'ಬೇಷರಂ ರಂಗ್' ವಿವಾದ ನಂತರ, ಟ್ರೈಲರ್‌ನಲ್ಲಿ ಕೇಸರಿ ಲುಂಗಿಯಲ್ಲಿ ದೀಪಿಕಾ ಪಡುಕೋಣೆ!

Published : Jan 11, 2023, 04:52 PM IST

ಶಾರುಖ್ ಖಾನ್ (Shah Rukh Khan) ಅವರ ಕಮ್ ಬ್ಯಾಕ್ ಚಿತ್ರ 'ಪಠಾಣ್' (Pathaan) ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದ ನಿರ್ಮಾಣ ಸಂಸ್ಥೆ ಯಶ್ ರಾಜ್ ಫಿಲ್ಮ್ಸ್ ಮಂಗಳವಾರ  ಇದನ್ನು ಬಿಡುಗಡೆ ಮಾಡಿದೆ. ಟ್ರೇಲರ್ ನೋಡಿದ ಜನ ಅದರ ಆ್ಯಕ್ಷನ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಶಾರುಖ್ ಖಾನ್ ಅವರ ಅದ್ಭುತ ಡೈಲಾಗ್ ಡೆಲಿವರಿ ಸಖತ್‌ ಮೆಚ್ಚುಗೆ ಗಳಿಸಿದೆ. 2:34 ನಿಮಿಷದ ವಿಡಿಯೋದಲ್ಲಿ ದೀಪಿಕಾ ಪಡುಕೋಣೆಗೆ (Deepika Padukone) ಹೆಚ್ಚು ಜಾಗ ನೀಡಲಾಗಿದೆ. ಅವರು ವಿಭಿನ್ನ ನೋಟ ಮತ್ತು ವಿಭಿನ್ನ ವೇಷಭೂಷಣಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆಕೆಯನ್ನು ವಿವಾದಕ್ಕೆ ಸಿಲುಕಿಸಿದ ಕೇಸರಿ ಬಿಕಿನಿಯನ್ನು ಟ್ರೇಲರ್‌ನಿಂದ ದೂರ ಇಡಲಾಗಿದೆ. ಆದರೆ ಅವರು ಈ ಬಾರಿ ಕೇಸರಿ ಲುಂಗಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.  ಟ್ರೇಲರ್‌ನಲ್ಲಿ ಕಂಡುಬರುವ ದೀಪಿಕಾ ಪಡುಕೋಣೆ ಅವರ ವಿಭಿನ್ನ ಅವತಾರಗಳು ಇಲ್ಲಿವೆ.

PREV
111
  'ಬೇಷರಂ ರಂಗ್'  ವಿವಾದ ನಂತರ, ಟ್ರೈಲರ್‌ನಲ್ಲಿ ಕೇಸರಿ ಲುಂಗಿಯಲ್ಲಿ  ದೀಪಿಕಾ ಪಡುಕೋಣೆ!

ಚಿತ್ರದಲ್ಲಿ ದೀಪಿಕಾ ಪಡುಕೋಣೆ ಪಾತ್ರ ಯಾರ ಪರ ಇದೆ ಎಂಬುದು ಟ್ರೇಲರ್‌ನಲ್ಲಿ ಸ್ಪಷ್ಟವಾಗಿಲ್ಲ. ಆದರೆ ಆಕೆ ಶಾರುಖ್‌ನಂತೆ ರಾ ಏಜೆಂಟ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ.

211

ಟ್ರೇಲರ್‌ನಲ್ಲಿ ದೀಪಿಕಾ ಪಡುಕೋಣೆ ಅವರ ವಿಭಿನ್ನ ಅವತಾರಗಳು ಕಂಡುಬರುತ್ತಿದ್ದು, ಅದರಲ್ಲಿ ಅವರು ನಿಯಾನ್ ಬಣ್ಣದ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾರೆ

311

ಕೆಲವು ಸ್ಥಳಗಳಲ್ಲಿ ಅವರು ಕೇಸರಿ ಬಣ್ಣದ ಲುಂಗಿಯಲ್ಲಿ ಆಕ್ಷನ್ ಮಾಡುತ್ತಿದ್ದಾರೆ. ಆದಾಗ್ಯೂ, ಈ ಟ್ರೇಲರ್‌ನಲ್ಲಿ ವಿವಾದಾತ್ಮಕ ಗೀತೆ 'ಬೇಷರಂ ರಂಗ್' ಅನ್ನು  ಕಡಿಮೆ  ತೋರಿಸಲಾಗಿದೆ. ಇದರಲ್ಲಿ ದೀಪಿಕಾ ಕೇಸರಿ ಬಿಕಿನಿಯನ್ನು ಧರಿಸಿ ಪೋಸ್ ನೀಡಿದ್ದಾರೆ.

411

ವಾಸ್ತವವಾಗಿ ಮೊದಲು ಬಿಡುಗಡೆಯಾದ 'ಪಠಾಣ್' ಚಿತ್ರದ  'ಬೇಷರಂ ರಂಗ್' ಹಾಡಿನ ಕೊನೆಯಲ್ಲಿ, ದೀಪಿಕಾ ಕೇಸರಿ ಬಿಕಿನಿಯಲ್ಲಿ ಶಾರುಖ್ ಖಾನ್ ಜೊತೆ ಸಖತ್‌ ಬೋಲ್ಡ್‌ ಪೋಸ್ ನೀಡುತ್ತಿರುವುದು ಕಂಡುಬಂದಿದೆ.


 

511

ಮಧ್ಯಪ್ರದೇಶದ ಗೃಹ ಸಚಿವ ಡಾ.ನರೋತ್ತಮ್ ಮಿಶ್ರಾ ಅವರು ಬಿಕಿನಿ ಬಣ್ಣಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಇದು ಸನಾತನ ಧರ್ಮಕ್ಕೆ ಮಾಡಿದ ಅವಮಾನ ಎಂದು ಬಣ್ಣಿಸಿದ ಅವರು, ಈ ದೃಶ್ಯಗಳನ್ನು ಚಿತ್ರದಿಂದ ಕಡಿತಗೊಳಿಸುವಂತೆ ಒತ್ತಾಯಿಸಿದ್ದರು.

611

ನಂತರ, ಅನೇಕ ರಾಜಕೀಯ, ಧಾರ್ಮಿಕ ಮತ್ತು ಸಾಮಾಜಿಕ ಸಂಘಟನೆಗಳು ಕೂಡ ಹಾಡಿನ ವಿರುದ್ಧ ಪ್ರತಿಭಟನೆಯನ್ನು ದಾಖಲಿಸಿದವು ಮತ್ತು ಚಲನಚಿತ್ರವನ್ನು ನಿಷೇಧಿಸುವಂತೆ ಒತ್ತಾಯಿಸಿದವು.

 

711

ಇತ್ತೀಚೆಗಷ್ಟೇ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಷನ್ 'ಬೇಷರಂ ರಂಗ್' ಚಿತ್ರದ ದೀಪಿಕಾ ಪಡುಕೋಣೆ ಅವರ ಕ್ಲೋಸ್-ಅಪ್ ಶಾಟ್‌ಗಳಿಗೆ ಕತ್ತರಿ ಹಾಕಿದೆ ಎಂಬ ಸುದ್ದಿ ಇತ್ತು.

811

'ಬೇಷರಂ ರಂಗ್' ಹಾಡಿನಲ್ಲಿ ದೀಪಿಕಾ ಪಡುಕೋಣೆ ನೀಡಿರುವ ಹಾಟ್‌ ಹಾಗೂ ಬೋಲ್ಡ್‌ ಶಾಟ್‌ಗಳನ್ನು CBFC ಕಡಿತಗೊಳಿಸಿದೆ ಎಂದು ವರದಿಯಾಗಿದೆ.

 

911

ಆದರೆ, ಸೆನ್ಸಾರ್ ಮಂಡಳಿಯು ಚಿತ್ರದಲ್ಲಿ ದೀಪಿಕಾ ಅವರ ಕೇಸರಿ ಬಿಕಿನಿ ದೃಶ್ಯಗಳನ್ನು ಉಳಿಸಿಕೊಂಡಿದೆಯೇ ಅಥವಾ ಅವುಗಳನ್ನು ತೆಗೆದುಹಾಕುವಂತೆ ತಯಾರಕರಿಗೆ ಸೂಚಿಸಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.


 

1011

ಶಾರುಖ್ ಖಾನ್ ಜೊತೆ ದೀಪಿಕಾ ಪಡುಕೋಣೆ ಅವರ ನಾಲ್ಕನೇ ಚಿತ್ರ 'ಪಠಾಣ್'. ಈ ಹಿಂದೆ ಅವರು 'ಓಂ ಶಾಂತಿ ಓಂ', 'ಚೆನ್ನೈ ಎಕ್ಸ್‌ಪ್ರೆಸ್' ಮತ್ತು 'ಹ್ಯಾಪಿ ನ್ಯೂ ಇಯರ್' ಚಿತ್ರಗಳಲ್ಲಿ ಅವರೊಂದಿಗೆ ಕಾಣಿಸಿಕೊಂಡಿದ್ದರು.

1111

ಸಿದ್ಧಾರ್ಥ್ ಆನಂದ್ ನಿರ್ದೇಶನದ ಪಠಾಣ್ ಚಿತ್ರ ಜನವರಿ 25 ರಂದು ಚಿತ್ರಮಂದಿರಗಳಿಗೆ ಬರಲಿದೆ. ಜಾನ್ ಅಬ್ರಹಾಂ, ಅಶುತೋಷ್ ರಾಣಾ ಮತ್ತು ಡಿಂಪಲ್ ಕಪಾಡಿಯಾ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Read more Photos on
click me!

Recommended Stories