ಮೌನಿ ರಾಯ್ ಜನವರಿ 27 ರಂದು ಗೋವಾದಲ್ಲಿ ಸಪ್ತಪದಿ ತುಳಿಯಲಿದ್ದಾರೆ. ಈಗ ಕೇಳಿಬರುತ್ತಿರುವ ಮಾಹಿತಿಯ ಪ್ರಕಾರ, ಗೋವಾದಲ್ಲಿ ಪಂಚತಾರಾ ರೆಸಾರ್ಟ್ ಬುಕ್ ಮಾಡಲಾಗಿದ್ದು, ಅತಿಥಿಗಳಿಗೆ ಆಹ್ವಾನ ಕಳುಹಿಸಲು ಪ್ರಾರಂಭಿಸಲಾಗಿದೆ.
ವಿವಾಹದ ನಂತರ ಜನವರಿ 28 ರಂದು ಡ್ಯಾನ್ಸ್ ಪಾರ್ಟಿ ಆಯೋಜಿಸಲಾಗಿದ್ದು, ರಾಯ್ ಅವರ ನಿಕಟ ಸ್ನೇಹಿತರು ಮತ್ತು ಡ್ಯಾನ್ಸ್ ರಿಯಾಲಿಟಿ ಶೋನ ಹಳೆಯ ಸ್ಪರ್ಧಿಗಳಾದ ಪ್ರತೀಕ್ ಉಟೇಕರ್ ಮತ್ತು ರಾಹುಲ್ ಶೆಟ್ಟಿ ಅವರು ಅದಕ್ಕಾಗಿ ಅಭ್ಯಾಸ ಮಾಡುತ್ತಿದ್ದಾರೆ.
ಮದುವೆಗೂ ಮುನ್ನ ಹಳದಿ, ಮೆಹಂದಿ, ಸಂಗೀತ ಕಾರ್ಯಕ್ರಮ ನಡೆಯಲಿದೆ.ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್, ಏಕ್ತಾ ಕಪೂರ್, ಫ್ಯಾಶನ್ ಡಿಸೈನರ್ ಮನೀಶ್ ಮಲ್ಹೋತ್ರಾ ಮತ್ತು ಟಿವಿ ನಟಿ ಆಶ್ಕಾ ಗೊರಾಡಿಯಾ ಹೆಸರುಗಳು ಅತಿಥಿಗಳ ಪಟ್ಟಿಯಲ್ಲಿ ಬಹುತೇಕ ದೃಢೀಕರಿಸಲ್ಪಟ್ಟಿವೆ.
ಮೌನಿ ಮತ್ತು ಸೂರಜ್ ಡೆಸ್ಟಿನೇಶನ್ ವೆಡ್ಡಿಂಗ್ ಮಾಡಲಿದ್ದಾರೆ ಎಂದು ಹೇಳಲಾಗುತ್ತು ಮದುವೆಗೆ ದುಬೈ ಆಯ್ಕೆ ಮಾಡಿಕೊಂಡಿದ್ದರು.ಆದರೆ ಕೊರೊನಾ ಹಿನ್ನೆಲೆಯಲ್ಲಿ ಈಗ ಮದುವೆ ಗೋವಾದಲ್ಲಿ ನಡೆಯಲಿದೆ. ವಾಗೇಟರ್ ಬೀಚ್ ಬಳಿಯ ಡಬ್ಲ್ಯೂ ಗೋವಾ ಮದುವೆಯ ಸ್ಥಳವಾಗಿದೆ ಎಂದು ವರದಿ ಹೇಳಿದೆ.
ಮದುವೆಯ ನಂತರ, ಮೌನಿ ತನ್ನ ಹುಟ್ಟೂರಾದ ಕೂಚ್ ಬೆಹಾರ್‌ನಲ್ಲಿ ಭವ್ಯವಾದ ಆರತಕ್ಷತೆಯನ್ನು ನೀಡಲಿದ್ದು, ಆಕೆಯ ಆಪ್ತರು ಮತ್ತು ಸಂಬಂಧಿಕರು ಭಾಗವಹಿಸಲಿದ್ದಾರೆ. ಮೌನಿ ರಾಯ್ ಅವರ ಭಾವಿ ಪತಿ ಸೂರಜ್ ನಂಬಿಯಾರ್ ಬ್ಯಾಂಕರ್ ಆಗಿದ್ದು, ದುಬೈನಲ್ಲಿ ವಾಸಿಸುತ್ತಿದ್ದಾರೆ. ಸದ್ಯಕ್ಕೆ ಮೌನಿ ರಾಯ್ ಮದುವೆ ಬಗ್ಗೆ ಅಧಿಕೃತ ಘೋಷಣೆ ಮಾಡಿಲ್ಲ.
ಮೌನಿ ರಾಯ್ ಅವರು ಜನಪ್ರಿಯ ಟಿವಿ ಶೋ 'ಡೆವೋನ್ ಕೆ ದೇವ್ ಮಹಾದೇವ್' ನಲ್ಲಿ ಸತಿ ಪಾತ್ರವನ್ನು ನಿರ್ವಹಿಸಿದ್ದಾರೆ. ಮೌನಿ 2018 ರ ಗೋಲ್ಡ್ ಚಿತ್ರದಲ್ಲಿ ಅಕ್ಷಯ್ ಕುಮಾರ್ ಅವರ ಪತ್ನಿಯಾಗಿ ಕಾಣಿಸಿದ್ದಾರೆ. ಮೌನಿ ರಾಯ್ ಅವರು ಇತ್ತೀಚೆಗೆ ಮ್ಯೂಸಿಕ್ ವಿಡಿಯೋ 'ಬೈತೆ ಬೈತೆ' ನಲ್ಲಿ ನೇಹಾ ಧೂಪಿಯಾ ಅವರ ಪತಿ ಅಂಗದ್ ಬೇಡಿ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ.
ಮೌನಿ ರಾಯ್ ಶೀಘ್ರದಲ್ಲೇ ಅಯನ್ ಮುಖರ್ಜಿ ಅವರ 'ಬ್ರಹ್ಮಾಸ್ತ್ರ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರೊಂದಿಗೆ ಅಮಿತಾಬ್ ಬಚ್ಚನ್, ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಕೂಡ ಈ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ.
ಬಂಗಾಳಿ ಕುಟುಂಬದಲ್ಲಿ ಜನಿಸಿದ ಮೌನಿ ಸೆಂಟ್ರಲ್ ಸ್ಕೂಲ್‌ನಲ್ಲಿ ತನ್ನ ಅಧ್ಯಯನವನ್ನು ಪೂರ್ಣಗೊಳಿಸಿದರು. ನಂತರ ಜಾಮಿಯಾ ಮಿಲಿಯಾ ಇಸ್ಲಾಮಿಯಾದಿಂದ ಮಾಸ್ ಕಮ್ಯೂನಿಕೇಷನ್ ಓದುತ್ತಿದ್ದ ಮೌನಿ ತನ್ನ ಅಧ್ಯಯನವನ್ನು ಮಧ್ಯದಲ್ಲಿ ಬಿಟ್ಟು ನಟನೆಯನ್ನು ಪ್ರಾರಂಭಿಸಿದರು
2007 ರಲ್ಲಿ, ಅವರು ಟಿವಿಯ ಅತ್ಯಂತ ಜನಪ್ರಿಯ ಕಾರ್ಯಕ್ರಮ ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅದರ ನಂತರ ಅವರು ಇನ್ನೂ ಹಲವು ಶೋಗಳಲ್ಲಿ ಕೆಲಸ ಮಾಡಿದರು. ನಾಗಿನ್ ಅವರಿಗೆ ಖ್ಯಾತಿ ತಂದುಕೊಟ್ಟಿತು.