Brahmastra: ರಣಬೀರ್‌ ಕಪೂರ್‌ ತಾಯಿ ಪಾತ್ರದಲ್ಲಿ ನಟನ ಎಕ್ಸ್‌ಗರ್ಲ್‌ಫ್ರೆಂಡ್‌?

First Published | Sep 11, 2022, 4:21 PM IST

ರಣಬೀರ್ ಕಪೂರ್ (Ranbir Kapoor) ಮತ್ತು ಆಲಿಯಾ ಭಟ್ (Alia Bhatt) ಅಭಿನಯದ ಬ್ರಹ್ಮಾಸ್ತ್ರ (Brahmastra) ಚಿತ್ರವು ಬಿಡುಗಡೆಯೊಂದಿಗೆ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುತ್ತಿದೆ. ಮೊದಲ ದಿನವೇ ಈ ಚಿತ್ರ ವಿಶ್ವದಾದ್ಯಂತ 75 ಕೋಟಿ ಗಳಿಸಿದೆ. ಅದೇ ಸಮಯದಲ್ಲಿ, ವಾರಾಂತ್ಯದಲ್ಲಿ ಈ ಅಂಕಿ ಅಂಶವು 100 ಕೋಟಿ ತಲುಪಬಹುದು ಎಂದು ವ್ಯಾಪಾರ ವಿಶ್ಲೇಷಕರು ಹೇಳುತ್ತಾರೆ. ಈ ನಡುವೆ ಚಿತ್ರಕ್ಕೆ ಸಂಬಂಧಿಸಿದ ಶಾಕಿಂಗ್ ಮಾಹಿತಿ ಹೊರಬಿದ್ದಿದೆ. ಚಿತ್ರಕ್ಕೆ ಸಂಬಂಧಿಸಿದ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಇದನ್ನು ನೋಡಿದ ನಂತರ ದೀಪಿಕಾ ಪಡುಕೋಣೆ (Deepika Padukone)ಚಿತ್ರದಲ್ಲಿ ರಣಬೀರ್ ಕಪೂರ್ ಅವರ ತಾಯಿಯ ಪಾತ್ರವನ್ನು ನಿರ್ವಹಿಸಿದ್ದಾರೆ ಎಂದು ಹೇಳಲಾಗುತ್ತಿದೆ. 

ಚಿತ್ರದ ಕೆಲವು ಫೋಟೋಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತಿವೆ. ಫೋಟೋಗಳು ಮಸುಕಾಗಿವೆ, ಆದರೆ ದೀಪಿಕಾ ಗುರುತಿಸಬಹುದಾಗಿದೆ. ಇದರಲ್ಲಿ ಮಗುವನ್ನು ತನ್ನ ಮಡಿಲಲ್ಲಿ ಎತ್ತಿಕೊಂಡಿರುವುದು ಕಾಣಿಸುತ್ತದೆ. ಮತ್ತು ಈ ಚಿತ್ರದಲ್ಲಿ ದೀಪಿಕಾ ರಣಬೀರ್ ತಾಯಿಯ ಪಾತ್ರವನ್ನು ನಿರ್ವಹಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಅಯನ್ ಮುಖರ್ಜಿ ಅವರ ಬ್ರಹ್ಮಾಸ್ತ್ರ ಚಿತ್ರದಲ್ಲಿ ರಣಬೀರ್ ಕಪೂರ್ ಶಿವನ ಪಾತ್ರವನ್ನು ನಿರ್ವಹಿಸಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ತಂದೆ-ತಾಯಿಯನ್ನು ಕಳೆದುಕೊಂಡ ಶಿವ ಪಾತ್ರದಲ್ಲಿ ರಣಬೀರ್ ಕಪೂರ್  ಕಾಣಿಸಿಕೊಂಡಿದ್ದಾರೆ.

Tap to resize

ಚಿತ್ರದಲ್ಲಿ ಮಧ್ಯಂತರ ದೃಶ್ಯವಿದ್ದು, ಅದರಲ್ಲಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದು. ಮಗು ಕೈಯಲ್ಲಿದೆ. ಇದರಿಂದ ಚಿತ್ರದಲ್ಲಿ ರಣಬೀರ್‌ಗೆ ತಾಯಿಯಾಗಿದ್ದಾಳೆ ಎಂಬ ಮಾಹಿತಿ ಹೊರಬಿದ್ದಿದೆ. 

ಆದರೆ, ಚಿತ್ರ ಬಿಡುಗಡೆಯಾದ ಬಳಿಕವಷ್ಟೇ ಇದಕ್ಕೆ ಸಂಬಂಧಿಸಿದ ಯಾವುದೇ ಸ್ಪಾಯ್ಲರ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಬೇಡಿ ಎಂದು ರಣಬೀರ್ ಎಲ್ಲರಿಗೂ ವಿನಂತಿಸಿದ್ದರು, ಆದರೆ ಅಭಿಮಾನಿಗಳು  ದೀಪಿಕಾ ಅವರ ಈ ಸೀನ್‌ ಹಂಚಿಕೊಂಡಿದ್ದಾರೆ. 

ಚಿತ್ರದಲ್ಲಿ ದೀಪಿಕಾ ಹೊರತಾಗಿ ಶಾರುಖ್ ಖಾನ್ ಮತ್ತು ನಾಗಾರ್ಜುನ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅದೇ ಸಮಯದಲ್ಲಿ ಮೌನಿ ರಾಯ್ ನೆಗೆಟಿವ್  ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅವರು ತಮ್ಮ ಪಾತ್ರದಿಂದ ಜನರನ್ನು ಹೆಚ್ಚು ಆಕರ್ಷಿಸಿದ್ದಾರೆ.

4 ವರ್ಷಗಳ ನಂತರ, ರಣಬೀರ್ ಕಪೂರ್ ಶಂಶೇರಾ ಚಿತ್ರದ ಮೂಲಕ  ಪುನರಾಗಮನ ಮಾಡಿದರು.. ಆದರೆ, ಅವರ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ನೆಲಕಚ್ಚಿತು. ಬಿಡುಗಡೆಯ ದಿನವೇ ಚಿತ್ರಕ್ಕೆ ಫ್ಲಾಪ್ ಎಂಬ ಟ್ಯಾಗ್ ನೀಡಲಾಗಿದೆ. ಇದರ ನಂತರ ಅವರ ಎಲ್ಲಾ ಭರವಸೆಗಳು ಬ್ರಹ್ಮಾಸ್ತ್ರದ ಮೇಲೆ ನಿಂತಿದ್ದವು ಮತ್ತು ಚಿತ್ರವು ಉತ್ತಮ ಪ್ರದರ್ಶನ ನೀಡಿತು.
 

ಇನ್ನೂ ರಣಬೀರ್‌ ಕಪೂರ್‌ ಅವರ ಮುಂಬರುವ ಚಿತ್ರದ ಬಗ್ಗೆ  ಹೇಳುವುದಾದರೆ ಅವರು ಅನಿಮಲ್ ಹೊರತುಪಡಿಸಿ, ಅವರು ಲವ್ ರಂಜನ್ ಅವರ ಹೆಸರಿಡದ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಶ್ರದ್ಧಾ ಕಪೂರ್ ಅವರೊಂದಿಗೆ ಪ್ರಮುಖ ಪಾತ್ರದಲ್ಲಿದ್ದಾರೆ.

Latest Videos

click me!