Sai Pallavi No Makeup Look: ಝೀರೋ ಮೇಕಪ್, ಸಾಯಿ ಪಲ್ಲವಿ ಸಹಜ ಸುಂದರಿ

First Published | Dec 25, 2021, 2:36 PM IST

ಸೌತ್ ನಟಿ ಸಾಯಿ ಪಲ್ಲವಿ ಸಹಜ ಸುಂದರಿ, ನೋ ಮೇಕಪ್‌ನಲ್ಲೂ ಅದ್ಭುತವಾಗಿ ಕಾಣುತ್ತಾರೆ ಸೌತ್‌ನ ಈ ನಟಿ. ಸಾಯಿ ಪಲ್ಲವಿಯ ಕ್ಯೂಟೆಸ್ಟ್ ನ್ಯಾಚುರಲ್ ಲುಕ್ ನೋಡಿ

ಪ್ರೇಮಂ ನಟಿ ಸಾಯಿ ಪಲ್ಲವಿ ಹೈದರಾಬಾದ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ನೀಲಿ ಮತ್ತು ಗುಲಾಬಿ ಹೂವಿನ ಒಂದು ಸಿಂಪಲ್ ಡ್ರೆಸ್‌ನಲ್ಲಿ ಝೀರೋ ಮೇಕ್ಅಪ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ತನ್ನ ಕೂದಲನ್ನು ಸಡಿಲವಾಗಿ ಇಟ್ಟುಕೊಂಡಿದ್ದರು.

ಸಾಮಾನ್ಯವಾಗಿ ಹೆಚ್ಚಿನ ಮೇಕಪ್‌ ಆರಿಸಿಕೊಳ್ಳದ ಸಾಯಿ ಪಲ್ಲವಿ, ಖಂಡಿತವಾಗಿಯೂ ಈ ಬಾರಿ ನೋ ಮೇಕಪ್‌ಲುಕ್‌ಗೆ ನಿಜವಾದ ಅರ್ಥ ಕೊಟ್ಟಿದ್ದಾರೆ. ಹೆಚ್ಚಿನ  ಸಂದರ್ಭಗಳಲ್ಲಿ ನಟಿ ಕನಿಷ್ಠ ಮೇಕ್ಅಪ್‌ನೊಂದಿಗೆ ಕ್ಯಾಮೆರಾ ಎದುರಿಸಿದ್ದಾರೆ.

Tap to resize

ಸಾಯಿ ಪಲ್ಲವಿ ಇತ್ತೀಚೆಗೆ ಬಿಡುಗಡೆಯಾದ ಶ್ಯಾಮ್ ಸಿಂಗ್ ರಾಯ್‌ನಲ್ಲಿ ಸ್ಟಾರ್ ನಾನಿ ಜೊತೆ ನಟಿಸಿದ್ದು ಈಗ ಸಿನಿಮಾ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರ ನಿನ್ನೆ ಚಿತ್ರಮಂದಿರಗಳಲ್ಲಿ ತೆರೆಕಂಡಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಈ ಸಿನಿಮಾವನ್ನು ರಾಹುಲ್ ಸಂಕೃತ್ಯನ್ ನಿರ್ದೇಶಿಸಿದ್ದಾರೆ. ಕೃತಿ ಶೆಟ್ಟಿ ಮತ್ತು ಮಡೋನಾ ಸೆಬಾಸ್ಟಿಯನ್ ಸಹ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಮಿಕ್ಕಿ ಜೆ.ಮೇಯರ್ ಸಂಗೀತ ನೀಡಿದ್ದರೆ, ಸಾನು ಜಾನ್ ವರ್ಗೀಸ್ ಛಾಯಾಗ್ರಹಣವನ್ನು ನಿಭಾಯಿಸಿದ್ದಾರೆ.

ಕೋಲ್ಕತ್ತಾ ಮೂಲದ ಈ ಸಿನಿಮಾ ಪುನರ್ಜನ್ಮದ ಕುರಿತು ಇದೆ. ಚಿತ್ರದಲ್ಲಿ ನಾನಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಾಯಿ ಪಲ್ಲವಿ ಮತ್ತು ನಾನಿ ಅಭಿನಯದ ಸಿನಿಮಾಗೆ ವೆಂಕಟ್ ಬೋಯನಪಲ್ಲಿ ಅವರು ಬಂಡವಾಳ ಹೂಡಿದ್ದಾರೆ.

Latest Videos

click me!