ದೀಪಿಕಾ ಪಡುಕೋಣೆ ಅಮ್ಮಂಗೆ ನಾನು ಅರ್ಥವೇ ಆಗಿರಲಿಲ್ಲ: ರಣವೀರ್‌ ಸಿಂಗ್‌

Published : Aug 02, 2023, 05:38 PM IST

ರಣವೀರ್ ಸಿಂಗ್ (Ranveer Singh)  ಪ್ರಸ್ತುತ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿಯ (Rocky Aur Rani Kii Prem Kahaani) ಯಶಸ್ಸಿನ ಖುಷಿಯಿಂದ ತೇಲುತ್ತಿದ್ದಾರೆ. ಏಕೆಂದರೆ ಆಲಿಯಾ ಭಟ್‌ (Alia Bhatt)  ಜೊತೆ ನಟಿಸಿರುವ ಅವರ ಈ ಚಿತ್ರವು ಕೇವಲ 4 ದಿನಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಅರ್ಧ ಶತಕವನ್ನು ಪೂರೈಸಿದೆ. ಇದರ ನಡುವೆಯೇ ರಣವೀರ್ ಇತ್ತೀಚೆಗೆ ತನ್ನ ಅತ್ತೆ ಉಜ್ಜಲಾ ಪಡುಕೋಣೆ (Ujjala Padukone)  ಜೊತೆಗಿನ ಸಂಬಂಧದ ಬಗ್ಗೆ ಚರ್ಚಿಸಿದ್ದಾರೆ ಮತ್ತು ಅವರ ಮಾತುಗಳು ಸಖತ್‌ ವೈರಲ್‌ ಆಗಿದೆ. 

PREV
16
ದೀಪಿಕಾ ಪಡುಕೋಣೆ ಅಮ್ಮಂಗೆ ನಾನು ಅರ್ಥವೇ ಆಗಿರಲಿಲ್ಲ: ರಣವೀರ್‌ ಸಿಂಗ್‌

ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾದ ಕುಟುಂಬವು ರಣವೀರ್‌ ಸಿಂಗ್‌  ಅವರ ವೈಯಕ್ತಿಕ ಜೀವನದ ಬಹುಮಟ್ಟಿಗೆ ವಿಸ್ತರಣೆಯಾಗಿದೆ ಎಂದು ಹೇಳಬಹುದು. 

26

ರಣವೀರ್‌ ಅವರು ಪಂಜಾಬಿ ಹಿಂದಿ ಕುಟುಂಬದಿಂದ ಬಂದವರು ಆದರೆ ದೀಪಿಕಾ ಪಡುಕೋಣೆ ಕುಟುಂಬವು ಕನ್ನಡಿಗ. ಚಿತ್ರದಲ್ಲಿ ರಣವೀರ್‌ ಪಂಜಾಬಿ ಕುಟುಂಬದಿಂದ ಬಂದಿದ್ದು, ಆಲಿಯಾ ಭಟ್ ಪಾತ್ರ ಬೆಂಗಾಲಿ ಕುಟುಂಬಕ್ಕೆ ಸೇರಿದ್ದಾರೆ. 

36

ಈವೆಂಟ್‌ನಲ್ಲಿ ರಣವೀರ್‌ ಸಿಂಗ್‌ ಅವರು ತಮ್ಮ ಅತ್ತೆ ಉಜ್ಜಲಾ ಪಡುಕೋಣೆ ನನ್ನನ್ನು ಅರ್ಥಮಾಡಿಕೊಳ್ಳಲು ಸಮಯ ತೆಗೆದುಕೊಂಡರು ಎಂದು ಬಹಿರಂಗಪಡಿಸಿದರು.

46

ಆರಂಭದಲ್ಲಿ ಅವರು  ನನ್ನನ್ನು ಅರ್ಥಮಾಡಿಕೊಳ್ಳಲಿಲ್ಲ ಆದರೆ ಅವರು ಪರಸ್ಪರ ಸಮಯ ಕಳೆಯಲು ಪ್ರಾರಂಭಿಸಿದಾಗ ನಾನು ಅವರ ಮಗಳಿಗೆ ತಕ್ಕ ಪತಿಯಾಗಬಲ್ಲೆ ಎಂಬ ಅಭಿಪ್ರಾಯಕ್ಕೆ ಬಂದರು, ಎಂದಿದ್ದಾರೆ.

56

ಈಗ ಅವರ ಅತ್ತೆ ರಣವೀರ್‌ ಅವರ ನೆಚ್ಚಿನ ವ್ಯಕ್ತಿಗಳಲ್ಲೊಬ್ಬರು. ರಣವೀರ್‌ ಖಂಡಿತವಾಗಿಯೂ ಅವರ ಅತ್ತೆಯ ನೆಚ್ಚಿನ ಜನರಲ್ಲಿ ಒಬ್ಬರೆಂದು ಅವರು ವಿಶ್ವಾಸದಿಂದ ಹೇಳಿಕೊಂಡಿದ್ದಾರೆ. 

66

ಸಂಜಯ್ ಲೀಲಾ ಬನ್ಸಾಲಿಯವರ 2012 ರ ಚಲನಚಿತ್ರ ರಾಮ್-ಲೀಲಾದಲ್ಲಿ ಕೆಲಸ  ಮಾಡುವಾಗ ದೀಪಿಕಾ ಮತ್ತು ರಣವೀರ್‌ ಪ್ರೀತಿಸುತ್ತಿದ್ದರು. ಅವರು 2018 ರಲ್ಲಿ ಮದುವೆಯಾಗುವ ಮೊದಲು ಆರು ವರ್ಷಗಳ ಕಾಲ ಡೇಟಿಂಗ್ ಮಾಡಿದ್ದಾರೆ. 

Read more Photos on
click me!

Recommended Stories