Uday Chopra: ಸಿನಿಮಾಗಳಿಂದ ದೂರವಿರೋ ಉದಯ್ ಚೋಪ್ರಾ ಈಗೇನ್ ಮಾಡ್ತಿದ್ದಾರೆ ?
First Published | Jan 5, 2022, 5:25 PM ISTರಾಣಿ ಮುಖರ್ಜಿ (Rani Mukerji) ಪತಿಯ ಸಹೋದರ ಮತ್ತು ಬಾಲಿವುಡ್ ನಟ ಉದಯ್ ಚೋಪ್ರಾ (Uday Chopra) 49 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಜನವರಿ 5, 1973 ರಂದ ಮುಂಬೈನಲ್ಲಿ ಜನಿಸಿದ ಉದಯ್ ಚೋಪ್ರಾ ಸೂಪರ್‌ಹಿಟ್ ಚಲನಚಿತ್ರ ಮೊಹಬ್ಬತೇನ್ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಆದರೆ, ಈ ಚಿತ್ರದ ನಂತರವೂ ಉದಯ್ ಚೋಪ್ರಾ ಅವರ ವೃತ್ತಿಜೀವನ ಹೆಚ್ಚು ಹೆಸರು ಮಾಡಲಿಲ್ಲ. 'ಮೇರೆ ಯಾರ್ ಕಿ ಶಾದಿ ಹೈ' ಮತ್ತು 'ಧೂಮ್' ಹೊರತುಪಡಿಸಿ, ಉದಯ್ ಚೋಪ್ರಾ ಅವರ ಖಾತೆಯಲ್ಲಿ ಯಾವುದೇ ಹಿಟ್‌ಗಳಿಲ್ಲ. ಈ ಚಿತ್ರಗಳಲ್ಲೂ ಉದಯ್ ಚೋಪ್ರಾ ಸೈಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದು, ನಾಯಕನಾಗಿ ಅಲ್ಲ. ಉದಯ್ ಚೋಪ್ರಾ ತಮ್ಮ ಸಿನಿಮಾಗಳಿಗಿಂತ ಹೆಚ್ಚು ವಿವಾದಗಳಿಗೆ ಹೆಸರುವಾಸಿಯಾಗಿದ್ದಾರೆ. ಒಮ್ಮೆ ಉದಯ್ ಚೋಪ್ರಾ ಆತ್ಮಹತ್ಯೆಯ ಬಗ್ಗೆ ಮಾತನಾಡುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದರು. ಉದಯ್ ಚೋಪ್ರಾ ಖಿನ್ನತೆಗೆ ಒಳಗಾಗಿದ್ದರು.