Cannes 2023: ಸೀರೆಯಲ್ಲಿ ಸಾರಾ ಸ್ಟನ್ನಿಂಗ್‌ ಲುಕ್‌; ಶರ್ಮಿಳಾ ಟ್ಯಾಗೋರ್‌ ಪಡಿಯಚ್ಚು ಎಂದ ಫ್ಯಾನ್ಸ್‌

Published : May 18, 2023, 04:47 PM IST

2023ರ ಕೇನ್ಸ್‌ನಲ್ಲಿ, (Cannes 2023)  ಬಾಲಿವುಡ್‌ ನಟಿ ಸಾರಾ ಅಲಿ ಖಾನ್ (Sara Ali Khan) ತಮ್ಮ ಲುಕ್‌ನಿಂದ  ಎಲ್ಲರ ಗಮನ ಸೆಳೆದಿದ್ದಾರೆ. ಆಕೆಯ ಅಬು ಜಾನಿ ಸಂದೀಪ್ ಖೋಸ್ಲಾ ವಿನ್ಯಾಸ, ಸಮಕಾಲೀನ ಟ್ವಿಸ್ಟ್ ಹೊಂದಿರುವ ಸೀರೆಯನ್ನು ಅಭಿಮಾನಿಗಳು ಮೆಚ್ಚುತ್ತಿದ್ದಾರೆ. ಆಕೆಯನ್ನು ಅಭಿಮಾನಿಗಳು ಅವರ ಅಜ್ಜಿ ಶರ್ಮಿಳಾ ಟ್ಯಾಗೋರ್‌ಗೆ ಹೋಲಿಸಿದ್ದಾರೆ. ಇಲ್ಲಿದೆ ಸಾರಾರ  ಕೇನ್ಸ್‌ನ ಮೂರನೇ ಲುಕ್‌.

PREV
18
Cannes 2023: ಸೀರೆಯಲ್ಲಿ ಸಾರಾ ಸ್ಟನ್ನಿಂಗ್‌ ಲುಕ್‌;  ಶರ್ಮಿಳಾ ಟ್ಯಾಗೋರ್‌ ಪಡಿಯಚ್ಚು ಎಂದ ಫ್ಯಾನ್ಸ್‌

ಫ್ರೆಂಚ್ ರಿವೇರಿಯಾದಲ್ಲಿ ನಡೆಯುತ್ತಿರುವ 76ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಬಹಳಷ್ಟು ಭಾರತೀಯ ನಟಿಯರು ಗಮನ ಸೆಳೆಯಲು ಪ್ರಾರಂಭಿಸಿದ್ದಾರೆ. ಅವರಲ್ಲಿ ಒಬ್ಬರು ಸೈಫ್‌ ಆಲಿ ಖಾನ್‌ ಪುತ್ರಿ ಬಾಲಿವುಡ್‌ ನಟಿ  ಸಾರಾ ಅಲಿ ಖಾನ್.

28

ಸುಂದರಿ ಸಾರಾ ಅಲಿ ಖಾನ್ ಮೊದಲ ಬಾರಿಗೆ ಕೇನ್ಸ್‌ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಅಂತಾರಾಷ್ಟ್ರೀಯ ರೆಡ್ ಕಾರ್ಪೆಟ್‌ನ ಭಾಗವಾಗಿದ್ದಾರೆ 

38

ಎರಡು ದಿನಗಳಿಂದ ಅದ್ಭುತ ಲುಕ್‌ನಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. ಈ ಹಿಂದೆ ಲೆಹೆಂಗಾ ಮತ್ತು ಕಪ್ಪು ಗೌನ್ ಧರಿಸಿದ್ದ ಸಾರಾ, ಅತ್ಯಾಧುನಿಕ ಸೀರೆಯನ್ನು ಧರಿಸುವ ಮೂಲಕ ತನ್ನ ಮೂರನೇ ಲುಕ್‌ ಅನ್ನು ಪ್ರಸ್ತುತ ಪಡಿಸಿದ್ದರು.

48

ಸಾಂಪ್ರದಾಯಿಕ ಸೀರೆಯನ್ನು ನವೀಕರಿಸಿದ್ದಾರೆ. ಹಾಲ್ಟರ್ ಟಾಪ್ ಮತ್ತು ದಂತ ಬಣ್ಣದ ಸೀರೆ ಜೊತೆ ಮುತ್ತಿನ ಹಾರಗಳನ್ನು ಧರಿಸಿ ಸಾರಾ ತಮ್ಮ ಲುಕ್‌ ಪೂರ್ಣಗೊಳಿಸಿದ್ದಾರೆ.

58

ಸಾರಾ ಅಲಿ ಖಾನ್  ಸುಂದರವಾದ ಫೋಟೋಗಳ ಸರಣಿಯಲ್ಲಿ ಕೇನ್ಸ್‌ನ ತನ್ನ ಮೂರನೇ ಲುಕ್‌ ಅನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಮತ್ತೊಮ್ಮೆ ನಟಿ ಅಬು ಜಾನಿ ಸಂದೀಪ್ ಖೋಸ್ಲಾ ಕುಮಾರ್ ಅವರ ಡಿಸೈನ್‌ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ. 

68

ಸಾರಾರ ಈ ಲುಕ್‌ ಅನ್ನು ಅಭಿಮಾನಿಗಳು ಬಹಳವಾಗಿ ಮೆಚ್ಚಿ ಕಾಮೆಂಟ್‌ ಮಾಡುತ್ತಿದ್ದಾರೆ. ಕೆಲವರು ಸಾರಾರಲ್ಲಿ ಅವರ ಅಜ್ಜಿ ಶರ್ಮಿಳಾ ಟ್ಯಾಗೋರ್ ಅವರಿಗೆ ಹೋಲಿಸಿದ್ದಾರೆ.

78

ಕೇನ್ಸ್ 2023 ರ ಸಾರಾ ಅಲಿ ಖಾನ್ ಅವರ ಅತ್ಯುತ್ತಮ ಲುಕ್‌ಗಳಲ್ಲಿ ಇದು ಒಂದು. ಈ ಹಿಂದೆ, ಪಾರ್ಟಿ ನಂತರ, ಸಾರಾ ಅಲಿ ಖಾನ್ ಹೃದಯದ ಮೋಟಿಫ್ ಹೊಂದಿರುವ ಮೊಸ್ಚಿನೋ ಡ್ರೆಸ್ ಧರಿಸಿದ್ದರು. 
 

88

ಸಾರಾ ಅಲಿ ಖಾನ್ ಅವರ ಕೇನ್ಸ್‌ ಡೆಬ್ಯು ಔಟ್‌ಫಿಟ್‌ಗೆ ಅಬು ಜಾನಿ ಖೋಸ್ಲಾ ಕುಮಾರ್ ಅವರ ಲೆಹೆಂಗಾ ಆರಿಸಿಕೊಂಡಿದ್ದರು. ಶ್ರೀಮಂತ ಕಸೂತಿ ಹೊಂದಿರುವ ಲೆಹೆಂಗಾ ಆದಾಗಿತ್ತು.

Read more Photos on
click me!

Recommended Stories