ಇನ್ನು 3 ವರ್ಷಗಳಲ್ಲಿ ದೀಪಿಕಾ ಪಡುಕೋಣೆ 5 ಚಿತ್ರಗಳು, ಬಜೆಟ್ ಕೇಳಿದ್ರೆ ಸುಸ್ತಾಗೋದು ಗ್ಯಾರಂಟಿ!

Published : Aug 02, 2023, 05:54 PM IST

ಪ್ರಸ್ತುತ ದೀಪಿಕಾ ಪಡುಕೋಣೆ (Deepika Padukone) ಬಾಲಿವುಡ್‌ನ ಅತ್ಯಂತ ಯಶಸ್ವಿ ನಟಿಯರಲ್ಲಿ ಒಬ್ಬರು. ಈ ವರ್ಷದ ಅತಿ ಹೆಚ್ಚು ಗಳಿಕೆಯ ಚಿತ್ರ 'ಪಠಾಣ್' ನಲ್ಲಿ ಶಾರುಖ್ ಖಾನ್ (Shah Rukh Khan) ಜೊತೆಯಲ್ಲಿ ಅವರು ಕೊನೆಯ ಬಾರಿಗೆ ಕಾಣಿಸಿಕೊಂಡರು. ಮುಂಬರುವ ದಿನಗಳಲ್ಲಿ ಅವರ ಅನೇಕ ದೊಡ್ಡ ಬಜೆಟ್ ಚಲನಚಿತ್ರಗಳು ಹೊರಬರಲಿವೆ. ದೀಪಿಕಾ ಪಡುಕೋಣೆ 3 ವರ್ಷಗಳಲ್ಲಿ ಈ 5 ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾಗಳ ಬಜೆಟ್‌ ಕೇಳಿದರೆ ಶಾಕ್‌ ಆಗುತ್ತೆ. 

PREV
15
ಇನ್ನು 3 ವರ್ಷಗಳಲ್ಲಿ ದೀಪಿಕಾ ಪಡುಕೋಣೆ 5 ಚಿತ್ರಗಳು, ಬಜೆಟ್ ಕೇಳಿದ್ರೆ ಸುಸ್ತಾಗೋದು ಗ್ಯಾರಂಟಿ!

ದೀಪಿಕಾ ಪಡುಕೋಣೆ ಮುಂದಿನ ದಿನಗಳಲ್ಲಿ  'ಕಲ್ಕಿ 2898 AD'  ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಇದರಲ್ಲಿ ದೀಪಿಕಾರ ಜೊತೆ  ಪ್ರಭಾಸ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಸುಮಾರು 600 ಕೋಟಿ ಬಜೆಟ್‌ನಲ್ಲಿ ತಯಾರಾಗುತ್ತಿದೆ. ಚಿತ್ರವು 2024ರಲ್ಲಿ ಜನವರಿಯಲ್ಲಿ ಬಿಡುಗಡೆಯಾಗಲಿದೆ. ಚಿತ್ರದ ನಿರ್ದೇಶಕರು ನಾಗ್ ಅಶ್ವಿನ್.


 

25

ಸಿದ್ಧಾರ್ಥ್ ಆನಂದ್ ನಿರ್ದೇಶನದ ಹೃತಿಕ್ ರೋಷನ್ ಅಭಿನಯದ 'ಫೈಟರ್' ಚಿತ್ರದಲ್ಲಿ ದೀಪಿಕಾ ಪಡುಕೋಣೆ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಜನವರಿ 25, 2024 ರಂದು ಬಿಡುಗಡೆಯಾಗಲಿರುವ ಈ ಚಿತ್ರದ ಬಜೆಟ್ 350 ಕೋಟಿ ಎಂದು ಹೇಳಲಾಗಿದೆ.

35

ಅಜಯ್ ದೇವಗನ್ ಅಭಿನಯದ 'ಸಿಂಗಂ 3' ಚಿತ್ರದಲ್ಲಿ ದೀಪಿಕಾ ಪಡುಕೋಣೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರೋಹಿತ್ ಶೆಟ್ಟಿ ನಿರ್ದೇಶನದ ಈ ಚಿತ್ರ 2024 ರ ದೀಪಾವಳಿ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಚಿತ್ರದ ಬಜೆಟ್ ಬಗ್ಗೆ ಇನ್ನೂ ಯಾವುದೇ ಅಪ್‌ಡೇಟ್ ಇಲ್ಲ.


 

45

ಅಯನ್ ಮುಖರ್ಜಿ ನಿರ್ದೇಶಿಸಲಿರುವ 'ಬ್ರಹ್ಮಾಸ್ತ್ರ ಭಾಗ 2: ದೇವ್' ಚಿತ್ರದಲ್ಲಿ ದೀಪಿಕಾ ಪಡುಕೋಣೆ ಕಾಣಿಸಿಕೊಳ್ಳಲಿದ್ದಾರೆ ಎಂದು ಚರ್ಚೆಯಾಗುತ್ತಿದೆ, ಈ ಚಿತ್ರವು ಡಿಸೆಂಬರ್ 2026 ರಲ್ಲಿ ರಿಲೀಸ್ ಆಗುವ ನಿರೀಕ್ಷೆ ಇದೆ. ಇದರ ಬಜೆಟ್ 450-500 ಕೋಟಿ ಎಂದು ಅಂದಾಜಿಸಲಾಗಿದೆ.

55

ದೀಪಿಕಾ ಪಡುಕೋಣೆ ಮುಂದಿನ ಹಾಲಿವುಡ್ ಚಿತ್ರ 'ದಿ ಇಂಟರ್ನ್' ರಿಮೇಕ್‌ನಲ್ಲಿ ಅಮಿತಾಬ್ ಬಚ್ಚನ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಈ ಮೊದಲು ಈ ಚಿತ್ರವನ್ನು ರಿಷಿ ಕಪೂರ್ ಮಾಡಬೇಕಿತ್ತು, ಆದರೆ ಅವರ ಹಠಾತ್ ನಿಧನದಿಂದ ಅದು ಅಮಿತಾಬ್ ಖಾತೆಗೆ ಹೋಗಿತ್ತು. ಚಿತ್ರದ ನಿರ್ದೇಶಕ ಅಮಿತ್ ರವೀಂದ್ರನಾಥ್ ಶರ್ಮಾ.

Read more Photos on
click me!

Recommended Stories