ರಶ್ಮಿಕಾ ಮಂದಣ್ಣಗೆ ಐ ಲವ್ ಯೂ ಎಂದ ವಿಜಯ್ ದೇವರಕೊಂಡ?

First Published | Nov 24, 2023, 5:33 PM IST

ರಣಬೀರ್ ಕಪೂರ್ (Ranbir Kapoor), ರಶ್ಮಿಕಾ ಮಂದಣ್ಣ  (Rashmika Mandanna) ಮತ್ತು ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರು ತಮ್ಮ 'ಆನಿಮಲ್‌'  ಚಿತ್ರದ ಪ್ರಚಾರಕ್ಕಾಗಿ ನಂದಮೂರಿ ಬಾಲಕೃಷ್ಣ ಅವರ ಟಾಕ್ ಶೋನಲ್ಲಿ ಕಾಣಿಸಿಕೊಂಡರು. ಕಾರ್ಯಕ್ರಮದ ಸಮಯದಲ್ಲಿ  ರಶ್ಮಿಕಾ ಅವರ ವದಂತಿಯ ಬಾಯ್‌ಫ್ರೆಂಡ್‌, ನಟ ವಿಜಯ್ ದೇವರಕೊಂಡ (Vijay Deverakonda) ಅವರಿಗೆ ಕಾಲ್‌  ಮಾಡಿದರು ಮತ್ತು ರಣಬೀರ್ ಕಪೂರ್ ರಶ್ಮಿಕಾ ಮತ್ತು ದೇವರಕೊಂಡ ಡೇಟಿಂಗ್ ವದಂತಿಗಳಿಗೆ ಇನ್ನಷ್ಷು ತುಪ್ಪ  ಸುರಿದಿದ್ದಾರೆ. ನಂದಮೂರಿ ಬಾಲಕೃಷ್ಣ ಶೋನಲ್ಲಿ ವಿಜಯ್ ದೇವರಕೊಂಡ ರಶ್ಮಿಕಾ  ಮಂದಣ್ಣಗೆ ಐ ಲವ್ ಯೂ ಹೇಳಿದ್ದಾರೆ ಎಂದು ವರದಿಗಳು ಹೇಳುತ್ತಿವೆ. 

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ನಡುವಿನ ರೊಮ್ಯಾಂಟಿಕ್ ಸಂಬಂಧದ ಸುತ್ತಲಿನ ಊಹಾಪೋಹಗಳು ಮತ್ತೊಮ್ಮೆ ವೇಗವನ್ನು ಪಡೆದುಕೊಂಡಿವೆ, 

ತೆಲುಗು ಸೂಪರ್‌ಸ್ಟಾರ್ ನಂದಮೂರಿ ಬಾಲಕೃಷ್ಣ ಅವರು ಆಯೋಜಿಸಿದ್ದ 'ಅನ್‌ಸ್ಟಾಪಬಲ್ ವಿತ್ ಎನ್‌ಬಿಕೆ 2' ಶೋನಲ್ಲಿ ರಣ್‌ಬೀರ್, ರಶ್ಮಿಕಾ ಜೊತೆಗೆ ತಮ್ಮ ಮುಂಬರುವ ಚಿತ್ರ  'ಆನಿಮಲ್' ಪ್ರಚಾರಕ್ಕಾಗಿ ಭಾಗವಹಿಸಿದ್ದರು.

Tap to resize

ಕಾರ್ಯಕ್ರಮದ ಸಮಯದಲ್ಲಿ, ಬಾಲಕೃಷ್ಣ ರಶ್ಮಿಕಾಗೆ   ಅರ್ಜುನ್ ರೆಡ್ಡಿ  ನಲ್ಲಿ ವಿಜಯ್ ದೇವರಕೊಂಡ ಮತ್ತು  ಆನಿಮಲ್‌ನಲ್ಲಿ ರಣಬೀರ್ ಕಪೂರ್ ಒಳಗೊಂಡಿರುವ ಪೋಸ್ಟರ್‌ಗಳಲ್ಲಿ ಒಂದನ್ನು ಆಯ್ಕೆ ಮಾಡಲು ಕೇಳಿಕೊಂಡರು. 

ರಶ್ಮಿಕಾ ಅವರ ಗೊಂದಲದ   ಮಧ್ಯೆ, ಶೋ ಹೋಸ್ಟ್‌ ಬಾಲಕೃಷ್ಣ ಅವರು ವಿಜಯ್ ದೇವರಕೊಂಡ ಅವರಿಗೆ ಕಾಲ್‌ ಮಾಡಿ ಅಭಿಪ್ರಾಯವನ್ನು ಕೇಳಲು ಸೂಚಿಸಿದರು. ನಂತರ  ಫೋನ್ ಕರೆಯಲ್ಲಿ, ಬಾಲಕೃಷ್ಣ   ಅವರು ಕಾರ್ಯಕ್ರಮದುದ್ದಕ್ಕೂ ರಶ್ಮಿಕಾ ಅವರನ್ನು 'ಕ್ರಷ್ಮಿಕಾ' ಎಂದು ಉಲ್ಲೇಖಿಸಿದ್ದಾರೆ ಎಂದು  ರಣಬೀರ್  ಬಹಿರಂಗಪಡಿಸಿದರು. 

ಇದಕ್ಕೆ ಪ್ರತಿಕ್ರಿಯಿಸಿದ ವಿಜಯ್, 'ಬಾಲಾ ಸರ್ ರಶ್ಮಿಕಾ ಅವರನ್ನು ಪ್ರೀತಿಸುತ್ತಾರೆ'ಎಂದಿದ್ದಾರೆ.ಬಾಲಕೃಷ್ಣ ವಿಜಯ್ ಅವರ  ಪ್ರೀತಿಯ ಬಗ್ಗೆ ಕೇಳಿದಾಗ, ನಟ 'ನಾನು ಸಂದೀಪ್ ರೆಡ್ಡಿ ವಂಗಾನನ್ನು ಪ್ರೀತಿಸುತ್ತೇನೆ' ಎಂದು ಉತ್ತರ ನೀಡಿದ್ದರು.

ವಿಜಯ್ ಅವರು  ರಣಬೀರ್ ಬಗ್ಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. 'ನಾನು ರಣಬೀರ್ ಅನ್ನು ತುಂಬಾ ಇಷ್ಟಪಡುತ್ತೇನೆ ಮತ್ತು ನಂತರ ನಾನು ಪ್ರೀತಿಸುತ್ತೇನೆ… ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದ ವಿಜಯ್‌  ನಿರ್ದಿಷ್ಟವಾಗಿ ಹೆಸರು ಹೇಳಲಿಲ್ಲ .
 

ಕರೆಯ ಸಮಯದಲ್ಲಿ, ರಣಬೀರ್ ಕಪೂರ್ ರಶ್ಮಿಕಾ ಮತ್ತು ವಿಜಯ್ ಅವರ ಬಾಂಧವ್ಯದ ಬಗ್ಗೆ ಆಸಕ್ತಿದಾಯಕ ವಿಷಯವವನ್ನು ಹಂಚಿಕೊಂಡರು. 

ವಿಜಯ್ ಅವರ ಟೆರೇಸ್‌ನಲ್ಲಿ ನಡೆದ  ಅರ್ಜುನ್ ರೆಡ್ಡಿ ಯಶಸ್ಸಿನ ಪಾರ್ಟಿಯಲ್ಲಿ ಸಂದೀಪ್ ರೆಡ್ಡಿ ವಂಗ ರಶ್ಮಿಕಾ ಅವರನ್ನು ಮೊದಲು ಭೇಟಿಯಾದರು ಎಂದು ಬಹಿರಂಗಪಡಿಸಿದರು. ರಶ್ಮಿಕಾ ನಾಚಿಕೆಪಡುತ್ತಾ, ರಣಬೀರ್  ಅವರು ಬಹಿರಂಗಪಡಿಸಿದ ವಿವರಗಳ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದರು. 

ಡಿಸೆಂಬರ್ 1 ರಂದು ಬಿಡುಗಡೆಯಾಗಲಿರುವ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ  ಆನಿಮಲ್‌ ಚಿತ್ರದಲ್ಲಿ ರಣಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಮೊದಲ ಬಾರಿಗೆ ತೆರೆ ಹಂಚಿಕೊಳ್ಳಲಿದ್ದಾರೆ.

Latest Videos

click me!