Arjun Rampal Birthday: ಅರ್ಜುನ್ ರಾಂಪಾಲ್‌ಗೆ ಸಿನಿಮಾದಲ್ಲಿ ಅವಕಾಶ ಸಿಕ್ಕಿದ್ದು ಹೇಗೆ?
First Published | Nov 26, 2022, 3:06 PM ISTArjun Rampal Birthday: ಬಾಲಿವುಡ್ ನಟ ಅರ್ಜುನ್ ರಾಂಪಾಲ್ (Arjun Rampal) ಇಂದು 50 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. 26 ನವೆಂಬರ್ 1972 ರಂದು ಜಬಲ್ಪುರದಲ್ಲಿ ಜನಿಸಿದ ಅರ್ಜುನ್ ರಾಂಪಾಲ್ ಶಿಕ್ಷಣದ ನಂತರ ಮುಂಬೈನಲ್ಲಿ ಮಾಡೆಲ್ ಆಗಿ ವೃತ್ತಿಜೀವನವನ್ನು ಪ್ರಾರಂಭಿಸಿದರು. ಒಳ್ಳೆಯ ಹೈಟ್ , ಫಿಟ್‌ನೆಸ್‌ನಿಂದಾಗಿ ಅರ್ಜುನ್ ರಾಂಪಾಲ್ ಅವರ ಮಾಡೆಲಿಂಗ್ ವೃತ್ತಿಜೀವನವು ತುಂಬಾ ಚೆನ್ನಾಗಿತ್ತು, ಈ ಮಾಡೆಲಿಂಗ್‌ನಿಂದಾಗಿ, ಅವರಿಗೆ ಅವರ ಮೊದಲ ಚಲನಚಿತ್ರದ ಆಫರ್ ಬಂದಿತು. ಅರ್ಜುನ್ ರಾಂಪಾಲ್ ಅವರ ಧ್ವನಿಯೂ ತುಂಬಾ ಪವರ್ ಫುಲ್ ಆಗಿದೆ. ಇದೇ ಕಾರಣಕ್ಕೆ ಅವರ ಡೈಲಾಗ್ ಡೆಲಿವರಿ ಕೂಡ ಸಖತ್ ಫೇಮಸ್. ಅರ್ಜುನ್ ರಾಂಪಾಲ್ ಜೀವನಕ್ಕೆ ಸಂಬಂಧಿಸಿದ ಇಂಟರೆಸ್ಟಿಂಗ್ ವಿಷಯಗಳು ಇಲ್ಲಿವೆ.