ಅನಿಲ್ ಕಪೂರ್ ದೀಪಾವಳಿ ಬ್ಯಾಷ್: ಅರ್ಜುನ್ ಕಪೂರ್ ಜೊತೆ ಕಾಣಿಸಿಕೊಂಡ ಮಲೈಕಾ !

Suvarna News   | Asianet News
Published : Nov 06, 2021, 04:16 PM ISTUpdated : Nov 06, 2021, 04:26 PM IST

ಪ್ರತಿ ವರ್ಷದಂತೆ ಈ ಬಾರಿಯು ಅನಿಲ್‌ ಕಪೂರ್‌ (Anil Kapoor)  ಮನೆಯಲ್ಲಿ ಗ್ರ್ಯಾಂಡ್‌ ದೀಪಾವಳಿ (Diwali 2021) ಪಾರ್ಟಿ ಹೋಸ್ಟ್‌ ಮಾಡಲಾಯಿತು. ಈ ಪಾರ್ಟಿಯಲ್ಲಿ, ಅವರ ಕುಟುಂಬ ಸದಸ್ಯರು ಮತ್ತು ಕೆಲವು ಸ್ನೇಹಿತರು ಸಹ ಕಾಣಿಸಿಕೊಂಡರು. ಅನಿಲ್ ಕಪೂರ್  ಅವರ ಅಣ್ಣನ ಮಗ  ಅರ್ಜುನ್ ಕಪೂರ್ ತಮ್ಮ ಗೆಳತಿ ಮಲೈಕಾ ಅರೋರಾ ಅವರೊಂದಿಗೆ ಪಾರ್ಟಿಗೆ ಆಗಮಿಸಿದರು. ಮಲೈಕಾ ತನ್ನ ಎಥ್ನಿಕ್‌ ಲುಕ್‌ನಿಂದ ಪಾರ್ಟಿಗೆ ಮೆರಗು ನೀಡಿದ್ದಾರೆ. ಅನಿಲ್ ಕಪೂರ್ (Arjun Kapoor) ಮನೆ ಪಾರ್ಟಿಯಲ್ಲಿ ಭಾಗವಹಿಸಿದ ಸೆಲೆಬ್ರಿಟಿಗಳ ಫೋಟೋಗಳು ಇಲ್ಲಿವೆ.  ದೀಪಾವಳಿ 2021 ಅನಿಲ್ ಕಪೂರ್ ಪಾರ್ಟಿ ಮಲೈಕಾ ಅರೋರಾ ಅರ್ಜುನ್ ಕಪೂರ್ ಇತರ ಸೆಲೆಬ್ರಿಟಿಗಳೊಂದಿಗೆ ಕಾಣಿಸಿಕೊಂಡಿದ್ದಾರೆ

PREV
18
ಅನಿಲ್ ಕಪೂರ್ ದೀಪಾವಳಿ ಬ್ಯಾಷ್: ಅರ್ಜುನ್ ಕಪೂರ್ ಜೊತೆ ಕಾಣಿಸಿಕೊಂಡ ಮಲೈಕಾ  !

ಅರ್ಜುನ್ ಕಪೂರ್ ಅವರ ಜೊತೆ  ಅನಿಲ್ ಕಪೂರ್ ಅವರ ದೀಪಾವಳಿ ಬಾಷ್ ತಲುಪಿದ ಮಲೈಕಾ ಅರೋರಾ, ಹಸಿರು ಬ್ಯಾಕ್‌ಲೆಸ್ ಬ್ಲೌಸ್ ಮತ್ತು ಡಾರ್ಕ್ ಕ್ವೀನ್ ಪಿಂಕ್‌ ಕಲರ್ ಸೀರೆಯಲ್ಲಿ ಕಾಣಿಸಿಕೊಂಡರು.

28

ನ್ಯೂಡ್‌ ಮೇಕಪ್‌ನೊಂದಿಗೆ  ಮಲೈಕಾ ಅರೋರಾ ಕೂದಲಿಗೆ ಮಲ್ಲಿಗೆ ಮುಡಿದಿದ್ದರು.ಮೊದಮೊದಲು ಮಾಧ್ಯಮದ ಛಾಯಾಗ್ರಾಹಕರ ಮೇಲೆ ಕೊಂಚ ಕೋಪಗೊಂಡ ಅರ್ಜುನ್ ಕಪೂರ್ ನಂತರ ನಗುನಗುತ್ತಾ ಮಲೈಕಾ ಅರೋರಾ (Malaika Arora) ಜೊತೆ  ಪೋಸ್ ನೀಡಿದರು.

38

ಜಾನ್ವಿ ಕಪೂರ್  (Janhvi Kapoor) ಹಸಿರು ಸೀರೆಯನ್ನು ಧರಿಸಿ ದೀಪಾವಳಿ ಪಾರ್ಟಿಯಲ್ಲಿ ಪಾಲ್ಗೊಳ್ಳಲು ಚಿಕ್ಕಪ್ಪ ಅನಿಲ್ ಕಪೂರ್ ಮನೆಗೆ ಆಗಮಿಸಿದರು. ಈ ಸಂದರ್ಭದಲ್ಲಿ ಅವರು ತುಂಬಾ ಸುಂದರವಾಗಿ ಕಾಣುತ್ತಿದ್ದರು.

48

ಬೋನಿ ಕಪೂರ್ (Boney Kapoor) ಇಬ್ಬರು ಪುತ್ರಿಯರಾದ ಖುಷಿ ಕಪೂರ್ ಮತ್ತು ಜಾನ್ವಿ ಕಪೂರ್ ಅವರೊಂದಿಗೆ ಮಾಧ್ಯಮ ಛಾಯಾಗ್ರಾಹಕರಿಗೆ ಪೋಸ್ ನೀಡಿದರು. ಬೋನಿ ಬಿಳಿ ಬಣ್ಣದ ಕುರ್ತಾ-ಪೈಜಾಮಾವನ್ನು ಧರಿಸಿದ್ದರು. ಅದೇ ಸಮಯದಲ್ಲಿ, ಖುಷಿ (Khushi Kapoor) ಗುಲಾಬಿ ಬಣ್ಣದ ಲೆಹೆಂಗಾದಲ್ಲಿ ಕಾಣಿಸಿಕೊಂಡರು.

58

ಅನಿಲ್ ಕಪೂರ್ ( Anil Kapoor ) ಮಹಾ ಲಕ್ಷ್ಮಿಯನ್ನು ಸಂಪೂರ್ಣ ಆಚರಣೆಗಳೊಂದಿಗೆ ಪೂಜಿಸಿದರು. ಈ ಸಂದರ್ಭದಲ್ಲಿ ಅನಿಲ್ ಬಿಳಿ ಬಣ್ಣದ ಕುರ್ತಾ ಪೈಜಾಮ ಧರಿಸಿ ಕಾಣಿಸಿಕೊಂಡಿದ್ದರು.

68

ಪೂಜೆ ಮುಗಿಸಿ ಮನೆಯಿಂದ ಹೊರಬಂದ ಅನಿಲ್ ಕಪೂರ್ ಕ್ಯಾಮರಾಮನ್ ಗೆ ಪೋಸ್ ಕೊಟ್ಟರು ಹಾಗೂ ಬಳಿಕ ಎಲ್ಲರಿಗೂ ಸಿಹಿ ಹಂಚಿದರು. ಸಂಜಯ್ ಕಪೂರ್ (Sanjay Kapoor) ಅಣ್ಣ ಅನಿಲ್ ಕಪೂರ್ ಮನೆಯಲ್ಲಿ ನಡೆದ ದೀಪಾವಳಿ ಬ್ಯಾಷ್‌ನಲ್ಲಿ ಭಾಗವಹಿಸಿದ್ದರು.

78

ಈ ಸಂದರ್ಭದಲ್ಲಿ ಸಂಜಯ್ ವೈನ್ ಕಲರ್ ಕುರ್ತಾ ಪೈಜಾಮ ಧರಿಸಿದ್ದರು. ಸಂಜಯ್ ಕಪೂರ್ ಅವರ ಮಗಳು ಶನಯಾ ಕಪೂರ್ ಕೂಡ ಈ ಸಂದರ್ಭದಲ್ಲಿ ಕಾಣಿಸಿಕೊಂಡರು. ಹಸಿರು ಬಣ್ಣದ ಸೀರೆಯಲ್ಲಿ ಶನಯಾ ತುಂಬಾ ಸುಂದರವಾಗಿ ಕಾಣುತ್ತಿದ್ದರು.
 

88

ಸಂಜಯ್ ಕಪೂರ್ ಅವರ ಮಗಳು ಶನಯಾ ಕಪೂರ್ ( Shaayna Kapoor ) ಕೂಡ ಈ ಸಂದರ್ಭದಲ್ಲಿ ಕಾಣಿಸಿಕೊಂಡರು. ಹಸಿರು ಬಣ್ಣದ ಸೀರೆಯಲ್ಲಿ ಶನಯಾ ತುಂಬಾ ಸುಂದರವಾಗಿ ಕಾಣುತ್ತಿದ್ದರು.
 

Read more Photos on
click me!

Recommended Stories