Rashmika Mandanna: ಶ್ರೀವಲ್ಲಿಯಾಗಿ ಸಾನ್ವಿಯ ಬೋಲ್ಡ್ ಲುಕ್, ಹೇಗಿದೆ ?

First Published | Nov 6, 2021, 4:02 PM IST
  • Rashmika Mandanna: ಕಿರಿಕ್ ಚೆಲುವೆಯ ಲೇಟೆಸ್ಟ್ ಲುಕ್ ನೋಡಿ
  • Pushpa ಸಿನಿಮಾದಲ್ಲಿ ಕಿರಿಕ್ ಚೆಲುವೆ ಸಾನ್ವಿ ಹೀಗಿದ್ದಾಳೆ

ಕಿರಿಕ್ ಪಾರ್ಟಿ ಮೂಲಕ ಕನ್ನಡಿಗರ ಮನಗೆದ್ದ ಕೊಡಗಿನ ಕುವರಿ ನಂತರ ಹಿಂದಿರುಗಿ ನೋಡೇ ಇಲ್ಲ. ಸಾಲು ಸಾಲು ಸಿನಿಮಾ. ಟಾಲಿವುಡ್‌ನಲ್ಲಿ ಬಹುಬೇಡಿಕೆಯ ನಟಿಯಾಗಿ ಬೆಳೆದ ರಶ್ಮಿಕಾ ಈಗ ಬಾಲಿವುಡ್‌ನಲ್ಲೂ ಬ್ಯುಸಿ

ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಸಿಂಪಲ್ ಸುಂದರಿಯಾಗಿ ಕಾಣಿಸಿಕೊಂಡಿದ್ದ ರಶ್ಮಿಕಾ ಮಂದಣ್ಣ ಟಾಲಿವುಡ್‌ನಲ್ಲಿ ಕಾಲಿವುಡ್‌ನಲ್ಲಿಯೂ ಸಿನಿಮಾಗಳನ್ನು ಮಾಡಿ ಮಿಂಚಿದ್ದಾರೆ.

Tap to resize

ನಂತರ ಬಾದ್‌ಶಾ ಜೊತೆ ಟಾಪ್ ಟಕ್ಕರ್ ಆಲ್ಬಂ ಸಾಂಗ್ ಮಾಡಿ ಈಗ ಮಿಷನ್ ಮಜ್ನು ಮೂಲಕ ಬಾಲಿವುಡ್‌ಗೂ ಪಾದಾರ್ಪಣೆ ಮಾಡಿದ್ದಾರೆ.

ಅಂತೂ ಇಂತೂ ರಶ್ಮಿಕಾ ಭಾರತೀಯ ಸಿನಿ ರಂಗದಲ್ಲಿ ಸಖತ್ ಆಕ್ಟಿವ್ ಆಗಿ ಬೇಕಾದಷ್ಟು ಆಫರ್‌ಗಳನ್ನು ಪಡೆಯುತ್ತಾ ಸಿನಿಮಾ ಮಾಡ್ತಾ, ಜಿಮ್ ಮಾಡ್ತಾ ಜಾಲಿಯಾಗಿದ್ದಾರೆ.

ನಟಿಯ ಇತ್ತೀಚಿನ ತೆಲುಗು ರಿಲೀಸ್ ಪುಷ್ಪದಲ್ಲಿ ರಶ್ಮಿಕಾ ಅವರ ಲುಕ್ ಸಂಪೂರ್ಣ ಬದಲಾಗಿದೆ. ಟಾಪ್ ಟಕ್ಕರ್ ಆಲ್ಬಂ ಸಾಂಗ್‌ನಲ್ಲಿ ನಟಿ ಸ್ವಲ್ಪ ಮಾಡರ್ನ್ ಆಗಿ ಕಾಣಿಸಿಕೊಂಡಿದ್ದರು.

ಈಗ ಪುಷ್ಪ ಸಿನಿಮಾದಲ್ಲಿ ಸಖತ್ ಎಕ್ಸ್‌ಪೋಸಿಂಗ್ ಸ್ಟೈಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರೀವಲ್ಲಿ ಎಂಬ ಪಾತ್ರದಲ್ಲಿ ರಶ್ಮಿಕಾ ನಟಿಸಿದ್ದು ಅವರ ಕಾಸ್ಟ್ಯೂಮ್ & ಲುಕ್ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ನಟಿ ಹೆಚ್ಚು ಎಕ್ಸ್‌ಪೋಸಿಂಗ್ ಆಗಿ ಕಾಣಿಸಿಕೊಂಡಿದ್ದು ಶ್ರೀವಲ್ಲಿ ಪಾತ್ರದಲ್ಲಿ. ಸ್ವಲ್ಪ ಹಳೆಯ ಜಮಾನವನ್ನು ಹೋಲುವ ಸಿನಿಮಾದಂತಿದ್ದು ಇದರಲ್ಲಿ ರಶ್ಮಿಕಾ ಲುಕ್ ಕೂಡಾ ಹಳ್ಳಿ ಹುಡುಗಿಯದ್ದೆ.

ಕಿರಿಕ್ ಪಾರ್ಟಿ ಮೂಲಕ ಕನ್ನಡಿಗರ ಮನಗೆದ್ದ ಕೊಡಗಿನ ಕುವರಿ ನಂತರ ಹಿಂದಿರುಗಿ ನೋಡೇ ಇಲ್ಲ. ಸಾಲು ಸಾಲು ಸಿನಿಮಾ. ಟಾಲಿವುಡ್‌ನಲ್ಲಿ ಬಹುಬೇಡಿಕೆಯ ನಟಿಯಾಗಿ ಬೆಳೆದ ರಶ್ಮಿಕಾ ಈಗ ಬಾಲಿವುಡ್‌ನಲ್ಲೂ ಬ್ಯುಸಿ

ರಶ್ಮಿಕಾ ಶ್ರೀವಲ್ಲಿ ಪಾತ್ರದ ಪೋಸ್ಟರ್ ರಿಲೀಸ್ ಮಾಡಿದಾಗಲೂ ನಟಿಯನ್ನು ಸ್ವಲ್ಪ ಹಳೆಯ ಕಾಲದ ಮಹಿಳೆಯಾಗಿ ನೋಡಬಹುದಾಗಿತ್ತು. ಈಗ ಶ್ರೀವಲ್ಲಿ ಪಾತ್ರದ ಫೊಟೋಗಳು ಸೋಷಿಯಲ್ ಮೀಡಿಯಾದಲ್ಲಿ ಓಡಾಡುತ್ತಿವೆ.

ಹಸಿರು ಕುಪ್ಪಸದಲ್ಲಿ ಕಾಣಿಸಿಕೊಂಡ ರಶ್ಮಿಕಾ ಇಲ್ಲಿಯವರೆಗೆ ಮಾಡಿಸ ಸಿನಿಮಾಗಳಲ್ಲೇ ಹೆಚ್ಚು ಎಕ್ಸ್‌ಪೋಸ್ ರೀತಿಯಲ್ಲಿ ಕಾಸ್ಟ್ಯೂಮ್ ಧರಿಸಿದ್ದಾರೆ.

ಎದೆವರೆಗಿನ ಸ್ನಾನದ ಕಚ್ಚೆ ಕಟ್ಟಿದ ರೀತಿಯಲ್ಲಿ ನೀರಿನಲ್ಲಿಯೂ ಕೆಲವು ದೃಶ್ಯ ಶೂಟ್ ಮಾಡಲಾಗಿದ್ದು ಇದರಲ್ಲಿಯೂ ನಟಿ ಬೋಲ್ಡ್ ಆಗಿ ನಟಿಸಿದ್ದಾರೆ

Latest Videos

click me!