Sharmila Tagore ಗೆ ಹುಟ್ಟುಹಬ್ಬದ ಶುಭ ಹಾರೈಸಿದ ಸೊಸೆ, ಮಗಳು ಹಾಗು ಮೊಮ್ಮಗಳು!

First Published Dec 10, 2021, 4:24 PM IST

ಸೈಫ್ ಅಲಿ ಖಾನ್ (Saif Ali Khan) ಅವರ ತಾಯಿ  ಮತ್ತು ಹಿರಿಯ ನಟಿ ಶರ್ಮಿಳಾ ಟ್ಯಾಗೋರ್ (Sharmila Tagore) 77 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಶರ್ಮಿಳಾ ಅವರ ಜನ್ಮದಿನದಂದು, ಮೊಮ್ಮಗಳು ಸಾರಾ ಅಲಿ ಖಾನ್ (Sara Ali Khan), ಮಗಳು ಸೋಹಾ ಅಲಿ ಖಾನ್ ( Soha Ali Khan ) ಮತ್ತು ಸೊಸೆ ಕರೀನಾ ಕಪೂರ್ ( Kareena Kapoor) ಸಾಮಾಜಿಕ ಜಾಲತಾಣಗಳ ಮೂಲಕ ವಿಶ್‌ ಮಾಡಿದ್ದಾರೆ.

ಸೈಫ್ ಅಲಿ ಖಾನ್ ಅವರ ತಾಯಿ ಮತ್ತು ಹಳೆಯ ನಟಿ ಶರ್ಮಿಳಾ ಟ್ಯಾಗೋರ್ ಅವರಿಗೆ 77 ವರ್ಷ ವಯಸ್ಸಾಗಿದೆ. ಅವರು 8 ಡಿಸೆಂಬರ್ 1944 ರಂದು ಕಾನ್ಪುರದಲ್ಲಿ ಜನಿಸಿದರು.

ತನ್ನ ಕಾಲದಲ್ಲಿ ಅನೇಕ ಬ್ಲಾಕ್‌ಬಸ್ಟರ್ ಚಿತ್ರಗಳಲ್ಲಿ ಕೆಲಸ ಮಾಡಿದ ಶರ್ಮಿಳಾ ಟ್ಯಾಗೋರ್ , ಭಾರತೀಯ ಕ್ರಿಕೆಟ್ ತಂಡದ ನಾಯಕರಾಗಿದ್ದ ಮನ್ಸೂರ್ ಅಲಿ ಖಾನ್ ಪಟೌಡಿ ಅವರನ್ನು ವಿವಾಹವಾದರು. 

Latest Videos


ತನ್ನ ಇನ್‌ಸ್ಟಾ ಸ್ಟೋರಿಯಲ್ಲಿ ಅತ್ತೆ  ಶರ್ಮಿಳಾ ಟ್ಯಾಗೋರ್ ಅವರ ಕಪ್ಪು ಬಿಳುಪು ಫೋಟೋವನ್ನು ಹಂಚಿಕೊಂಡ ಕರೀನಾ ಹೀಗೆ ಬರೆದಿದ್ದಾರೆ - ಜನ್ಮದಿನದ ಶುಭಾಶಯಗಳು ನನ್ನ ಸುಂದರ ಅತ್ತೆ.. ಐಕಾನಿಕ್.  

Sharmila Tagore Birthday

ಮೊಮ್ಮಗಳು ಸಾರಾ ಅಲಿ ಖಾನ್ ಅವರು ತಮ್ಮ ಅಜ್ಜಿ ಶರ್ಮಿಳಾ ಟ್ಯಾಗೋರ್ ಅವರನ್ನು ತಬ್ಬಿಕೊಂಡಿರುವ ಎರಡು ಫೋಟೋಗಳನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ. ಅಜ್ಜಿ ಮತ್ತು ಮೊಮ್ಮಗಳ ವಿಶೇಷ ಬಾಂಧವ್ಯ ಎರಡೂ ಫೋಟೋಗಳಲ್ಲಿ ಕಾಣುತ್ತಿದೆ.

Sharmila Tagore Birthday

'ಜನ್ಮದಿನದ ಶುಭಾಶಯಗಳು ಬಡಿ ಅಮ್ಮ  ನಾನು ನಿನ್ನನ್ನು  ತುಂಬಾ ಪ್ರೀತಿಸುತ್ತೇನೆ ಯಾವಾಗಲೂ ನನ್ನೊಂದಿಗೆ ಇರುವುದಕ್ಕೆ ಮತ್ತು ನನ್ನನ್ನು ಬೆಂಬಲಿಸಿದ್ದಕ್ಕಾಗಿ ತುಂಬಾ ಧನ್ಯವಾದಗಳು ಇನ್ಶಾ ಅಲ್ಲಾಹ್ ನಾನು ನಿಮಗೆ ಯಾವಾಗಲೂ ಹೆಮ್ಮೆ ಪಡುವಂತೆ ಮಾಡುತ್ತೇನೆ' ಎಂದು  ಸಾರಾ ಅವರ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಸಾರಾ ಅವರ ಮುಂಬರುವ ಚಿತ್ರ ಅತ್ರಾಂಗಿ ರೇ ಕಾರಣದಿಂದಾಗಿ ಈ ದಿನಗಳಲ್ಲಿ ಮುಖ್ಯಾಂಶಗಳಲ್ಲಿದ್ದಾರೆ ಈ ಸಿನಿಮಾ ಇದೇ ತಿಂಗಳು ಡಿಸೆಂಬರ್ 24 ರಂದು OTT ಯಲ್ಲಿ ಬಿಡುಗಡೆಯಾಗಲಿದೆ.

Sharmila Tagore Birthday

ಸೋಹಾ ಅಲಿ ಖಾನ್ ತಾಯಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಅವರು ತಮ್ಮ ತಾಯಿಯೊಂದಿಗೆ ಫೋಟೋವನ್ನು ಹಂಚಿಕೊಂಡಿದ್ದಾರೆ 'ಜನ್ಮದಿನದ ಶುಭಾಶಯಗಳು. ನೀವು ನಮ್ಮ ಮನೆಗೆ ಅಡಿಪಾಯ ಇದ್ದಂತೆ ಎಂದು ಬರೆದಿದ್ದಾರೆ. ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಅಕ್ಕ ಸಬಾ ಅಲಿ ಖಾನ್ ಹೃದಯದ ಎಮೋಜಿಗಳನ್ನು ಹಂಚಿಕೊಂಡಿದ್ದಾರೆ.

Sharmila Tagore Birthday

ಶರ್ಮಿಳಾ ಟ್ಯಾಗೋರ್ ಅವರು ತಮ್ಮ ವೃತ್ತಿಜೀವನದಲ್ಲಿ 2 ರಾಷ್ಟ್ರೀಯ ಪ್ರಶಸ್ತಿಗಳ ಜೊತೆಗೆ ಪದ್ಮಭೂಷಣ ಮತ್ತು ಜೀವಮಾನದ ಸಾಧನೆಯಂತಹ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವರು ಬಂಗಾಳಿ ಮತ್ತು ಹಿಂದಿ ಚಲನಚಿತ್ರಗಳಲ್ಲಿ ಕೆಲಸ ಮಾಡಿದರು. 

Sharmila Tagore Birthday

ಶರ್ಮಿಳಾ 60 ರಿಂದ 70-80 ರ ದಶಕದವರೆಗೆ ಚಲನಚಿತ್ರ ಪರದೆಯ ಮೇಲೆ ಪ್ರಾಬಲ್ಯ ಸಾಧಿಸಿದರು. ಆರಾಧನಾ ಅಮರ ಪ್ರೇಮ್‌, ಸಫರ್‌, ಕಾಶ್ಮೀರ್‌ ಕಿ ಕಲಿ, ಮೌಸಮ್‌, ತಲಾಶ್‌, ವಕ್ತ್‌, ಫಾರಾರ್‌, ಚುಪ್ಕೆ ಚುಪ್ಕೆ, ದಾಗ್,  ದಾಸ್ತಾನ್, ಆ ಗಲೇ ಲಗ್ ಜಾ, ಬೇಷರಮ್‌, ದೇಶ ಪ್ರೇಮಿ ಮುಂತಾದ ಹಿಟ್‌ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ.

click me!