Katrina Kaif Vicky Koushal Wedding ಸಂಭ್ರಮದ ಪೋಟೋ ಹಂಚಿದ ಮುದ್ದಾದ ಜೋಡಿ

Published : Dec 09, 2021, 09:46 PM ISTUpdated : Dec 09, 2021, 11:10 PM IST

ರಾಜಸ್ಥಾನ/ ಮುಂಬೈ(ಡಿ. 09)  ಸದ್ಯದ  ಬಾಲಿವುಡ್ ನ (Bollywood) ಹಾಟ್ ನ್ಯೂಸ್ ಅಂದರೆ ಅದು ವಿಕ್ಕಿ ಕೌಶಲ್ (Vicky Koushal) ಮತ್ತು ಕತ್ರಿನಾ (Katrina Kaif) ಮದುವೆ(Marriage) . ಜೋಡಿ ರಹಸ್ಯವಾಗಿ ಮದುವೆಯಾಗುತ್ತಿದ್ದಾರಂತೆ, ಮಾಧ್ಯಮಗಳಿಗೆ ಪ್ರವೇಶ ಇಲ್ವಂತೆ..  ಆಮಂತ್ರಿತರ ಪಟ್ಟಿಯನ್ನು ಕಡಿತ ಮಾಡಲಾಗಿದೆಯಂತೆ.. ಹೌದು ಎಲ್ಲದಕ್ಕೂ ಉತ್ತರ ಸಿಕ್ಕಿದೆ.

PREV
16
Katrina Kaif Vicky Koushal Wedding ಸಂಭ್ರಮದ ಪೋಟೋ ಹಂಚಿದ ಮುದ್ದಾದ  ಜೋಡಿ

ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಬಾಲಿವುಡ್ ನಟ-ನಟಿ ಹೊಸ ಜೋಡಿ  ಸೋಶಿಯಲ್ ಮೀಡಿಯಾ ಮೂಲಕ ಪೋಟೋಗಳನ್ನು ಹಂಚಿಕೊಂಡಿದ್ದಾರೆ.

26

ನಮ್ಮ ಹೃದಯದಲ್ಲಿ ಮನೆ ಮಾಡಿದ್ದ ಪ್ರೀತಿ ಇಂಥದ್ದೊಂದು ಶುಭ ಘಳಿಗೆಗೆ ವೇದಿಕೆ ಮಾಡಿಕೊಟ್ಟಿದೆ.  ನಮ್ಮಿಬ್ಬರ ಜೋಡಿಯ ಈ ಹೊಸ ಜೀವನಕ್ಕೆ ನಿಮ್ಮೆಲ್ಲರ ಹಾರೈಕೆ ಇರುತ್ತದೆ ಎಂದು ನಂಬಿದ್ದೇವೆ ಎಂದು ವಿಕ್ಕಿ ಕೌಶಲ್ ಬರೆದಿದ್ದಾರೆ.

ಜತೆಗೆ ನಟಿಸಲಿಲ್ಲ, ಆದರೆ ದಾಂಪತ್ಯದಲ್ಲಿ ಒಂದಾದ ಜೋಡಿ

36

ಕತ್ರಿನಾ ಸಹ  ಇದನ್ನೇ ಬರೆದುಕೊಂಡಿದ್ದಾರೆ. ಅಭಿಮಾನಿಗಳ ಆಶೀರ್ವಾದ ಸದಾ ಇರಲಿ ಎಂದು ಮನವಿ ಮಾಡಿಕೊಂಡಿದ್ದಾರೆ. ರಾಜಸ್ಥಾನದಲ್ಲಿ ಅದ್ದೂರಿ ಮದುವೆ ನಡೆದಿದೆ ಎನ್ನಲಾಗಿದೆ.

46

ಮದುವಣಗಿತ್ತಿ ಕತ್ರಿನಾ ಕೈಫ್ ಕೆಂಪು ಬಣ್ಣದ ಸಬ್ಯಸಾಚಿ ಡಿಸೈನರ್ ಲೆಹಂಗಾ ತೊಟ್ಟು ರಾಣಿಯಂತೆ ಕಂಗೊಳಿಸುತ್ತಿದ್ದರು. ಇನ್ನೂ ವರ ವಿಕ್ಕಿ ಕೌಶಲ್ ಐವೆರಿ ಹಾಗೂ ಗೋಲ್ಡ್ ಬಣ್ಣದ ಶೇರ್ವಾನಿ ತೊಟ್ಟು ರಾಜನಂತೆ ಮಿಂಚಿದ್ದರು.  

56

ಸೋಶಿಯಲ್ ಮೀಡಿಯಾದಲ್ಲಿ ಪೋಟೋ ಶೇರ್ ಮಾಡಿಕೊಂಡ ನಂತರ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ. ಹಿಂದು ಸಂಪ್ರದಾಯದಂತೆ ಮದುವೆ ನಡೆದಿದೆ ಎನ್ನಲಾಗಿದೆ.

66

ಸ್ಟಾರ್ ಜೋಡಿ ಮದುವೆಯನ್ನು ರಹಸ್ಯವಾಗಿಡಲು ಪ್ರಯತ್ನಿಸಿದರೂ ಮದುವೆ ವಿಚಾರ ಚರ್ಚೆಯಾಗುತ್ತಲೇ ಇತ್ತು. ಮದುವೆಯ ಫೋಟೋಳನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದರು. ಈಗ ಜೋಡಿಯೇ ಪೋಟೋ ಶೇರ್ ಮಾಡಿಕೊಂಡು ಆಶೀರ್ವಾದ ಕೇಳಿದ್ದಾರೆ.

Read more Photos on
click me!

Recommended Stories