ಧರ್ವವನ್ನೇ ಬದಲಿಸಿಕೊಂಡು ಹೇಮ ಮಾಲಿನಿಯನ್ನು ವರಿಸಿದ ಧರ್ಮೇಂದ್ರ ಜೊತೆಗೇಕಿಲ್ಲ?

Published : Aug 01, 2023, 06:12 PM IST

ಬಾಲಿವುಡ್‌ನ ಡ್ರೀಮ್ ಗರ್ಲ್ ಹೇಮಾ ಮಾಲಿನಿಯವರ (Hema Malini) ಹಳೆಯ ಸಂದರ್ಶನವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಈ ಸಂದರ್ಶನದಲ್ಲಿ ಅವರು ಧರ್ಮೇಂದ್ರರಿಂದ (Dharmendra)ಬೇರ್ಪಟ್ಟ ಬಗ್ಗೆ ಮಾತನಾಡುತ್ತಿದ್ದಾರೆ.

PREV
17
ಧರ್ವವನ್ನೇ ಬದಲಿಸಿಕೊಂಡು ಹೇಮ ಮಾಲಿನಿಯನ್ನು ವರಿಸಿದ ಧರ್ಮೇಂದ್ರ ಜೊತೆಗೇಕಿಲ್ಲ?

ಬಾಲಿವುಡ್‌ನ ಜನಪ್ರಿಯ ಜೋಡಿ ಹೇಮಾ ಮಾಲಿನಿ ಮತ್ತು ಧರ್ಮೇಂದ್ರ ಅವರ ಪ್ರೇಮಕಥೆಯು ಎಲ್ಲಾ ಸಂಪ್ರದಾಯಗಳನ್ನು ಧಿಕ್ಕರಿಸುತ್ತದೆ. ಆದರೆ, ಆಗಲೇ ಮದುವೆಯಾಗಿದ್ದರಿಂದ ಧರ್ಮೇಂದ್ರರ ಸಂಬಂಧವನ್ನು ಹೇಮಾ ಪೋಷಕರು ಆರಂಭದಲ್ಲಿ ಒಪ್ಪಿರಲಿಲ್ಲ. 

27

1980 ರಲ್ಲಿ ವಿವಾಹವಾದ ಹೇಮಾ ಮಾಲಿನಿ ಮತ್ತು ಧರ್ಮೇಂದ್ರ 43 ವರ್ಷಗಳ ನಂತರವೂ ಸಂತೋಷವಾಗಿದ್ದಾರೆ. ಈ ನಡುವೆ ಹೇಮಾ ಅವರ ಸಂದರ್ಶನವೊಂದು ಮುನ್ನೆಲೆಗೆ ಬಂದಿದ್ದು, ಧರ್ಮೇಂದ್ರ ಜತೆಗಿನ ಸಂಬಂಧದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಇದರೊಂದಿಗೆ ಪತಿಯಿಂದ ದೂರ ಉಳಿಯಲು ಕಾರಣವನ್ನೂ ಹೇಳುತ್ತಿದ್ದಾರೆ.

37

 'ಯಾರು ಇದನ್ನು ಬಯಸುವುದ್ದಿಲ್ಲ ಆದರೆ. ಆದಾಗಿಯೇ ಅದು  ಸಂಭವಿಸುತ್ತದೆ ಮತ್ತು ಏನಾಗಿದೆ ಎಂಬುದನ್ನು ನೀವು ಒಪ್ಪಿಕೊಳ್ಳಬೇಕು. ಇಲ್ಲದಿದ್ದರೆ, ಯಾರೂ ತಮ್ಮ ಜೀವನವನ್ನು ಹೀಗೆ ಬದುಕಲು ಬಯಸುವುದಿಲ್ಲ. ಪ್ರತಿಯೊಬ್ಬ ಮಹಿಳೆಯೂ  ಸಾಮಾನ್ಯ ಕುಟುಂಬದಂತೆ ಗಂಡ ಮತ್ತು ಮಕ್ಕಳನ್ನು ಬಯಸುತ್ತಾರೆ, ಆದರೆ ಎಲ್ಲೋ, ನೀವು ಅಂದುಕೊಂಡಂತೆ ಆಗುವುದಿಲ್ಲ. ಅದರ ಬಗ್ಗೆ ನನಗೆ ಬೇಸರವಿಲ್ಲ. ನಾನು ಸಂತೋಷವಾಗಿದ್ದೇನೆ. ನನಗೆ ಇಬ್ಬರು ಮಕ್ಕಳಿದ್ದು, ಅವರನ್ನು ಚೆನ್ನಾಗಿ ಬೆಳೆಸಿದ್ದೇನೆ' ಎಂದು ಹೇಮಮಾಲಿನಿ ಹೇಳಿಕೊಂಡಿದ್ದಾರೆ.

47

'ಖಂಡಿತ, ಧರ್ಮೇಂದ್ರ ಯಾವಾಗಲೂ ಇರುತ್ತಿದ್ದರು. ಮಕ್ಕಳ ಮದುವೆ ಬಗ್ಗೆ ಅವರಿಗೂ ಚಿಂತೆ ಇತ್ತು. ಎಲ್ಲವೂ ಆಗುತ್ತದೆ ಎಂದು ನಾನು ಯಾವಾಗಲೂ ಅವರಿಗೆ ಹೇಳುತ್ತಿದ್ದೆ' ಎಂದು ಹೇಮಾ ಮಾಲಿನಿ ಹಂಚಿಕೊಂಡಿದ್ದಾರೆ.

57

ಹೇಮಾ ಮಾಲಿನಿ ಅವರ ಜೀವನಚರಿತ್ರೆ 'ಹೇಮಾ ಮಾಲಿನಿ: ಬಿಯಾಂಡ್ ದಿ ಡ್ರೀಮ್ ಗರ್ಲ್' ನಲ್ಲಿ, ನಟಿಯ ತಾಯಿ ಜಯ ಚಕ್ರವರ್ತಿ ಜಿತೇಂದ್ರ ಅವರನ್ನು ಮದುವೆಯಾಗಲು ಮನವೊಲಿಸಲು ಸಾಕಷ್ಟು ಪ್ರಯತ್ನಿಸಿದರು, ಆದರೆ ಹೇಮಾ ಒಪ್ಪಲಿಲ್ಲ ಎಂದು ವಿವರವಾಗಿ ವಿವರಿಸಲಾಗಿದೆ.

67

ಹೇಮಾ ಮತ್ತು ಧರ್ಮೇಂದ್ರ ಅವರ ಸ್ನೇಹವು 'ತುಮ್ ಹಸೀನ್ ಮೈ ಜವಾನ್' ಚಿತ್ರದ ಸೆಟ್‌ನಲ್ಲಿ ಪ್ರಾರಂಭವಾಯಿತು ಮತ್ತು ನಂತರ ಅವರಿಬ್ಬರೂ 1980 ರಲ್ಲಿ ವಿವಾಹವಾದರು.

77

ಧರ್ಮೇಂದ್ರ ಅವರಿಗೆ ಹೇಮಾ ಮಾಲಿನಿ ಅವರಿಗೆ ಇಶಾ ಮತ್ತು ಅಹಾನಾ ಡಿಯೋಲ್ ಎಂಬ  ಇಬ್ಬರು ಮಕ್ಕಳಿದ್ದಾರೆ.  ಹೇಮಾ ಅವರನ್ನು ಧರ್ಮೇಂದ್ರ ಅವರ ಎರಡನೇ ಮದುವೆಯಾಗಿದ್ದಾರೆ.
 

Read more Photos on
click me!

Recommended Stories