ತಮ್ಮ ಬಹುಕಾಲದ ಗೆಳತಿ ಶಿಬಾನಿ ದಾಂಡೇಕರ್ ಅವರೊಂದಿಗೆ ಫರ್ಹಾನ್ ಅಖ್ತರ್ ಮಾರ್ಚ್‌ನಲ್ಲಿ ಮತ್ತೆ ಮದುವೆಯಾಗಲಿದ್ದಾರೆ. COVID 19 ಪ್ರಕರಣಗಳ ಹೆಚ್ಚಳದಿಂದಾಗಿ, ದಂಪತಿಗಳು ಮದುವೆಯನ್ನು ತುಂಬಾ ಖಾಸಗಿಯಾಗಿ ಇರಿಸಬಹುದು
ಫರ್ಹಾನ್ ಅಖ್ತರ್ ಮತ್ತು ಶಿಬಾನಿ ದಾಂಡೇಕರ್ ಲೋ-ಕೀ ಸಮ್ಮರ್ ವೆಡ್ಡಿಂಗ್ ಹೊಂದಲು ನಿರ್ಧರಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಕೋವಿಡ್ 19 ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವಂತೆಯೇ ಕೆಲವೇ ಕೆಲವು ಆಪ್ತ ಸ್ನೇಹಿತರು ಮತ್ತು ಕುಟುಂಬದವರು ಮಾತ್ರ ಮದುವೆಗೆ ಹಾಜಾರಾಗುವ ಸಾಧ್ಯತೆ ಇದೆ.
ಮುಂಬೈನ ಪಂಚತಾರಾ ಹೋಟೆಲ್ ಅಥವಾ ನಟಿ ದಿಯಾ ಮಿರ್ಜಾರಂತೆ ತಮ್ಮ ಮನೆಯ ಗಾರ್ಡನ್‌ನಲ್ಲಿಯೇ ಸಾಕಷ್ಟು ಹೂವುಗಳು ಮತ್ತು ಬಣ್ಣಗಳ ನಡುವೆ ಈ ಜೋಡಿ ಮದುವೆಯಾಗಬಹುದು ಎಂದು ವರದಿಗಳು ಹೇಳುತ್ತಿವೆ.
ಶಿಬಾನಿ ದಾಂಡೇಕರ್ ಮತ್ತು ಫರ್ಹಾನ್ ಅಖ್ತರ್ ಪರಸ್ಪರ ಪ್ರೀತಿಸುತ್ತಿದ್ದಾರೆ ಮತ್ತು ತಮ್ಮ ಪ್ರೀತಿಪಾತ್ರರ ಮುಂದೆ ಮದುವೆಯಾಗಲು ಬಯಸುತ್ತಾರೆ. ಈ ಜೋಡಿಗೆ ತಮ್ಮ ಮದುವೆಯ ಬಗ್ಗೆ ಯಾವುದೇ ಅಡಂಬರ ಬೇಕಿಲ್ಲ. ಆದ್ದರಿಂದ ಈಗ ಅವರು ಅದನ್ನು ಸಾಧ್ಯವಾದಷ್ಟು ನಿಕಟವಾಗಿ ಇರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ನಿಕಟ ಮೂಲವೊಂದು ತಿಳಿಸಿದೆ
ಈಗಾಗಲೇ ಶಿಬಾನಿ ಮತ್ತು ಫರ್ಹಾನ್ ತಮ್ಮ ಮದುವೆಯ ಔಟ್‌ಫಿಟ್ ಸಹ ಫೈನಲ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಈ ಜೋಡಿ ತಮ್ಮ ಮದುವೆಯ ದಿನದಂದು ನೀಲಿ ಬಣ್ಣದ ಶೇಡ್‌ನ ಸಬ್ಯಸಾಚಿ ಡ್ರೆಸ್‌ಗಳನ್ನು ಧರಿಸುತ್ತಾರಂತೆ.
ಫರ್ಹಾನ್ ಅಖ್ತರ್ ಅವರ ಕೆಲಸದ ಮುಂಭಾಗದ ಬಗ್ಗೆ ಮಾತನಾಡುತ್ತಾ, ಅವರ ತಮ್ಮ ಮುಂದಿನ ನಿರ್ದೇಶನದ ಸಿನಿಮಾ ಜೀ ಲೇ ಜರಾ ಎಂಬ ರೋಡ್ ಟ್ರಿಪ್ ಫಿಲ್ಮ್ ಆಗಿದೆ ಎಂದು ಘೋಷಿಸಿದ್ದಾರೆ. ಇದರಲ್ಲಿ ಪ್ರಿಯಾಂಕಾ ಚೋಪ್ರಾ ಜೋನಾಸ್, ಆಲಿಯಾ ಭಟ್, ಕತ್ರಿನಾ ಕೈಫ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಮತ್ತು 2022 ರಲ್ಲಿ ಬಿಡುಗಡೆಯಾಗಲಿದೆ.
ಅವರ ಸಿನಿಮಾ ದಿಲ್ ಚಾಹ್ತಾ ಹೈ 20 ವರ್ಷಗಳನ್ನು ಪೂರೈಸಿದ ದಿನದಂದು ಫರ್ಹಾನ್ ಅದೇ ಜೀ ಲೇ ಜರಾವನ್ನು ಘೋಷಿಸಿದ್ದರು. ವರದಿಗಳ ಪ್ರಕಾರ, ಜಿಂದಗಿ ನಾ ಮಿಲೇಗಿ ದೋಬರಾ ಸಿನಿಮಾದ ನಟರಾದ ಹೃತಿಕ್ ರೋಷನ್, ಫರ್ಹಾನ್ ಅಖ್ತರ್ ಮತ್ತು ಅಭಯ್ ಡಿಯೋಲ್ ಈ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.