ಐಶ್ವರ್ಯಾ ರೈ ಜೊತೆ ನಟಿಸಿದ್ದ ಈ ನಟಿ ಸೀರಿಯಲ್‌ನಲ್ಲಿ ಸಿಕ್ಕಾಪಟ್ಟೆ ಸಂಭಾವನೆ ಪಡೀತಿದ್ರು; ಇದ್ದಕ್ಕಿದ್ದಂತೆ ನಟನೆ ಬಿಟ್ಟಿದ್ದೇಕೆ?

Published : Apr 25, 2026, 06:22 PM IST

ದಯಾಬೆನ್ ಪಾತ್ರಕ್ಕೆ ಬಣ್ಣ ಹಚ್ಚುವ ಮುನ್ನ ದಿಶಾ ವಕಾನಿ ಬಾಲಿವುಡ್‌ನ ದೊಡ್ಡ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. 2008 ರಲ್ಲಿ ತೆರೆಕಂಡ 'ಜೋಧಾ ಅಕ್ಬರ್'ನಲ್ಲಿ ಅವರು ಐಶ್ವರ್ಯಾ ರೈ ಆತ್ಮೀಯ ಗೆಳತಿ, ಸಹಾಯಕಿ 'ಮಾಧವಿ' ಎಂಬ ಪಾತ್ರವನ್ನು ನಿರ್ವಹಿಸಿದ್ದರು.

PREV
17

ಐಶ್ವರ್ಯಾ ರೈ ಸಖಿಯಾಗಿದ್ದ ಈ ನಟಿ ಸೀರಿಯಲ್‌ ಬಂದು ಭಾರೀ ಸಂಭಾವನೆ ಪಡೆದ್ರು; ಈಗ ಎಲ್ಲಿ ಹೋದ್ರು?

ಭಾರತೀಯ ಕಿರುತೆರೆ ಇತಿಹಾಸದಲ್ಲಿ ಕೆಲವು ಪಾತ್ರಗಳು ಎಷ್ಟು ಜನಪ್ರಿಯವಾಗುತ್ತವೆ ಎಂದರೆ, ಆ ಪಾತ್ರಗಳನ್ನು ಮಾಡಿದ ನಟರು ತೆರೆಯಿಂದ ದೂರವಾದರೂ ಜನರು ಅವರನ್ನು ಮರೆಯುವುದಿಲ್ಲ. ಅಂತಹದ್ದೇ ಒಂದು ಮ್ಯಾಜಿಕ್ ಸೃಷ್ಟಿಸಿದ ನಟಿ ದಯಾಬೆನ್ ಅಲಿಯಾಸ್ ದಿಶಾ ವಕಾನಿ. 'ತಾರಕ್ ಮೆಹ್ತಾ ಕಾ ಊಲ್ತಾ ಚಾಶ್ಮಾ' (TMKOC) ಸೀರಿಯಲ್ ಮೂಲಕ ಮನೆಮಾತಾದ ಈ ನಟಿ ದಿಶಾ ವಕಾನಿ (Disha Vakani), ಒಂದು ಕಾಲದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ಕಿರುತೆರೆ ಕಲಾವಿದೆಯಾಗಿದ್ದರು. ಆದರೆ ಈಗ ಎಂಟು ವರ್ಷಗಳಿಂದ ಅವರು ನಟನೆಯಿಂದ ದೂರವುಳಿದಿರುವುದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.

27

ಬಾಲಿವುಡ್ ಸುಂದರಿ ಐಶ್ವರ್ಯಾ ರೈ ಜೊತೆ ನಟನೆ!

ಅನೇಕರಿಗೆ ಗೊತ್ತಿಲ್ಲದ ವಿಷಯವೆಂದರೆ, ದಯಾಬೆನ್ ಪಾತ್ರಕ್ಕೆ ಬಣ್ಣ ಹಚ್ಚುವ ಮುನ್ನ ದಿಶಾ ವಕಾನಿ ಬಾಲಿವುಡ್‌ನ ದೊಡ್ಡ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. 2008 ರಲ್ಲಿ ತೆರೆಕಂಡ ಸೂಪರ್ ಹಿಟ್ ಸಿನಿಮಾ 'ಜೋಧಾ ಅಕ್ಬರ್'ನಲ್ಲಿ ಅವರು ನಟಿಸಿದ್ದರು. ಆ ಚಿತ್ರದಲ್ಲಿ ಅವರು ಐಶ್ವರ್ಯಾ ರೈ (ಜೋಧಾ) ಅವರ ಆತ್ಮೀಯ ಗೆಳತಿ ಹಾಗೂ ಸಹಾಯಕಿ 'ಮಾಧವಿ' ಎಂಬ ಪಾತ್ರವನ್ನು ನಿರ್ವಹಿಸಿದ್ದರು.

37

ಐಶ್ವರ್ಯಾ ರೈ ಜೊತೆ ಕೆಂಪು ಬಣ್ಣದ ಸಾಂಪ್ರದಾಯಿಕ ಉಡುಪಿನಲ್ಲಿ ದಿಶಾ ಕಾಣಿಸಿಕೊಂಡಿದ್ದ ಫೋಟೋಗಳು ಇಂದಿಗೂ ಸೋಷಿಯಲ್ ಮೀಡಿಯಾದಲ್ಲಿ ಆಗಾಗ ವೈರಲ್ ಆಗುತ್ತಿರುತ್ತವೆ. ಇದಲ್ಲದೆ ಶಾರುಖ್ ಖಾನ್ ನಟನೆಯ 'ದೇವದಾಸ್' ಮತ್ತು ಅಮೀರ್ ಖಾನ್ ಅವರ 'ಮಂಗಲ್ ಪಾಂಡೆ'ಯಂತಹ ಐತಿಹಾಸಿಕ ಸಿನಿಮಾಗಳಲ್ಲೂ ದಿಶಾ ಸಣ್ಣಪುಟ್ಟ ಪಾತ್ರಗಳನ್ನು ಮಾಡಿದ್ದರು.

47

ಕಿರುತೆರೆಯಲ್ಲಿ ಸೃಷ್ಟಿಸಿದ ಸಂಚಲನ ಮತ್ತು ಭಾರಿ ಸಂಭಾವನೆ:

ಸಿನಿಮಾಗಳಲ್ಲಿ ಸಣ್ಣ ಪಾತ್ರಗಳನ್ನು ಮಾಡುತ್ತಿದ್ದ ದಿಶಾಗೆ ದೊಡ್ಡ ಬ್ರೇಕ್ ನೀಡಿದ್ದು 'ತಾರಕ್ ಮೆಹ್ತಾ ಕಾ ಊಲ್ತಾ ಚಾಶ್ಮಾ' ಧಾರಾವಾಹಿ. ಈ ಶೋನಲ್ಲಿ ಅವರ ವಿಭಿನ್ನ ಧ್ವನಿ, ವಿಶಿಷ್ಟ ನಗು ಮತ್ತು ಅದ್ಭುತ ಗಾರ್ಬಾ ಡ್ಯಾನ್ಸ್ ನೋಡುಗರನ್ನು ಮಂತ್ರಮುಗ್ಧರನ್ನಾಗಿಸಿತ್ತು. ವರದಿಗಳ ಪ್ರಕಾರ, ಈ ಸೀರಿಯಲ್‌ನ ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗ ದಿಶಾ ವಕಾನಿ ಪ್ರತಿ ಸಂಚಿಕೆಗೆ (One Episode) ಸುಮಾರು 1.5 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಿದ್ದರು ಎನ್ನಲಾಗಿದೆ. ಒಬ್ಬ ಸೀರಿಯಲ್ ನಟಿಗೆ ಇಷ್ಟು ದೊಡ್ಡ ಮೊತ್ತ ಸಿಗುತ್ತಿದ್ದುದು ಅಂದು ದೊಡ್ಡ ಸುದ್ದಿಯಾಗಿತ್ತು.

57

ನಟನೆಯಿಂದ ದೂರ ಸರಿದಿದ್ದೇಕೆ?

ದಿಶಾ ವಕಾನಿ 2017ರಲ್ಲಿ ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗಲೇ ನಟನೆಯಿಂದ ಬ್ರೇಕ್ ಪಡೆದರು. ತಾಯಿಯಾಗುವ ಸಂಭ್ರಮದಲ್ಲಿದ್ದ ಅವರು ಮೆಟರ್ನಿಟಿ ಲೀವ್ ಮೇಲೆ ಹೋದರು. ಅಂದು ಹೋದವರು ಇಂದಿನವರೆಗೂ ಕ್ಯಾಮೆರಾ ಮುಂದೆ ಮರಳಿಲ್ಲ. ಅತ್ತ ಅಭಿಮಾನಿಗಳು ಅವರು ಯಾವಾಗ ಬರುತ್ತಾರೆ ಎಂದು ಕಾಯುತ್ತಿದ್ದರೆ, ಇತ್ತ ದಿಶಾ ಮಾತ್ರ ತಮ್ಮ ಸಂಸಾರ ಮತ್ತು ಮಕ್ಕಳ ಪಾಲನೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ.

67

ನಿರ್ಮಾಪಕರ ಕಾಯುವಿಕೆ:

ಸೀರಿಯಲ್ ನಿರ್ಮಾಪಕ ಅಸಿತ್ ಕುಮಾರ್ ಮೋದಿ ಅವರು ಹಲವು ಬಾರಿ ದಿಶಾ ಅವರನ್ನು ವಾಪಸ್ ಕರೆತರಲು ಪ್ರಯತ್ನಿಸಿದರು. ಆದರೆ ಅವರ ಕಡೆಯಿಂದ ಸಕಾರಾತ್ಮಕ ಪ್ರತಿಕ್ರಿಯೆ ಸಿಗದ ಕಾರಣ, ಈಗ ಹೊಸ 'ದಯಾಬೆನ್' ಹುಡುಕಾಟ ನಡೆಸುತ್ತಿದ್ದಾರೆ. "ದಿಶಾ ಅವರ ಸ್ಥಾನ ತುಂಬುವುದು ಸುಲಭವಲ್ಲ. 

77

ಆ ಪಾತ್ರಕ್ಕೆ ಅಷ್ಟೇ ಪ್ರತಿಭಾವಂತ ನಟಿ ಬೇಕು" ಎಂದು ಅವರು ಇತ್ತೀಚೆಗೆ ಹೇಳಿಕೆ ನೀಡಿದ್ದಾರೆ. ಒಟ್ಟಿನಲ್ಲಿ ಐಶ್ವರ್ಯಾ ರೈ ಜೊತೆ ನಟಿಸಿ, ಕಿರುತೆರೆಯ ರಾಣಿಯಾಗಿ ಮೆರೆದ ದಿಶಾ ವಕಾನಿ ಅವರ ಅಬ್ಬರದ ನಟನೆಯನ್ನು ಅಭಿಮಾನಿಗಳು ಇಂದಿಗೂ ಮಿಸ್ ಮಾಡಿಕೊಳ್ಳುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories