ಅಂತಹ ಒಂದು ಘಟನೆ ಅಲ್ಲು ಅರ್ಜುನ್ ಸಿನಿಮಾ ವಿಷಯದಲ್ಲಿ ನಡೆದಿದೆ. ತ್ರಿವಿಕ್ರಮ್, ಅಲ್ಲು ಅರ್ಜುನ್ ಕಾಂಬಿನೇಷನ್‌ನಲ್ಲಿ ಬಂದ ಜುಲಾಯಿ, ಸನ್ ಆಫ್ ಸತ್ಯಮೂರ್ತಿ, ಅಲಾ ವೈಕುಂಠಪುರಂಲೋ ಮೂರು ಚಿತ್ರಗಳು ಹಿಟ್ ಆಗಿವೆ. ಜುಲಾಯಿ ಸೂಪರ್ ಹಿಟ್ ಆದರೆ, ಅಲಾ ವೈಕುಂಠಪುರಂಲೋ ಚಿತ್ರವು ಬ್ಲಾಕ್‌ಬಸ್ಟರ್ ಹಿಟ್ ಆಯಿತು. ಇನ್ನು ಸನ್ ಆಫ್ ಸತ್ಯಮೂರ್ತಿ ಸಿನಿಮಾ ಸೂಪರ್ ಹಿಟ್ ಅಗಲಿಲ್ಲ. ಆದರೆ ಪರವಾಗಿಲ್ಲ ಅನ್ನಿಸುವ ಗೆಲುವು ಸಾಧಿಸಿತು.