ಬ್ರ್ಯಾಂಡ್ ಪ್ರಮೋಷನ್‌ಗೆ ಈ ನಟಿ ಕೇಳಿದಷ್ಟು ದುಡ್ಡು ಕೊಡುತ್ತೆ ಕಂಪನಿಗಳು!

Published : Nov 23, 2023, 03:41 PM ISTUpdated : Nov 23, 2023, 03:52 PM IST

ಸಲ್ಮಾನ್ ಖಾನ್‌ ಹಾಗೂ ಕತ್ರೀನಾ ಅಭಿನಯದ ಟೈಗರ್‌ 3 ಸಿನಿಮಾದ ಕಾರಣದಿಂದ ಸದ್ಯ ಟ್ರೆಂಡಿಂಗ್‌ನಲ್ಲಿರುವ ಕತ್ರೀನಾ ಕೈಫ್ ಅವರ ಆದಾಯದ ಮೂಲ ಬರೀ ಸಿನಿಮಾ ಮಾತ್ರವಲ್ಲ, ಕೇಬ್ಯೂಟಿ ಎಂಬ ಕಾಸ್ಮೇಟಿಕ್ ಉದ್ಯಮದ ಒಡತಿಯೂ ಆಗಿರುವ ಕತ್ರೀನಾ ಕೈಫ್ ಅವರ ಆದಾಯದ ನಿವ್ವಳ ಮೌಲ್ಯ 224 ಕೋಟಿ. ಹಾಗಿದ್ರೆ ನಟನೆ ಅಲ್ಲದೇ ಕತ್ರೀನಾ ಅವರ ಆದಾಯದ ಮೂಲ ಏನು ಎಂಬುದರ ಡಿಟೇಲ್ ಇಲ್ಲಿದೆ ನೋಡಿ..

PREV
111
ಬ್ರ್ಯಾಂಡ್ ಪ್ರಮೋಷನ್‌ಗೆ ಈ ನಟಿ ಕೇಳಿದಷ್ಟು ದುಡ್ಡು ಕೊಡುತ್ತೆ ಕಂಪನಿಗಳು!
Katrina Kaif

ಬಾಲಿವುಡ್ ನಟಿ, ಕತ್ರಿನಾ ಕೈಫ್ ಭಾರತದ ಅತ್ಯಂತ ಪ್ರಸಿದ್ಧ ಹಾಗೂ ಶ್ರೀಮಂತ ನಟಿ ಎಂಬುದರಲ್ಲಿ ಯಾವುದೇ ಡೌಟ್ ಇಲ್ಲ, ತಮ್ಮ ಆಕರ್ಷಕ ನಟನೆ ಸೌಂದರ್ಯದಿಂದ ಹಲವು ವರ್ಷಗಳಿಂದ ಬಾಲಿವುಡ್ ಸಿನಿಮಾ ರಂಗವನ್ನು ಆಳುತ್ತಿರುವ ಕತ್ರೀನಾ  ದೇಶಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನ ಹೊಂದಿದ್ದಾರೆ. 

211
Katrina Kaif

ವರ್ಷದಿಂದ ವರ್ಷಕ್ಕೆ ಕತ್ರೀನಾ ಅಭಿನಯದಲ್ಲಿ ಮಹತ್ತರ ಬದಲಾವಣೆಯಾಗುವುದರ ಜೊತೆ ಜೊತೆಗೆ ಅವರ ಆದಾಯದ ಮೂಲವೂ ಕೂಡ ಹೆಚ್ಚುತ್ತಾ ಸಾಗಿದೆ. ಇದು ಅವರನ್ನು ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರನ್ನಾಗಿ ಮಾಡಿದೆ. 

311
Katrina Kaif

ವರ್ಷದಿಂದ ವರ್ಷಕ್ಕೆ ಕತ್ರೀನಾ ಅಭಿನಯದಲ್ಲಿ ಮಹತ್ತರ ಬದಲಾವಣೆಯಾಗುವುದರ ಜೊತೆ ಜೊತೆಗೆ ಅವರ ಆದಾಯದ ಮೂಲವೂ ಕೂಡ ಹೆಚ್ಚುತ್ತಾ ಸಾಗಿದೆ. ಇದು ಅವರನ್ನು ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರನ್ನಾಗಿ ಮಾಡಿದೆ. 

411
Katrina Kaif

ದೊಡ್ಡ ಬಜೆಟ್ ಸಿನಿಮಾಗಳ ಸರಣಿಯ ಜೊತೆ ಜೊತೆ ಜನಪ್ರಿಯ ನಟ ವಿಕ್ಕಿ ಕೌಶಲ್ ಮಡದಿಯಾಗಿ ಭಾರತದ ಸೊಸೆ ಆಗಿರುವ ಕ್ಯಾಟ್ ಇನ್ಸ್ಟಾಗ್ರಾಮ್‌ನಲ್ಲಿ  78 ಲಕ್ಷಕ್ಕೂ ಅಧಿಕ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಜೊತೆಗೆ ಭಾರತದ ಶ್ರೀಮಂತ ನಟಿ ಎನಿಸಿಕೊಂಡಿದ್ದಾರೆ. 

511
Katrina Kaif

ಕೆಲವು ವರದಿಯ ಪ್ರಕಾರ ಕತ್ರೀನಾ ಕೈಫ್ ಸಿನಿಮಾವೊಂದಕ್ಕೆ ತಮ್ಮ ಪಾತ್ರವೊಂದನ್ನು ಹೊಂದಿಕೊಂಡು 15 ರಿಂದ 20 ಕೋಟಿಯವರೆಗೆ ಚಾರ್ಜ್ ಮಾಡ್ತಾರಂತೆ. ಆದರೆ ಇದರ ಬಗ್ಗೆ ಖಚಿತತೆ ಇಲ್ಲ ಆದರೆ ಟೈಗರ್ 3 ಸಿನಿಮಾದ ಬಜೆಟ್ 300 ಕೋಟಿ ಇದನ್ನು ನೋಡಿದ ಮೇಲೆ ಅಭಿಮಾನಿಗಳು ಹಾಗೂ ಸಿನಿಮಾ ರಂಗದ ಪರಿಣಿತರು ಇದು ನಿಜವಾಗಿರಬಹುದು  ಎಂದು ಹೇಳ್ತಾರೆ. 

611
Katrina Kaif

ಇನ್ನು ಬ್ರಾಂಡ್ ಪ್ರಮೋಷನ್ ವಿಚಾರಕ್ಕೆ ಬರುವುದಾದರೆ ಒಂದು ಬ್ರಾಂಡ್ ಪ್ರಮೋಷನ್ ಮಾಡಲು ಕತ್ರೀನಾ 6 ರಿಂದ 7 ಕೋಟಿ ಪಡೆಯುತ್ತಾರಂತೆ. ಹಲವು ಬ್ರಾಂಡ್‌ಗಳ ಪ್ರಮೋಷನ್ ಮಾಡ್ತಿರುವ 40 ವರ್ಷದ ಈ ನಟಿ ಪ್ರತಿ ಬ್ರಾಂಡ್‌ಗೆ ಇಷ್ಟೊಂದು ವಸೂಲಿ ಮಾಡ್ತಾರೆ ಎಂದು ಫೈನಾನ್ಶಿಯಲ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಅದರಲ್ಲೂ ಕೆಲವು ಬ್ರಾಂಡ್‌ಗಳು ಕತ್ರೀನಾಳ ಬೇಡಿಕೆಗೆ ಹಿಂದೆ ಮುಂದೆ ನೋಡದೆ ಎಸ್ ಅಂತಾರಂತೆ. 

711
Katrina Kaif

ಬರೀ ಇಷ್ಟೇ ಅಲ್ಲ, ಒಂದು ಇನ್ಸ್ಟಾಗ್ರಾಮ್ ಪೋಸ್ಟ್‌ಗೆ  ಅವರು ಬರೋಬರಿ 1 ಕೋಟಿ ಚಾರ್ಜ್ ಮಾಡ್ತಾರಂತೆ. ತಮ್ಮ ಅಧಿಕೃತ ಇನ್ಸ್ಟಾ ಖಾತೆಯಿಂದ ತಮ್ಮ ಬ್ರಾಂಡ್ ಬಗ್ಗೆ ಒಂದು ಪೋಸ್ಟ್ ಮಾಡುವುದಕ್ಕೆ ಕೆಲವು ಬ್ರಾಂಡೆಂಡ್ ಕಂಪನಿಗಳು ಕತ್ರೀನಾಗೆ  ಒಂದು ಕೋಟಿ ಹಣ ನೀಡ್ತಾರೆ. ಏಕೆಂದರೆ ಕತ್ರೀನಾ ಇನ್ಸ್ಟಾಗ್ರಾಮ್‌ನಲ್ಲಿ 78.2 ಫಾಲೋವರ್‌ಗಳನ್ನು ಹೊಂದಿದ್ದು,  ಜನ ಅತೀಹೆಚ್ಚು ಫಾಲೋ ಮಾಡುವ ನಟಿಯರಲ್ಲಿ ಒಬ್ಬರೆನಿಸಿದ್ದಾರೆ ಜೋಯಾ. 

811
Katrina Kaif

ಕತ್ರೀನಾರ ಬಹುತೇಕ ಇನ್ಸ್ಟಾ ಪೋಸ್ಟ್‌ಗಳು  1ಮಿಲಿಯನ್‌ಗೂ ಹೆಚ್ಚು ಲೈಕ್ ಗಿಟ್ಟಿಸಿಕೊಳ್ತವೆ. ಕೆಲವು ಬ್ರಾಂಡೆಂಡ್ ಬಟ್ಟೆ ವಸ್ತುಗಳನ್ನು ಧರಿಸಿ ಕತ್ರೀನಾ ನೀಡುವ ಒಂದೊಂದು ಫೋಸ್‌ನ ಫೋಟೋ ಹಣದ ಮಳೆಯನ್ನೇ ಸುರಿಸುತ್ತವೆ. 

911
Katrina Kaif

ಸಿನಿಮಾದ ಜೊತೆ ಜೊತೆಗೆ ಉದ್ಯಮ ರಂಗಕ್ಕೂ ಕಾಲಿರಿಸಿರುವ ಬಾಲಿವುಡ್‌ನ ಕೆಲವೇ ನಟಿಯರಲ್ಲಿ ಕತ್ರೀನಾ ಕೂಡ ಒಬ್ಬರಾಗಿದ್ದು, ಕತ್ರೀನಾ ಅವರ ಸ್ವಂತ ಸೌಂದರ್ಯವರ್ಧಕ ಸಂಸ್ಥೆ ಕೇ ಬ್ಯೂಟಿ ಮೌಲ್ಯ 100 ಕೋಟಿ.  2019ರಲ್ಲಿ ಈ ಸೌಂದರ್ಯವರ್ಧಕ ಕೇ ಬ್ಯೂಟಿ ಸ್ಥಾಪಿಸಿ ಉದ್ಯಮ ರಂಗಕ್ಕೆ ಕ್ಯಾಟ್ ಕಾಲಿಟ್ಟಿದ್ದು,  ದೇಶದ ಹಲವು ನಗರಗಳಲ್ಲಿ ಇಂದು ಅಂಗಡಿಗಳನ್ನು ಹೊಂದಿದೆ.  ಪ್ರಸ್ತುತ 1600 ನಗರಗಳಲ್ಲಿ ಹಾಗೂ 90 ನೈಕಾ ಸ್ಟೋರ್‌ಗಳಲ್ಲೂ ಖಾತೆ ತೆರೆದಿದೆ ಕೇ ಬ್ಯೂಟಿ.

1011
Katrina Kaif

ಸಿನಿಮಾಗಳಲ್ಲಿ ನಟನೆ, ಬ್ರಾಂಡ್ ಪ್ರಮೊಷನ್, ಕಾಸ್ಮೆಟಿಕ್ ಬ್ರಾಂಡ್ ಉದ್ಯಮ, ಜಾಹೀರಾತು ಹೊರತುಪಡಿಸಿ ಕತ್ರೀನಾ ಕೈಫ್ ಮತ್ತೊಂದು ಆದಾಯದ ಮೂಲ ಹೊಂದಿದ್ದಾರೆ. ಅದೇ ಕಾರ್ಯಕ್ರಮಗಳಲ್ಲಿ ಪ್ರದರ್ಶನ.  ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನರ್ತಿಸುವುದಕ್ಕೆ ಹಾಗೂ ಭಾಗಿಯಾಗುವುದಕ್ಕೆ ಕತ್ರೀನಾ ಪಡೆಯುವ ಮೊತ್ತ ಅಂದಾಜು 3.5 ಕೋಟಿ.

1111
Katrina Kaif

ಕೆಲವು ಉದ್ಯಮಿಗಳು ತಮ್ಮ ಸಂಸ್ಥೆಯ ಕಾರ್ಯಕ್ರಮಗಳಿಗೆ, ಪ್ರಮುಖ ಚಲನಚಿತ್ರೋತ್ಸವಗಳಿಗೆ ಅಥವಾ ಇತರ ಕಾರ್ಯಕ್ರಮಗಳ ನಿರ್ಮಾಪಕರು ತಮ್ಮ ಕಾರ್ಯಕ್ರಮಗಳಿಗೆ ಕತ್ರೀನಾ ಅವರನ್ನು ನೃತ್ಯ ಪ್ರದರ್ಶನಕ್ಕೆ ಕರೆಯುತ್ತಾರೆ. ಉದ್ಯಮದ ವರದಿಗಳನ್ನು ನಂಬುವುದೇ ಆದರೆ ಈ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದಕ್ಕೆ ಪ್ರದರ್ಶನ  ನೀಡುವುದಕ್ಕೆ ಕತ್ರೀನಾ 3.5 ಕೋಟಿ ಪಡೆಯುತ್ತಾರೆ.

Read more Photos on
click me!

Recommended Stories