ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬಾಲಿವುಡ್ ರಾಣಿ ಕಂಗನಾ ರಣಾವತ್ ಅವರ ಹೊಸ ಅಭಿಮಾನಿ ಆಗಿದ್ದಾರೆ. ಹೌದು ಇದು ನಿಜ. ಸಂದರ್ಶನವೊಂದರಲ್ಲಿ ಯೋಗಿ ಆದಿತ್ಯನಾಥ್ ಅವರು ಪ್ರಸ್ತುತ ಯುಪಿ ವಿಧಾನಸಭಾ ಚುನಾವಣೆ ಮುಗಿದ ನಂತರ ಕಂಗನಾ ಅವರ ಸಿನಿಮಾಗಳನ್ನು ನೋಡುವುದಾಗಿ ಹೇಳಿದ್ದಾರೆ.
'ನಾನು ಕಂಗನಾ ಅವರ ಚಲನಚಿತ್ರಗಳನ್ನು ಖಂಡಿತಾಗಿ ನೋಡುತ್ತೇನೆ' ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಈ ನಡುವೆ ಕಂಗನಾ ತಮ್ಮ ಇನ್‌ಸ್ಟಾ ಸ್ಟೋರಿಯಲ್ಲಿ ಯೋಗಿ ಆದಿತ್ಯನಾಥ್ ಅವರ ವೀಡಿಯೊವನ್ನು ಹಂಚಿಕೊಂಡಿದ್ದು 'ಮಹಾರಾಜ್ ಜಿ' ಎಂದು ಕ್ಯಾಪ್ಷನ್ ಜೊತೆ ಹಾರ್ಟ್ ಎಮೋಜಿ ಮತ್ತು ನಮಸ್ಕಾರದ ಕೈ ಎಮೋಜಿಗಳನ್ನು ಹಾಕಿದ್ದಾರೆ.
ಸಂದರ್ಶನದಲ್ಲಿ ಯೋಗಿ ಆದಿತ್ಯನಾಥ್ ಅವರು ನೋಯ್ಡಾದಲ್ಲಿ ಮಾಡಲು ಬಯಸಿರುವ ಫಿಲ್ಮ್ ಸಿಟಿ ವಿಶ್ವದ ಅತಿದೊಡ್ಡ ಫಿಲ್ಮ್ ಸಿಟಿಗಳಲ್ಲಿ ಒಂದಾಗಲಿದೆ ಎಂದು ಹೇಳಿದರು. ಯುಪಿಯಲ್ಲಿ ಬಿಜೆಪಿ ಸರ್ಕಾರವು ಭಾರತೀಯ ಚಲನಚಿತ್ರಗಳಿಗಾಗಿ ವಿಶ್ವದರ್ಜೆಯ ಸ್ಟುಡಿಯೋ ನಿರ್ಮಿಸಲು ಬಯಸಿದೆ ಎಂದು ಆಗಾಗ್ಗೆ ಹೇಳುತ್ತಿದೆ.
ಕಂಗನಾ ವಿವೇಕಾನಂದರ ಫೋಟೋವನ್ನು ಹಂಚಿಕೊಂಡು, 'ಸ್ವಾಮಿ ವಿವೇಕಾನಂದರ ಜನ್ಮದಿನದ ಶುಭಾಶಯಗಳು' ಎಂದು ಬರೆದಿದ್ದಾರೆ. 'ಜಗತ್ತಿಗೆ ಸಹಿಷ್ಣುತೆ ಮತ್ತು ಸಾರ್ವತ್ರಿಕ ಸ್ವೀಕಾರ ಎರಡನ್ನೂ ಕಲಿಸಿದ ಧರ್ಮಕ್ಕೆ ಸೇರಿದವಳು ಎಂದು ನಾನು ಹೆಮ್ಮೆಪಡುತ್ತೇನೆ. ನಾವು ಸಾರ್ವತ್ರಿಕ ಸಹಿಷ್ಣುತೆಯನ್ನು ನಂಬುತ್ತೇವೆ, ಆದರೆ ನಾವು ಎಲ್ಲಾ ಧರ್ಮಗಳನ್ನು ಸತ್ಯವೆಂದು ಸ್ವೀಕರಿಸುತ್ತೇವೆ' ಎಂದು ಕಂಗನಾ ಬರೆದಿದ್ದಾರೆ.
ಅರವಿಂದ್ ಸ್ವಾಮಿ ಜೊತೆ ಜೆ ಜಯಲಲಿತಾ ಪಾತ್ರದಲ್ಲಿ ಕಂಗನಾ ರಣಾವತ್ ನಟಿಸಿರುವ ತಲೈವಿ ಸಿನಿಮಾವನ್ನು ಅನೇಕ ಖ್ಯಾತನಾಮರು ಮತ್ತು ರಾಜಕಾರಣಿಗಳು ಹೊಗಳಿದರು. ನಟರಾದ ಅರ್ಜುನ್ ರಾಂಪಾಲ್ ಮತ್ತು ದಿವ್ಯಾ ದತ್ತಾ ಅವರೊಂದಿಗೆ ಢಾಕಾಡ್‌ನಲ್ಲಿ ಮುಂದಿನ ದಿನಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇದಲ್ಲದೆ ಕಂಗನಾ ತೇಜಸ್ ಸಿನಿಮಾವನ್ನು ಸಹ ಮಾಡುತ್ತಿದ್ದಾರೆ. ಅದರಲ್ಲಿ ಅವರು ಭಾರತೀಯ ವಾಯುಪಡೆಯ ಫೈಟರ್ ಪೈಲಟ್ ಪಾತ್ರವನ್ನು ನಿರ್ವಹಿಸಲಿದ್ದಾರೆ. ಈ ಸಿನಿಮಾಗಳನ್ನು ಹೊರತುಪಡಿಸಿ, ಅವರು ನವಾಜುದ್ದೀನ್ ಸಿದ್ದಿಕಿ ಮತ್ತು ಅವನೀತ್ ಕೌರ್ ಅಭಿನಯದ ಟಿಕು ವೆಡ್ಸ್ ಶೇರು ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ.