Alia Bhatt Festive Looks: ಸಿಂಪಲ್ ಟ್ರೆಡಿಷನಲ್ ಲುಕ್‌ನಲ್ಲಿ ಮಿಂಚಿದ ಅಲಿಯಾ!

First Published | Dec 25, 2021, 5:02 PM IST

ಆಲಿಯಾ ಭಟ್ (Alia Bhatt) ಬಾಲಿವುಡ್‌ನ (Bollywood) ಅತ್ಯಂತ ಸುಂದರ ನಟಿಯರಲ್ಲಿ ಒಬ್ಬರು. ಅವರು ತಮ್ಮ ಸ್ಟೈಲ್‌ ಹಾಗೂ ಲುಕ್‌ನಿಂದ ಅಭಿಮಾನಿಗಳನ್ನು ಸೆಳೆಯುದರಲ್ಲಿ ಹಿಂದೆ ಬಿದ್ದಿಲ್ಲ. ವಿಶೇಷವಾಗಿ ಅವರ ಎಥ್ನಿಕ್‌ ಲುಕ್‌. ಇತ್ತಿಚೀಗೆ ಅವರು ಧರಿಸಿದ್ದ   ಬೇಜ್‌ ಕಲರ್‌ ಔಟ್‌ಫಿಟ್‌ನಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದರು. ಆಲಿಯಾರ ಇಂಡಿಯನ್‌ ಡ್ರೆಸ್‌ನ ಫೋಟೋಗಳು ಸಖತ್‌ ವೈರಲ್‌ ಆಗಿವೆ. 
 

ಸಾಂಪ್ರದಾಯಿಕ ಉಡುಗೆಯಲ್ಲಿ ಆಲಿಯಾ ಭಟ್‌ ಅವರ ಇತ್ತೀಚಿನ ಫೋಟೋಗಳು ಅಂತರ್ಜಾಲದಲ್ಲಿ ಕಾಣಿಸಿಕೊಂಡಿವೆ. ಆಲಿಯಾ ಅವರ  ಸ್ಟೈಲಿಸ್ಟ್ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೋಟೋಗಳಲ್ಲಿ ನಟಿ ನಿಜವಾದ ಇಂಡಿಯನ್‌ ಬ್ಯೂಟಿಯಂತೆ  ಕಂಗಗೊಳಿಸುತ್ತಿದ್ದಾರೆ.

ಫೋಟೋಗಳಲ್ಲಿ ಆಲಿಯಾ ಭಟ್ ಬೇಜ್ ಕಲರ್‌ನ ಮನೀಶ್ ಮಲ್ಹೋತ್ರಾ ಡಿಸೈನ್‌ ಮಾಡಿದ ಡ್ರೆಸ್‌ ಧರಿಸಿದ್ದಾರೆ. ಆಲಿಯಾ ಸರಳವಾದ ಸಲ್ವಾರ್ ಕಮೀಜ್ ಧರಿಸಿದ್ದರು. ಆದರೆ ನಟಿಯ ಲುಕ್‌ಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ.  

Tap to resize

ಪೋನಿಟೇಲ್ ಅನ್ನು ಕಟ್ಟಿರುವ ಆಲಿಯಾ ಕಿವಿಗೆ ಭಾರವಾದ ಜುಮುಕಿಗಳನ್ನು ಧರಿಸಿದ್ದಾರೆ ಮತ್ತು ಕ್ಯಾಮೆರಾಗೆ ಸ್ಟೈಲಿಶ್ ಆಗಿ ಪೋಸ್ ನೀಡಿದ್ದಾರೆ. ಮಿನಿಮಮ್‌ ಮೇಕಪ್‌ನಲ್ಲಿ ಕಾಣಿಸಿಕೊಂಡಿರುವ ಆಲಿಯಾ ಹಣೆಗೆ ಕಪ್ಪು ಚುಕ್ಕೆ ಇಟ್ಟಿದ್ದಾರೆ ಅಷ್ಟೇ. 

ತುಂಬಾ ಸಿಂಪಲ್‌ ಆಲಂಕಾರದಲ್ಲಿ ಕಾಣಿಸಿಕೊಂಡಿರುವ ಆಲಿಯಾ ಗೋಲ್ಡನ್‌ ಕಲರ್‌ ಹೀಲ್ಡ್‌ ಸ್ಯಾಂಡಲ್‌ ಧರಿಸಿದ್ದಾರೆ. ಕೇವಲ ಕೈ ಬೇರಳಿಗೆ ಉಂಗುರಗಳನ್ನು ಮಾತ್ರ ಧರಿಸಿರುವ ನಟಿ ಕುತ್ತಿಗೆಗೆ ಯಾವುದೇ ಆಭರಣ ಧರಿಸದೆ ಹಾಗೇ ಖಾಲಿ ಬಿಟ್ಟಿದ್ದಾರೆ. 

ಈ ನಡುವೆ ಆಲಿಯಾ ಭಟ್‌ ತಮ್ಮ ಮುಂದಿನ ಸಿನಿಮಾ ಫ್ಯಾನ್‌ ಇಂಡಿಯಾ ರಿಲೀಸ್‌ ಬ್ರಹ್ಮಾಸ್ತ್ರದ ಪ್ರಮೋಷನ್‌ನಲ್ಲಿ ಬ್ಯುಸಿ ಇದ್ದಾರೆ. ಈ ಸಿನಿಮಾದಲ್ಲಿ ಆಲಿಯಾ ತಮ್ಮ ಬಾಯ್‌ಫ್ರೆಂಡ್‌ ರಣಬೀರ್‌ ಕಪೂರ್‌ ಜೊತೆ ಸ್ಕ್ರೀನ್‌ ಶೇರ್‌ ಮಾಡಿಕೊಳ್ಳಲಿದ್ದಾರೆ. ಈ ಜೋಡಿ ಮೊದಲ ಬಾರಿಗೆ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. 

ಇತ್ತೀಚೆಗೆ ಬ್ರಹ್ಮಾಸ್ತ್ರ ಮೋಷನ್ ಪೋಸ್ಟರ್ ಬಿಡುಗಡೆಗಾಗಿ ಆಲಿಯಾ ಹೈದರಾಬಾದ್‌ನಲ್ಲಿದ್ದರು. ಎಸ್‌ಎಸ್ ರಾಜಮೌಳಿ ಅವರು ಹೈದರಾಬಾದ್‌ನಲ್ಲಿ ಇದನ್ನು ಲಾಂಚ್‌ ಮಾಡಿದ್ದರು ಮತ್ತು ರಣಬೀರ್ ಕಪೂರ್, ನಾಗಾರ್ಜುನ ಅಕ್ಕಿನೇನಿ, ಅಯನ್ ಮುಖರ್ಜಿ ಮತ್ತು ಕರಣ್ ಜೋಹರ್ ಈವೆಂಟ್‌ನ ಭಾಗವಾಗಿದ್ದರು.

ಆಲಿಯಾ ಮುಂದಿನ ದಿನಗಳಲ್ಲಿ RRR ಸಿನಿಮಾ ನಲ್ಲಿ ಜೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಎಸ್ ಎಸ್ ರಾಜಮೌಳಿ ನಿರ್ದೇಶಿಸಿರುವ ಈ ಸಿನಿಮಾ ಜನವರಿ 7, 2022 ರಂದು ಬಿಡುಗಡೆಯಾಗಲಿದೆ. ಇದಲ್ಲದೇ, ಆಲಿಯಾ ಸಂಜಯ್ ಲೀಲಾ ಬನ್ಸಾಲಿ ಅವರೊಂದಿಗೆ  ಗಂಗೂಬಾಯಿ ಕಥಿಯಾವಾಡಿ ಸಿನಿಮಾವನ್ನು ಹೊಂದಿದ್ದಾರೆ.

Latest Videos

click me!