SIIMA awardsನಲ್ಲಿ ಹಿಂದಿ ನಟರಿಗೂ ಸಿಗಲಿಲ್ಲ ರಾಕಿಂಗ್‌ ಸ್ಟಾರ್‌ ಯಶ್‌ಗೆ ಸಿಕ್ಕ ಎಂಟ್ರಿ

First Published Sep 11, 2022, 4:13 PM IST

10ನೇ ಸೌತ್ ಇಂಡಿಯನ್ ಇಂಟರ್‌ನ್ಯಾಶನಲ್ ಮೂವೀ ಅವಾರ್ಡ್ಸ್ (SIIMA) ಬೆಂಗಳೂರಿನಲ್ಲಿ ಶನಿವಾರ ನಡೆಯಿತು. ಸೂಪರ್ ಸ್ಟಾರ್ ಯಶ್, ರಣವೀರ್ ಸಿಂಗ್, ಅಲ್ಲು ಅರ್ಜುನ್, ಕಮಲ್ ಹಾಸನ್ ಮತ್ತು ವಿಜಯ್ ದೇವರಕೊಂಡ ಮುಂತಾದ ಸೆಲೆಬ್ರಿಟಿಗಳು ಎರಡು ದಿನಗಳ ಕಾಲ ನಡೆದ ಪ್ರಶಸ್ತಿ ಕಾರ್ಯಕ್ರಮದ ಮೊದಲ ದಿನ ಭಾಗವಹಿಸಿದ್ದರು. SIIMA ಪ್ರಶಸ್ತಿಗಳಲ್ಲಿ ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಚಲನಚಿತ್ರಗಳನ್ನು ಗೌರವಿಸಲಾಗುತ್ತದೆ. 'ಪುಷ್ಪ: ದಿ ರೈಸ್' ಚಿತ್ರಕ್ಕಾಗಿ ಅಲ್ಲು ಅರ್ಜುನ್ ಅತ್ಯುತ್ತಮ ನಟ (ತೆಲುಗು) ಪ್ರಶಸ್ತಿಯನ್ನು ಪಡೆದರು. ಅದೇ ಸಮಯದಲ್ಲಿ, 'ಮೋಸ್ಟ್ ಎಲಿಜಿಬಲ್ ಬ್ಯಾಚುಲರ್' ಚಿತ್ರಕ್ಕಾಗಿ ಪೂಜಾ ಹೆಗ್ಡೆ ಅತ್ಯುತ್ತಮ ನಟಿ (ತೆಲುಗು) ಪ್ರಶಸ್ತಿಯನ್ನು ಪಡೆದರು. ಇದಲ್ಲದೇ ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಗೆಳತಿ ರಿಯಾ ಚಕ್ರವರ್ತಿ ಕೂಡ ಕಾರ್ಯಕ್ರಮಕ್ಕೆ ಆಗಮಿಸಿದ್ದರು.

ಅವಾರ್ಡ್ ನೈಟ್ ಗೆ ಆಗಮಿಸಿದ ರಣವೀರ್ ಸಿಂಗ್ ಕೂಡ ಬರಿಗೈಯಲ್ಲಿ ಹಿಂತಿರುಗಲಿಲ್ಲ. ಅವರಿಗೆ ಇಲ್ಲಿ ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಹಿಂದಿ ನಟ ಪ್ರಶಸ್ತಿಯನ್ನು ನೀಡಲಾಯಿತು. ಪ್ರಶಸ್ತಿ ರಾತ್ರಿಗಾಗಿ ರಣವೀರ್ ತಿಳಿ ನೀಲಿ ಬಣ್ಣದ ಶರ್ಟ್ ಮತ್ತು ಬಿಳಿ ಟುಕ್ಸೆಡೊವನ್ನು ಪೇರ್‌ ಮಾಡಿದ್ದರು.

ಅಲ್ಲು ಅರ್ಜುನ್ ಇಲ್ಲಿ ಕಪ್ಪು ಸೂಟ್‌ನಲ್ಲಿ ಕಾಣಿಸಿಕೊಂಡಿದ್ದು, ಅದರ ಮೇಲೆ ಅವರ ಟ್ರೆಂಡ್ ಮಾರ್ಕ್ ಎಎ ಮುದ್ರಿಸಲಾಗಿದೆ. ಈ ವರ್ಷ, ಅಲ್ಲು ಅರ್ಜುನ್ ಅವರ ಚಿತ್ರ 'ಪುಷ್ಪ' ಸಮಾರಂಭದಲ್ಲಿ ಹೆಚ್ಚು ನಾಮನಿರ್ದೇಶನಗಳು ಮತ್ತು ಪ್ರಶಸ್ತಿಗಳನ್ನು ಗೆದ್ದುಕೊಂಡಿತು.

ಈ ಆವಾರ್ಢ್‌ ನೈಟ್‌ನಲ್ಲಿ  ಪೂಜಾ ಹೆಗ್ಡೆ ಆಫ್ ಶೋಲ್ಡರ್ ವೈಟ್ ಗೌನ್‌ನಲ್ಲಿ ಕಾಣಿಸಿಕೊಂಡರು. ಅವರು ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಗೆದ್ದಿದ್ದಾರೆ ಮಾತ್ರವಲ್ಲದೆ ಯೂತ್ ಐಕಾನ್ ಸೌತ್ (ಮಹಿಳೆ) ಪ್ರಶಸ್ತಿಯನ್ನು ಸಹ ಪಡೆದರು.

ಈ ಕಾರ್ಯಕ್ರಮಕ್ಕೆ ದಕ್ಷಿಣದ ಹಿರಿಯ ನಟ ಕಮಲ್ ಹಾಸನ್ ಕೂಡ ಆಗಮಿಸಿದ್ದರು. ಕಮಲ್ ಪ್ಯಾಂಟ್-ಟಿ-ಶರ್ಟ್ ಜೊತೆಗೆ ಸ್ಪೋರ್ಟ್ಸ್ ಜಾಕೆಟ್ ಧರಿಸಿದ್ದರು.  

'ಕೆಜಿಎಫ್' ಖ್ಯಾತಿಯ ರಾಕಿಂಗ್ ಸ್ಟಾರ್ ಯಶ್. ಕಾರ್ಯಕ್ರಮಕ್ಕೆ ಆಗಮಿಸಿದ ಕೂಡಲೇ ಅಭಿಮಾನಿಗಳು ಹಾಗೂ ಛಾಯಾಗ್ರಾಹಕರಲ್ಲಿ ಸಂಚಲನ ಉಂಟಾಯಿತು. ಯಶ್ ತಮ್ಮ ಪತ್ನಿ ರಾಧಿಕಾ ಪಂಡಿತ್ ಅವರೊಂದಿಗೆ ಇಲ್ಲಿಗೆ ಆಗಮಿಸಿದ್ದಾರೆ.

ಈವೆಂಟ್ ನಲ್ಲಿ ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಗೆಳತಿ ರಿಯಾ ಚಕ್ರವರ್ತಿ ಪ್ರವೇಶ ಹೆಚ್ಚು ಚರ್ಚೆಗೆ ಗ್ರಾಸವಾಗಿತ್ತು. ಅವರು  ಹೂವಿನ ಪ್ರಿಂಟ್‌ ಶೀರ್ ಸೀರೆಯಲ್ಲಿ ಇಲ್ಲಿಗೆ ತಲುಪಿದರು ಮತ್ತು ಅದರಲ್ಲಿ ಅವಳು ತುಂಬಾ ಸುಂದರವಾಗಿ ಕಾಣುತ್ತಿದ್ದರು.
 

ಕಾರ್ಯಕ್ರಮಕ್ಕೆ ಆಗಮಿಸಿದ್ದ ವಿಜಯ್ ದೇವರಕೊಂಡ ಅವರು ಯೂತ್ ಐಕಾನ್ ಸೌತ್ (ಪುರುಷ) ವಿಭಾಗದಲ್ಲಿ ಪ್ರಶಸ್ತಿ ಪಡೆದರು. ವಿಜಯ್ ಕಸೂತಿ ಕೆಲಸ ಮಾಡಿದ ಕಪ್ಪು ಸೂಟ್‌ಧಿರಿಸಿದ್ದರು.

click me!