಯೇಟರ್‌ಗಳಿಗೆ ಕರೆತಂದಿದ್ದಲ್ಲದೆ, ಬ್ಲಾಕ್‌ಬಸ್ಟರ್ ಎಂದು ಸಾಬೀತುಪಡಿಸಿತು ಎಂದಿದ್ದಾರೆ.

ಕಾರ್ತಿಕ್ ಸಾಮಾಜಿಕ ಮಾಧ್ಯಮದ ಧನಾತ್ಮಕ ಮತ್ತು ಋಣಾತ್ಮಕ ಅಂಶಗಳ ಬಗ್ಗೆಯೂ ಮಾತನಾಡಿದರು. 'ಏನಾದರೂ ನೆಗೆಟಿವ್‌ ಕಾಮೆಂಟ್‌ ಬಂದಾಗ ಅದು ಇನ್ನೂ ನನ್ನ ಮೇಲೆ ಪರಿಣಾಮ ಬೀರುತ್ತದೆ. ಅದಕ್ಕಿಂತ ಹೆಚ್ಚಾಗಿ ನಾನು ಏನನ್ನೂ ಮಾಡದಿದ್ದಾಗ ಮತ್ತು ಆಧಾರರಹಿತ ವಿಷಯಗಳಿಗಾಗಿ ನನ್ನನ್ನು ದೂಷಿಸಲಾಗುತ್ತಿದೆ. ಸಿನಿಮಾ ತಾರೆಯರ ಜೀವನದಲ್ಲಿ ಹೆಚ್ಚು ಗೌಪ್ಯತೆಯಿಲ್ಲ ಎಂಬ ವಿಷಯಗಳನ್ನು ಈಗ ಒಪ್ಪಿಕೊಂಡಿದ್ದೇನೆ" ಎಂದು ಅವರು ಹೇಳಿದರು

ಕೆಲವು ದಿನಗಳ ಹಿಂದೆ ಕಾರ್ತಿಕ್ ಆರ್ಯನ್ ಪಶ್ಮಿನಾ ರೋಷನ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಇತ್ತು.  ಕಾರ್ತಿಕ್ ಆರ್ಯನ್ ಅವರು ಶೂಟಿಂಗ್‌ನಿಂದ ಬಿಡುವು ಪಡೆದ ತಕ್ಷಣ ಪಶ್ಮಿನಾ ಅವರೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ ಎಂದು ವರದಿಯಾಗಿದೆ. 

ಕಾರ್ತಿಕ್ ಮತ್ತು ಪಶ್ಮಿನಾ ಎಲ್ಲಕ್ಕಿಂತ ಹೆಚ್ಚಾಗಿ ಪರಸ್ಪರರ ಮನೆಗೆ ಭೇಟಿ ನೀಡುವುದಕ್ಕೆ ಆದ್ಯತೆ ನೀಡುತ್ತಾರೆ ಎಂದು ಹೇಳಲಾಗಿದೆ. ಆದರೆ ಈ ಸಮಯದಲ್ಲಿ ಅವರು ಪಾಪರಾಜಿ ಅಥವಾ ಮಾಧ್ಯಮದ ವ್ಯಕ್ತಿಗಳು ಅವರನ್ನು ನೋಡದಂತೆ ನೋಡಿಕೊಳ್ಳುತ್ತಾರೆ ಎಂದೂ ವರದಿಯಾಗಿದೆ.

click me!