15 ವರ್ಷಗಳ ಕಾಲ ಒಟ್ಟಿಗೆ ಇದ್ದ ಆಮೀರ್ ಖಾನ್ ಮತ್ತು ಕಿರಣ್ ರಾವ್ ದಂಪತಿಗಳು ಈ ವರ್ಷ ಜುಲೈನಲ್ಲಿ ವಿಚ್ಛೇದನ ಪಡೆದರು ಮತ್ತು ಅಂದಿನಿಂದ, ಅವರ ಡಿವೋರ್ಸ್ ಸುತ್ತ ಹಲವಾರು ಊಹಾಪೋಹಗಳು ನಡೆಯುತ್ತಿವೆ.
'15 ವರ್ಷಗಳಲ್ಲಿ ಒಟ್ಟಿಗೆ ಕಳೆದ ನಾವು ಪ್ರತಿ ಕ್ಷಣವನ್ನು ನಗುವಿನೊಂದಿಗೆ ಬದುಕಿದ್ದೇವೆ ಮತ್ತು ನಮ್ಮ ಸಂಬಂಧವು ನಂಬಿಕೆ, ಗೌರವ ಮತ್ತು ಪ್ರೀತಿಯಿಂದ ಬೆಳೆಯುತ್ತಲೇ ಇತ್ತು. ಈಗ ನಾವು ನಮ್ಮ ಜೀವನದಲ್ಲಿ ಹೊಸ ಅಧ್ಯಾಯ ಪ್ರಾರಂಭಿಸುತ್ತೇವೆ. ಗಂಡ ಮತ್ತು ಹೆಂಡತಿಯಂತಲ್ಲ ಆದರೆ ಒಬ್ಬರಿಗೊಬ್ಬರು ಸಹ-ಪೋಷಕರು ಮತ್ತು ಕುಟುಂಬವಾಗಿ ಇರುತ್ತೇವೆ ಎಂದು ಆಮೀರ್-ಕಿರಣ್ ಇಬ್ಬರೂ ಹೇಳಿಕೆ ಹೇಳಿಕೆ ನೀಡಿದ್ದರು.
ಆಮೀರ್ ಮತ್ತು ಕಿರಣ್ ತಮ್ಮ ಪ್ರತ್ಯೇಕತೆಯನ್ನು ಘೋಷಿಸಿದಾಗ ದಂಗಲ್ ಸಿನಿಮಾ ದಕೋ ಸ್ಟಾರ್ ಫಾತಿಮಾ ಸನಾ ಶೇಖ್ ಅವರನ್ನು ನೆಟಿಜನ್‌ಗಳು ನಿರ್ದಯವಾಗಿ ಟ್ರೋಲ್ ಮಾಡಿದರು. ವಿಚ್ಛೇದನದ ಹಿಂದೆ ನಟಿ ಕಾರಣ ಎಂದು ಟ್ರೋಲ್‌ಗಳು ಆರೋಪಿಸಿ ಅವರ ವಿರುದ್ಧ ವಾಗ್ದಾಳಿ ನೆಡೆಸಿದರು.
ಇತ್ತೀಚೆಗೆ, ಆಮೀರ್ ಖಾನ್ ಮತ್ತು ಅವರ 'ದಂಗಲ್' ಸಹನಟಿ ಫಾತಿಮಾ ಸನಾ ಶೇಖ್ ಅವರ ಕೆಲವು ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಬಾಲಿವುಡ್ ಮಿಸ್ಟರ್ ಪರ್ಫೆಕ್ಷನಿಸ್ಟ್ ಫಾತಿಮಾ ಅವರೊಂದಿಗೆ ಮದುವೆಯಾಗಿದೆ ಎಂದು ಫೋಟೋ ಸೂಚಿಸಿದೆ.
ಆದಾಗ್ಯೂ, ಇದು ನಿಜವಲ್ಲ ಮತ್ತು ಫೋಟೋವು ವಾಸ್ತವವಾಗಿ ಮಾರ್ಫ್ ಮಾಡಲಾಗಿದೆ. ಮೂಲ ಫೋಟೋದಲ್ಲಿ, ಕಿರಣ್ ರಾವ್ ಜೊತೆಗೆ ಆಮೀರ್ ನಿಂತಿದ್ದರು. ಮಾಜಿ ದಂಪತಿಗಳು ಆಕಾಶ್ ಅಂಬಾನಿ ಮತ್ತು ಶ್ಲೋಕಾ ಮೆಹ್ತಾ ಅವರ ನಿಶ್ಚಿತಾರ್ಥ ಸಮಾರಂಭದಲ್ಲಿ ಪಾಪರಾಜಿಗಾಗಿ ಪೋಸ್ ನೀಡಿದ್ದರು.
ಅಂತರ್ಜಾಲದಲ್ಲಿ ವೈರಲ್ ಆಗಿರುವ ಫೋಟೋದಲ್ಲಿ ಕಿರಣ್ ಅವರ ಮುಖದ ಮೇಲೆ ಫಾತಿಮಾ ಅವರ ಮುಖವನ್ನು ಅಳವಡಿಸಲಾಗಿದೆ ಮತ್ತು ಫಾತಿಮಾ ಅವರು ಹಣೆಯ ಮೇಲೆ ಸಿಂಧೂರವನ್ನು ತೋರಿಸಿಲಾಗಿದೆ. ಫೋಟೋಗಳನ್ನು ಮಾರ್ಫ್ ಮಾಡಲಾಗಿದೆ.
ಆಮೀರ್ ಮತ್ತು ಫಾತಿಮಾ ಅವರ ಸಿಕ್ರೇಟ್ ಮದುವೆಯಲ್ಲಿ ಯಾವುದೇ ಸತ್ಯವಿಲ್ಲ. ಮತ್ತೊಂದೆಡೆ, ಆಮೀರ್ ಮತ್ತು ಫಾತಿಮಾ 'ದಂಗಲ್' ಮತ್ತು 'ಥಗ್ಸ್ ಆಫ್ ಹಿಂದೂಸ್ತಾನ್' ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ ಮತ್ತು ಇಬ್ಬರ ನಡುವೆ ಉತ್ತಮ ಸ್ನೇಹ ಇದೆ.