ಕತ್ರಿನಾ ಮನೆ ನೋಡಿ, ತಮ್ಮ ಮನೆಯನ್ನೂ ಡಿಸೈನ್ ಮಾಡಿದ ಹೃತಿಕ್‌ ರೋಷನ್‌

Published : Jan 10, 2023, 05:51 PM IST

ಹೃತಿಕ್ ರೋಷನ್ (Hrithik Roshan) ಇಂದು ತಮ್ಮ 49ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಜನವರಿ 10, 1974 ರಂದು ಮುಂಬೈನಲ್ಲಿ ಜನಿಸಿದ ಹೃತಿಕ್ ರೋಷನ್ ತುಂಬಾ ಸ್ಟೈಲಿಶ್ ನಟ. ಮೊದಲ ಚಿತ್ರವೇ ಅವರನ್ನು ಸೂಪರ್ ಸ್ಟಾರ್ ಮಾಡಿತು. ಅವರು ಹೋಮ್ ಪ್ರೊಡಕ್ಷನ್ ಚಿತ್ರ ಕಹೋ ನಾ ಪ್ಯಾರ್ ಹೈ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಇದಾದ ನಂತರ ಹೃತಿಕ್ ರೋಷನ್ ಹಿಂದಿರುಗಿ ನೋಡಲೇ ಇಲ್ಲ. ಸತತ ಯಶಸ್ಸಿನ ನಂತರ ತಮ್ಮ ಇಷ್ಟದ ಮನೆ ಕಟ್ಟಿಕೊಂಡಿದ್ದಾರೆ. ಈ ಮನೆಯ ವಿಶೇಷವೆಂದರೆ ಕತ್ರಿನಾ ಕೈಫ್ ಮನೆಯನ್ನು ನೋಡಿದ ನಂತರ ಹೃತಿಕ್ ರೋಷನ್ ತಮ್ಮ ಮನೆಯನ್ನು ವಿನ್ಯಾಸಗೊಳಿಸಿದರು.ಇಲ್ಲಿದೆ ಹೃತಿಕ್‌ ಮನೆಯ ಕೆಲವು ಪೋಟೋಗಳು 

PREV
112
ಕತ್ರಿನಾ ಮನೆ ನೋಡಿ, ತಮ್ಮ ಮನೆಯನ್ನೂ ಡಿಸೈನ್ ಮಾಡಿದ ಹೃತಿಕ್‌ ರೋಷನ್‌

ಹೃತಿಕ್ ರೋಷನ್ ಮುಂಬೈನಲ್ಲಿ ಮನೆ ಹೊಂದಿದ್ದಾರೆ. ಹೃತಿಕ್‌ ಅವರು ತಮ್ಮ ಬೆಲೆ ಬಾಳುವ ಮತ್ತು ಐಷಾರಾಮಿ ಅಪಾರ್ಟ್ಮೆಂಟ್‌ ಅನ್ನು ಅವರ ಅಗತ್ಯಕ್ಕೆ ತಕ್ಕಂತೆ ವಿನ್ಯಾಸಗೊಳಿಸಿದ್ದಾರೆ.

212

ಹೃತಿಕ್ ರೋಷನ್ ತನ್ನ ತಂದೆ ರಾಕೇಶ್ ರೋಷನ್‌ನಿಂದ ಪ್ರತ್ಯೇಕವಾಗಿ ಜುಹುದಲ್ಲಿನ ಸಮುದ್ರಕ್ಕೆ ಎದುರಾಗಿರುವ ಅಪಾರ್ಟ್‌ಮೆಂಟ್‌ನಲ್ಲಿ ತನ್ನ ಇಬ್ಬರು ಮಕ್ಕಳಾದ ಹ್ರೇಹಾನ್ ಮತ್ತು ಹೃದಾನ್ ಜೊತೆ ವಾಸಿಸುತ್ತಿದ್ದಾರೆ. ಅವರ ಪುತ್ರರು ಹೆಚ್ಚಾಗಿ ತಮ್ಮ ಅಜ್ಜನ ಮನೆಯಲ್ಲಿಯೇ ಇರುತ್ತಾರೆ.

312

ಹೃತಿಕ್ ರೋಷನ್ ಅವರ ಈ ಮನೆ 3000 ಚದರ ಅಡಿಗಳಷ್ಟು ವಿಸ್ತಾರವಾಗಿದೆ. ಅವರ ಐಷಾರಾಮಿ ಮತ್ತು ಸುಸಜ್ಜಿತ ಅಪಾರ್ಟ್ಮೆಂಟ್ ಜುಹುದಲ್ಲಿನ ಪ್ರೈಮ್ ಬೀಚ್ ಕಟ್ಟಡದ ಮೂರನೇ ಮಹಡಿಯಲ್ಲಿದೆ.
 

412

ಹೃತಿಕ್ ರೋಷನ್ ಒಮ್ಮೆ ಕತ್ರಿನಾ ಕೈಫ್ ಅವರ ಅಪಾರ್ಟ್ಮೆಂಟ್‌ ಒಳಾಂಗಣ ವಿನ್ಯಾಸವನ್ನು ತುಂಬಾ ಇಷ್ಟಪಟ್ಟರು ಮತ್ತು ಅದೇ ಶೈಲಿಯಲ್ಲಿ ಅವರು ತಮ್ಮ ಸ್ವಂತ ಮನೆಯನ್ನು ವಿನ್ಯಾಸಗೊಳಿಸಿದರು ಎಂದು ಮುಂಬೈನ ಪ್ರಸಿದ್ಧ ವಾಸ್ತುಶಿಲ್ಪಿ ಆಶಿಶ್ ಷಾ ಸಂದರ್ಶನವೊಂದರಲ್ಲಿ  ಬಹಿರಂಗಪಡಿಸಿದರು.

512

ಹೃತಿಕ್ ರೋಷನ್ ತನ್ನ ಅಪಾರ್ಟ್‌ಮೆಂಟ್‌ನ ಒಳಾಂಗಣವನ್ನು ವಿನ್ಯಾಸಗೊಳಿಸಿದಾಗ, ಅವರು ತಮ್ಮ ಮಕ್ಕಳಾದ ಹ್ರೇಹಾನ್ ಮತ್ತು ಹೃದಾನ್ ಇಬ್ಬರ ಆಯ್ಕೆಯ ಬಗ್ಗೆ ಸಂಪೂರ್ಣ ಕಾಳಜಿ ವಹಿಸಿದರು. ವಿಶ್ವ ಭೂಪಟ ಮತ್ತು ಕ್ರೀಡಾ ಥೀಮ್ ಅನ್ನು ಈ ಮನೆಯಲ್ಲಿ ಸೇರಿಸಲಾಗಿದೆ.

612

ಹೃತಿಕ್ ರೋಷನ್ ಈ ಅಪಾರ್ಟ್‌ಮೆಂಟ್‌ಗೆ ಹೆಚ್ಚಿನ ಪೀಠೋಪಕರಣಗಳನ್ನು ದುಬೈನಿಂದ ಖರೀದಿಸಲಾಗಿದೆ. ಅದೇ ಸಮಯದಲ್ಲಿ ಸುಸ್ಸಾನೆ ಖಾನ್ ಅವರ ಸಹೋದರಿ ಅಂಗಡಿಯಿಂದ ಸಹ ಪೀಠೋಪಕರಣಗಳನ್ನು ವಿನ್ಯಾಸಗೊಳಿಸಿದರು ಮತ್ತು  ಶಾಪಿಂಗ್ ಮಾಡಿದರು.

712

 ಹೃತಿಕ್ ರೋಷನ್ ಅವರ ಅಪಾರ್ಟ್ಮೆಂಟ್ ಗೋಡೆಯ ಮೇಲೆ ಸ್ಫೂರ್ತಿ ನೀಡುವ ಉಲ್ಲೇಖಗಳು ಸಹ ಕಂಡುಬರುತ್ತವೆ. ಹೃತಿಕ್ ತಮ್ಮ ಕೈ ಬರಹದಲ್ಲೂ  ಕೆಲವು ಕೋಟ್‌ಗಳನ್ನೂ ಬರೆದಿದ್ದಾರೆ.

812

ಹೃತಿಕ್ ಅವರು ತಮ್ಮ ಮಕ್ಕಳ ಚಿತ್ರಗಳನ್ನು ಮನೆಯ ಪ್ರಮುಖ ಗೋಡೆಗಳ ಮೇಲೆ ಅಂಟಿಸಿದ್ದಾರೆ. ಅದರಲ್ಲಿ ದೊಡ್ಡ ಸ್ಟಡಿ ಟೇಬಲ್ ಕೂಡ ಇಡಲಾಗಿದೆ

912

2013 ರಲ್ಲಿ, ಹೃತಿಕ್ ರೋಷನ್ ಮುಂಬೈನ ಬ್ರಾಂಡಾದಲ್ಲಿ ಅಪಾರ್ಟ್ಮೆಂಟ್ ಅನ್ನು ಖರೀದಿಸಿದರು. ಈ ಅಪಾರ್ಟ್‌ಮೆಂಟ್‌ನ ಬೆಲೆ 25 ಕೋಟಿ.

1012

ಹೃತಿಕ್ ರೋಷನ್ ಕೂಡ ಈ ಐಷಾರಾಮಿ ಮನೆಯ ಪೀಠೋಪಕರಣಗಳನ್ನು ತುಂಬಾ ಸ್ಟೈಲಿಶ್ ಆಗಿ ಜೋಡಿಸಿದ್ದಾರೆ. ಆರಾಮದಾಯಕ ಕುಳಿತುಕೊಳ್ಳಲು ಮತ್ತು ಮಲಗಲು ಮನೆಯ ಮೂಲೆ ಮೂಲೆಗಳಲ್ಲಿ ಪೀಠೋಪಕರಣಗಳನ್ನು ಇರಿಸಲಾಗುತ್ತದೆ.

1112

 ಧೂಮ್ 2 ಚಿತ್ರದ ಫೇಮ್‌ ನಟನಿಗೆ ಪುಸ್ತಕ ಓದುವ ಹವ್ಯಾಸವಿದೆ.  ಪುಸ್ತಕಗಳನ್ನು   ಅಲ್ಮೇರಾದಲ್ಲಿ ಜೋಡಿಸಿರುವುದು ಕಂಡುಬರುತ್ತದೆ.  ಹೃತಿಕ್ ಇಷ್ಟವಾದ ಪುಸ್ತಕಗಳ ಸಂಗ್ರಹವನ್ನು ಇಲ್ಲಿ ಇಟ್ಟಿದ್ದಾರೆ.

1212

ಕಹೋ ನಾ ಪ್ಯಾರ್ ಹೈ, ಅಗ್ನಿಪಥ್, ಜೋಧಾ ಅಕ್ಬರ್, ಕ್ರಿಶ್, ಬ್ಯಾಂಗ್ ಬ್ಯಾಂಗ್, ಧೂಮ್ 2, ಕಭಿ ಖುಷಿ ಕಭಿ ಗಮ್, ಕೋಯಿ ಮಿಲ್ ಗಯಾ, ಸೂಪರ್ 30, ಕಾಬಿಲ್, ಜಿಂದಗಿ ನಾ ಮಿಲೇಗಿ ದೋಬರಾ, ವಾರ್  ಮುಂತಾದ ಹಲವು ಸೂಪರ್‌ಹಿಟ್ ಚಿತ್ರಗಳನ್ನು ನೀಡಿದ್ದಾರೆ.

Read more Photos on
click me!

Recommended Stories