ಟೀಮ್ ಇಂಡಿಯಾದ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಕಳೆದ ವರ್ಷ ಮಗಳು ವಾಮಿಕಾಳಿಗೆ ಪೋಷಕರಾದರು. ಅವಳು ಮಂಗಳವಾರ ಒಂದು ವರ್ಷಕ್ಕೆ ಕಾಲಿಟ್ಟಿದ್ದಾಳೆ. ವಿರುಷ್ಕಾ ತಮ್ಮ ಮಗಳ ಮೊದಲ ಹುಟ್ಟುಹಬ್ಬವನ್ನು ಹೇಗೆ ಆಚರಿಸಿಕೊಂಡರು ಎಂಬುದು ಇಲ್ಲಿದೆ.
ಪ್ರಸುತ್ತ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಬ್ಯುಸಿಯಾಗಿದ್ದಾರೆ. ಈ ದಿನಗಳಲ್ಲಿ ಪತ್ನಿ ಅನುಷ್ಕಾ ಶರ್ಮ ಹಾಗೂ ಮಗಳು ವಮಿಕಾ ಕೂಡ ವಿರಾಟ್ ಕೊಹ್ಲಿ ಜೊತೆ ದಕ್ಷಿಣ ಆಫ್ರಿಕಾದಲ್ಲಿದ್ದಾರೆ. ಮಗಳ ಮೊದಲ ಬರ್ತ್‌ಡೇ ಸಮಯದಲ್ಲಿ ಅನುಷ್ಕಾ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಒಂದೆರಡು ಫೋಟೋಗಳನ್ನು ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.
ಮೊದಲ ಫೋಟೋದಲ್ಲಿ, ಒಂದು ವರ್ಷ ತುಂಬಿದ ವಾಮಿಕಾಳ ಹೆಸರಿನಲ್ಲಿ ವಿರುಷ್ಕಾ ಶಾಂಪೇನ್ ಟೋಸ್ಟ್ ರೈಸ್ ಮಾಡಿರುವುದು ಕಾಣಬಹುದಾಗಿದೆ. 'ಸೂರ್ಯ ಪ್ರಕಾಶಮಾನವಾಗಿತ್ತು, ಬೆಳಕು ಸುಂದರವಾಗಿದೆ, ಮೇಜು ತುಂಬಿದೆ ಮತ್ತು ಅದರಂತೆಯೇ ನಮ್ಮ ಪುಟ್ಟ ಹುಡುಗಿ ಒಂದು ವರ್ಷದವಳಾದಳು' ಎಂದು ಅನುಷ್ಕಾ ಫೋಟೋಗೆ ಶೀರ್ಷಿಕೆ ನೀಡಿದ್ದಾರೆ.
ಇನ್ನೊಂದು ಫೋಟೋದಲ್ಲಿ ಅನುಷ್ಕಾ ವಾಮಿಕಾ ಜೊತೆ ಸಂಭ್ರಮಿಸುತ್ತಿದ್ದಾರೆ. 'ಸಂಜೆಯನ್ನು ಅತ್ಯಂತ ಪ್ರೀತಿಯ ಜನರೊಂದಿಗೆ ವಿಶೇಷಗೊಳಿಸಲಾಯಿತು. ಇಲ್ಲಿ, ಅವಳ ಮೊದಲ ಹುಟ್ಟುಹಬ್ಬದ ಬಗ್ಗೆ ನಾನು ಚಿಂತಿತಳಾಗಿದ್ದೆ! ಥ್ಯಾಂಕ್ಸೂ ಗಯ್ಸ್' ಎಂದು ಬರೆದಿದ್ದಾರೆ ' ಮೈ ಬೇಬಿ ಗರ್ಲ್' ಎಂದು ಬರೆಯುವ ಮೂಲಕ ಅವರು ಫೋಟೋಗೆ ಇನ್ನೊಂದು ಕ್ಯಾಪ್ಷನ್ ನೀಡಿದ್ದಾರೆ.
ಮತ್ತೊಂದೆಡೆ, ವೃದ್ಧಿಮಾನ್ ಸಹಾ ಅವರ ಪತ್ನಿ ರೋಮಿ ಮಿತ್ರಾ ಕೂಡ ವಾಮಿಕಾಳ ಫೋಟೋವನ್ನು ಹಂಚಿಕೊಂಡಿದ್ದಾರೆ. ವಮಿಕಾ ವೃದ್ಧಿಮಾನ್ ಸಹಾ ಅವರ ಮಗಳೊಂದಿಗೆ ಆಟವಾಡುತ್ತಿರುವುದು ಫೋಟೋಕಾಣಬಹುದು. 'ಪ್ರೀತಿಯ ವಾಮಿಕಾಗೆ ಜನ್ಮದಿನದ ಶುಭಾಶಯಗಳು' ಎಂದು ರೋಮಿ ಶೀರ್ಷಿಕೆ ನೀಡಿದ್ದಾರೆ.
ಕೊಹ್ಲಿ ಪ್ರಸ್ತುತ ಟೀಂ ಇಂಡಿಯಾದಲ್ಲಿ ಬ್ಯುಸಿಯಾಗಿದ್ದು, ಕೇಪ್ ಟೌನ್‌ನ ನ್ಯೂಲ್ಯಾಂಡ್ಸ್ ಸ್ಟೇಡಿಯಂನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಟೆಸ್ಟ್‌ನಲ್ಲಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಮೊದಲ ಬಾರಿಗೆ ಸರಣಿ ಜಯ ಸಾಧಿಸುವ ಕಡೆ ಟೀಮ್ ಇಂಡಿಯಾ ಕಣ್ಣಿಟ್ಟಿದೆ.
ಸದ್ಯ ಸರಣಿ 1-1ರಲ್ಲಿ ಸಮಬಲಗೊಂಡಿದೆ. ಸೆಂಚುರಿಯನ್‌ನಲ್ಲಿ ನಡೆದ ಆರಂಭಿಕ ಟೆಸ್ಟ್‌ನಲ್ಲಿ ಭಾರತವು ಗೆದ್ದರೆ, ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್ ಸ್ಟೇಡಿಯಂನಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ ಅದನ್ನು ಸಮಗೊಳಿಸಿತು.