Deepika Padukone Birthday: ಸಿನಿಮಾ ಮಾತ್ರವಲ್ಲ, ನಟಿಗೆ ಈ ಮೂಲಗಳಿಂದಲೂ ಕೋಟಿಗಟ್ಟಲೆ ಆದಾಯ
First Published | Jan 5, 2022, 5:09 PM ISTಬಾಲಿವುಡ್ ದಿವಾ ದೀಪಿಕಾ ಪಡುಕೋಣೆಗೆ (Deepika Padukone) 36 ವರ್ಷಕ್ಕೆ ಕಾಲಿಟ್ಟಿದ್ದಾರೆ. ಜನವರಿ 5,1986 ರಂದು ಕೋಪನ್ ಹ್ಯಾಗನ್ ನಲ್ಲಿ ಜನಿಸಿದ ದೀಪಿಕಾ, ಮಾಡೆಲ್ ಆಗಿ ತಮ್ಮ ವೃತ್ತಿಜೀವನ ಪ್ರಾರಂಭಿಸಿದರು. 2006 ರ ಕನ್ನಡ ಚಲನಚಿತ್ರ ಐಶ್ವರ್ಯದೊಂದಿಗೆ ದೀಪಿಕಾ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಒಂದು ವರ್ಷದ ನಂತರ, 2007 ರಲ್ಲಿ, ಅವರು ಬಾಲಿವುಡ್ ಸಿನಿಮಾ 'ಓಂ ಶಾಂತಿ ಓಂ' ನಲ್ಲಿ ಅವಕಾಶ ಪಡೆದರು. ನಂತರ ಅವರು ಹಿಂತಿರುಗಿ ನೋಡಲಿಲ್ಲ. ಇಲ್ಲಿಯವರೆಗೆ, ದೀಪಿಕಾ ಬಾಲಿವುಡ್‌ನ ಅತ್ಯಂತ ಯಶಸ್ವಿ ಮತ್ತು ಶ್ರೀಮಂತ ನಟಿಯರಲ್ಲಿ ಒಬ್ಬರು. ಸೆಲೆಬ್ರಿಟಿ ನೆಟ್‌ವರ್ತ್ ವರದಿ ಪ್ರಕಾರ, ದೀಪಿಕಾ 40 ಮಿಲಿಯನ್ ಡಾಲರ್ (300 ಕೋಟಿ ರೂ.) ಮೌಲ್ಯದ ಆಸ್ತಿ ಹೊಂದಿದ್ದಾರೆ. ಸಿನಿಮಾಗಳಲ್ಲದೆ ಇತರ ಮೂಲಗಳಿಂದಲೂ ದೀಪಿಕಾ ಹಣ ಸಂಪಾದಿಸುತ್ತಾರೆ.