Cine World
ಬಾಲಿವುಡ್ ನಟಿ ಸಾರಾ ಅಲಿ ಖಾನ್ ಮೊದಲ ಬಾರಿಗೆ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾಗಿಯಾಗಿದ್ದು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದಾರೆ.
ಕಾನ್ ಫಿಲ್ಮ್ ಫೆಸ್ಟಿವಲ್ ಅಂದ್ಮೇಲೆ ನಟಿಯರ ಲುಕ್ ಗಮನ ಸೆಳೆಯುತ್ತದೆ. ಈ ಬಾರಿ ನಟಿ ಸಾರಾ ಅಲಿ ಖಾನ್ ದೇಸಿ ಲುಕ್‌ನಲ್ಲಿ ಮಿಂಚಿದ್ದಾರೆ.
ನಟಿ ಸಾರಾ ಅಲಿ ಖಾನ್ ಲೆಹಂಗಾ ಧರಿಸಿ ರ್ಯಾಂಪ್ ವಾಕ್ ಮಾಡಿದ್ದಾರೆ. ಬಿಳಿ ಮತ್ತು ಗೋಲ್ಡನ್ ಬಣ್ಣದ ಲೆಹಂಗಾ ಹಾಗೂ ದುಪಟ್ಟ ಪಿನ್ ಮಾಡಿ ವಾಕ್ ಮಾಡಿದ್ದಾರೆ.
ಕಾನ್ 2023ಗೆ ಅದ್ದೂರಿಯಾಗಿ ಪ್ರಾರಂಭವಾಗಿದೆ. ಇದು 76ನೇ ಕಾನ್ ಫಿಲ್ಮ್ ಫೆಸ್ಟಿವಲ್ ಆಗಿದೆ. ಮೊದಲ ದಿನ ಬಾಲಿವುಡ್ ನಟಿ ಸಾರಾ ಮಿಂಚಿದ್ದಾರೆ.
ಸಾರಾ ಅಲಿ ಖಾನ್ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಜರಾ ಹಟ್ಕೆ ಜರಾ ಬಚ್ಕೆ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ.
ಕೊನೆಯದಾಗಿ ಗ್ಯಾಸ್‌ಲೈಟ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಆದರೆ ಆ ಸಿನಿಮಾ ಹೇಳಿಕೊಳ್ಳುವಷ್ಟು ಸಕ್ಸಸ್ ಕಂಡಿಲ್ಲ.
ಜರಾ ಹಟ್ಕೆ ಜರಾ ಬಚ್ಕೆ ಸಿನಿಮಾ ಜೊತೆಗೆ ಏ ವತನ್ ಮೇರೆ ವತನ್, ಮರ್ಡರ್ ಮುಬಾರಕ್ ಸಿನಿಮಾಗಳನ್ನು ಮುಗಿಸಿದ್ದಾರೆ.
ಮದ್ವೆಯಾಗಿ 14 ವರ್ಷದ ಬಳಿಕ ಹೆಣ್ಣು ಮಗು ದತ್ತು ಪಡೆದ ನಟಿ ಅಭಿರಾಮಿ
ಪರಿಣೀತಿ ಚೋಪ್ರಾ ಮತ್ತು ರಾಘವ್ ನಿಶ್ಚಿತಾರ್ಥದ ಸುಂದರ ಫೋಟೋಗಳು
ತಂಗಿ ನಿಶ್ಚಿತಾರ್ಥಕ್ಕೆ ಪ್ರಿಯಾಂಕಾ ಧರಿಸಿದ್ದ ಡ್ರೆಸ್ ಬೆಲೆ ಎಷ್ಟು?
ತಾಯ್ತನದ ಕ್ಷಣ ಎಂಜಾಯ್ ಮಾಡ್ತಿರುವ ಬಾಲಿವುಡ್ ನಟಿ ಬಿಪಾಶಾ ಬಸು