ಐಶ್ವರ್ಯಾ ರೈ, ಅಭಿಷೇಕ್ ಬಚ್ಚನ್‌ ಡಿವೋರ್ಸ್: ಖ್ಯಾತ ಜ್ಯೋತಿಷಿ ಭವಿಷ್ಯ ನಿಜವಾಗುತ್ತಾ?

Published : Oct 07, 2024, 01:38 PM ISTUpdated : Oct 07, 2024, 01:44 PM IST

ಬಾಲಿವುಡ್ ಸೂಪರ್ ಜೋಡಿ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಡಿವೋರ್ಸ್ ಈಗ್ಗೆ ಕೆಲವು ದಿನಗಳಿಂದ ಸದ್ದು ಮಾಡುತ್ತಲೇ ಇದೆ. ಇಲ್ಲ ಅಪ್ಪ-ಅಮ್ಮನಿಂದ ದೂರವಿರುತ್ತಾರೆ. ಡಿವೋರ್ಸ್ ಮಾಡೋಲ್ಲ ಎನ್ನುತ್ತಿದ್ದಾರೂ. ಈಗ್ಗೆ ಹಲವು ಪಾರ್ಟಿಗಳಲ್ಲಿ ಈ ಜೋಡಿ ನಡುವೆ ಎಲ್ಲವೂ ಸರಿ ಇಲ್ಲ ಎನ್ನುವುದು ಸಾಬೀತಾಗಿದೆ. ಆದರೆ, ಜ್ಯೋತಿಷಿಯೊಬ್ಬರ ಭವಿಷ್ಯ ಇದೀಗ ಮತ್ತೆ ಸದ್ದು ಮಾಡುತ್ತಿದ್ದು, ಈ ಜೋಡಿ ಸಂಬಂಧ ಬಗ್ಗೆ ಮತ್ತೆ ಮಾತನಾಡಲಾಗುತ್ತಿದೆ. 

PREV
16
ಐಶ್ವರ್ಯಾ ರೈ, ಅಭಿಷೇಕ್ ಬಚ್ಚನ್‌ ಡಿವೋರ್ಸ್: ಖ್ಯಾತ ಜ್ಯೋತಿಷಿ ಭವಿಷ್ಯ ನಿಜವಾಗುತ್ತಾ?

ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್ ಬಾಲಿವುಡ್‌ನ ಅತ್ಯಂತ ಮುದ್ದಾದ ಜೋಡಿಗಳಲ್ಲಿ ಒಂದು. ಆದರೆ ಡಿವೋರ್ಸ್ ರೂಮರ್ಸ್ ಕಾರಣಕ್ಕೆ ಈ ಜೋಡಿ ಈಗ ಸುದ್ದಿಯಲ್ಲಿದ್ದಾರೆ.

26

ಇತ್ತೀಚೆಗೆ ದುಬೈನಲ್ಲಿ ನಡೆದ ಐಫಾ ಹಾಗೂ ಸೈಮಾ ಈ ಎರಡು ಅಂತಾರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಸಮಾರಂಭದಲ್ಲಿ ಅಭಿಷೇಕ್ ಬಚ್ಚನ್ ಕಾಣಿಸಿಕೊಂಡಿರಲಿಲ್ಲ, ಐಶ್ವರ್ಯಾ ಮಗಳು ಆರಾಧ್ಯ ಇಬ್ಬರೇ ಈ ಸಮಾರಂಭದಲ್ಲಿ ಭಾಗವಹಿಸಿ ಪ್ರಶಸ್ತಿಯೊಂದಿಗೆ ಬಂದಿದ್ದರು. ಇದಕ್ಕೂ ಮೊದಲು ಜುಲೈನಲ್ಲಿ ನಡೆದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮದುವೆಯಲ್ಲಿಯೂ ಈ ಜೋಡಿ ಬೇರೆ ಬೇರೆಯಾಗಿ ಬಂದಿದ್ದರು. ಇದಾದ ನಂತರ ಇವರ ಡಿವೋರ್ಸ್‌ ಬಗ್ಗೆ ಊಹಾಪೋಹಗಳು ಹಬ್ಬಿದ್ದವು.

36

ಈ ನಡುವೆ ಪ್ರಸಿದ್ಧ ಜ್ಯೋತಿಷಿ ಜಗನ್ನಾಥ್ ಗುರೂಜಿ, ಐಶ್ವರ್ಯಾ ರೈ ಮತ್ತು ಅಭಿಷೇಕ್ ಅವರ ವಿಚ್ಛೇದನದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಜಗನ್ನಾಥ್ ಗುರೂಜಿ ಅವರ ಸೆಲೆಬ್ರಿಟಿಗಳ ಬಗ್ಗೆ ಭವಿಷ್ಯ ನುಡಿದು ಫೇಮಸ್ ಆಗಿದ್ದು, ಅವರ ಭವಿಷ್ಯಗಳು ಹೆಚ್ಚಿನವು ನಿಜವಾಗಿದೆ. ಇತ್ತೀಚೆಗೆ ಅವರು ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್ ಅವರ ಮದುವೆಯ ಬಗ್ಗೆ ಮಾತನಾಡಿ ಅದು ಹೆಚ್ಚು ಕಾಲ  ಉಳಿಯುವುದಿಲ್ಲ ಎಂದು ಹೇಳಿದರು. ಅವರು ತಮ್ಮ ಮಗಳು ಆರಾಧ್ಯಾಳ ಮೇಲಿನ ಪ್ರೀತಿಯಿಂದಾಗಿ ಒಟ್ಟಿಗೆ ಇದ್ದಾರೆ ಎಂದು ಅವರು ಜ್ಯೋತಿಷಿ ಹೇಳಿದ್ದಾರೆ.

46

ಅವರಿಬ್ಬರ ಜಾತಕದಲ್ಲಿ ಬಹಳ ಹಿಂದೆಯೇ ದೂರಾಗುತ್ತಾರೆ ಎಂದು ಊಹಿಸಲಾಗಿತ್ತು ಅವರ ಜನ್ಮ ಕುಂಡಲಿಗಳಲ್ಲಿ ಹಾನಿಕಾರಕ ಪರಿಣಾಮಗಳ ಹೊರತಾಗಿಯೂ, ದಂಪತಿಗಳು ತಮ್ಮ ಮದುವೆಯನ್ನು ಉಳಿಸಿಕೊಳ್ಳಲು ಶ್ರಮಿಸಿದ್ದಾರೆ. ಆದರೂ ವಿವಿಧ ಸಂದರ್ಭಗಳಿಂದಾಗಿ ಈ ಜೋಡಿ ಶೀಘ್ರದಲ್ಲೇ ಬೇರ್ಪಡುತ್ತದೆ ಎಂದು ಜ್ಯೋತಿಷಿ ಭವಿಷ್ಯ ಹೇಳಿದ್ದಾರೆ.

56

ಇನ್ನೂ ಕೆಲ ವರ್ಷಗಳಲ್ಲಿ ಈ ಜೋಡಿ ಪ್ರೀತಿಯ ಕೊರತೆಯಿಂದ ಬೇರ್ಪಡಬಹುದು. ಆದರೆ ಐಶ್ವರ್ಯಾ ಮತ್ತು ಅಭಿಷೇಕ್ ನಡುವೆ ಯಾವಾಗಲೂ ಗೌರವ ಮತ್ತು ಸ್ನೇಹ ಇರುತ್ತದೆ ಎಂದು ಜ್ಯೋತಿಷಿ ಹೇಳಿದ್ದಾರೆ .2007 ರಲ್ಲಿ, ಐಶ್ವರ್ಯಾ ಮತ್ತು ಅಭಿಷೇಕ್ ತಮ್ಮ ಕುಟುಂಬ ಮತ್ತು ಸ್ನೇಹಿತರ ಸಮ್ಮುಖದಲ್ಲಿ ಮದುವೆಯಾಗಿದ್ದರು. ಅವರು 2011 ಈ ಜೋಡಿಗೆ ಮಗಳು ಮಗಳು ಆರಾಧ್ಯಾ ಜನಿಸಿದ್ದರು.

66

ಇದಲ್ಲದೆ, ಐಶ್ವರ್ಯಾ ರೈ ಬಚ್ಚನ್ ಅವರಿಗೆ ಮಾಂಗಲ್ಯ ದೋಷ ಇದೆ ಎಂದು ಹೇಳಲಾಗುತ್ತದೆ ಮತ್ತು ಅವರು ಅಭಿಷೇಕ್ ಬಚ್ಚನ್ ಅವರನ್ನು ಮದುವೆಯಾಗುವ ಮೊದಲು ಮರವನ್ನು ಮದುವೆಯಾಗಿದ್ದರು. ಎನ್ನಲಾಗಿದೆ. .

Read more Photos on
click me!

Recommended Stories