ಬಾಲಿವುಡ್‌ಗೂ ಪ್ರವೇಶಿಸಿದ ಹಿಜಾಬ್ ವಿವಾದ; Kangana ಹೇಳಿಕೆಗೆ ಪ್ರತಿಕ್ರಿಯಿಸಿದ ಶಬಾನಾ ಅಜ್ಮಿ, ಸೋನಮ್ ಕಪೂರ್!

First Published Feb 12, 2022, 3:12 PM IST

ಮೊದಲಿಗೆ ಕರ್ನಾಟಕದಿಂದ ಹುಟ್ಟಿಕೊಂಡ ಹಿಜಾಬ್ ವಿವಾದ  (Hijab controversy) ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಇದೀಗ ಬಾಲಿವುಡ್ ಕೂಡ ಈ ವಿವಾದಕ್ಕೆ ಸಿಲುಕಿದೆ. ಪ್ರತಿಯೊಂದು ವಿಚಾರದಲ್ಲೂ ಮುಕ್ತ ಅಭಿಪ್ರಾಯ ಹೊಂದಿರುವ ಕಂಗನಾ ರಣಾವತ್ (Kangana Ranaut) , ಈ ವಿಷಯದ ಬಗ್ಗೆಯೂ ಮಾತನಾಡಲು ಹಿಂಜರಿಯಲಿಲ್ಲ. ಅದೇ ಸಮಯದಲ್ಲಿ, ಶಬಾನಾ ಅಜ್ಮಿ (Shabana Azmi) ಕೂಡ ಕಂಗನಾ ಅವರ ಕಾಮೆಂಟ್ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಫೋಟೋವನ್ನು ಹಂಚಿಕೊಂಡ ಕಂಗನಾ ಕೆಲವು ವಿಷಯಗಳನ್ನು ಬರೆದಿದ್ದಾರೆ. ಲೇಖಕ ಆನಂದ್ ರಂಗನಾಥನ್ ಅವರ ಪೋಸ್ಟ್‌ನ ಸ್ಕ್ರೀನ್‌ಶಾಟ್ ಅನ್ನು ನಟಿ  ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. 

ಇದರಲ್ಲಿ ಎರಡು ಫೋಟೋಗಳಿದ್ದವು. ಮೊದಲ ಫೋಟೋವು 1973 ರಲ್ಲಿ ಇರಾನಿನ ಮಹಿಳೆಯರಾಗಿದ್ದು, ಅವರು ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು ಎರಡನೆಯದು ಈಗ ಮಹಿಳೆಯರು ಬುರ್ಖಾ ಧರಿಸಿದ್ದಾರೆ. ಈ ಫೋಟೋದ ಜೊತೆಗೆ, 'ನೀವು ಧೈರ್ಯವನ್ನು ತೋರಿಸಲು ಬಯಸಿದರೆ, ಅಫ್ಘಾನಿಸ್ತಾನದಲ್ಲಿ ಬುರ್ಖಾವನ್ನು ಧರಿಸದೆ ಅದನ್ನು ಪ್ರದರ್ಶಿಸಿ... ಪಂಜರದಿಂದ ನಿಮ್ಮನ್ನು ಮುಕ್ತಗೊಳಿಸಲು ಕಲಿಯಿರಿ' ಎಂದು ಕಂಗನಾ ಬರೆದಿದ್ದಾರೆ.

ಕಂಗನಾ ಅವರ ಈ ಪೋಸ್ಟ್‌ಗೆ ಶಬಾನಾ ಅಜ್ಮಿ ಪ್ರತಿಕ್ರಿಯಿಸುವುದ್ಕಕೆ  ತಡ ಮಾಡಲಿಲ್ಲ. ಕಂಗನಾ ಅವರ ಪೋಸ್ಟ್‌ನ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡ ಅವರು, 'ನಾನು ತಪ್ಪಾಗಿದ್ದರೆ ಹೇಳಿ.. ಆದರೆ ನನಗೆ ತಿಳಿದಿರುವಂತೆ ಆಫ್ಘಾನಿಸ್ತಾನವು ಧಾರ್ಮಿಕ ರಾಜ್ಯವಾಗಿದೆ ಮತ್ತು ಭಾರತ ಜಾತ್ಯತೀತ ಪ್ರಜಾಪ್ರಭುತ್ವ ಗಣರಾಜ್ಯವಾಗಿದೆ' ಎಂದು ಬರೆದಿದ್ದಾರೆ.

ಅದೇ ಸಮಯದಲ್ಲಿ, ಬಾಲಿವುಡ್ ನಟಿ ಸೋನಂ ಕಪೂರ್ ಕೂಡ ಹಿಜಾಬ್ ವಿವಾದದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಫೋಟೋವನ್ನು ಹಂಚಿಕೊಂಡ ನಟಿ, 'ಪೇಟವನ್ನು ಆಯ್ಕೆ ಮಾಡಬಹುದಾದರೆ ಹಿಜಾಬ್ ಏಕೆ ಮಾಡಬಾರದು' ಎಂದು ಕೇಳಿದರು.

ಈ ಹಿಂದೆ ಜಾವೇದ್ ಅಖ್ತರ್ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಟ್ವಿಟ್ಟರ್‌ನಲ್ಲಿ ಟ್ವೀಟ್ ಮಾಡಿದ್ದರು 'ನಾನು ಎಂದಿಗೂ ಹಿಜಾಬ್ ಅಥವಾ ಬುರ್ಖಾವನ್ನು ಬೆಂಬಲಿಸಿಲ್ಲ. ನಾನು ಈಗಲೂ ಅದಕ್ಕೆ ಬದ್ಧನಾಗಿದ್ದೇನೆ, ಆದರೆ ಹುಡುಗಿಯರನ್ನು ಬೆದರಿಸಲು ವಿಫಲವಾದ ಈ ಗುಂಪುಗಳು ಮತ್ತು ಗೂಂಡಾಗಳು, ಅವರ ಪ್ರಕಾರ ಇದೇ ಪೌರುಷ. ಇದು ವಿಷಾದನೀಯ' ಎಂಧು ಬರೆದಿದ್ದಾರೆ.

ಕರ್ನಾಟಕದಿಂದ ಹುಟ್ಟಿಕೊಂಡ ಹಿಜಾಬ್ ವಿವಾದ ದೇಶಾದ್ಯಂತ ವ್ಯಾಪಿಸಿದೆ. ಕರ್ನಾಟಕದಲ್ಲಿ ಹಲವು ದಿನಗಳಿಂದ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಬಗ್ಗೆ ಸಾಕಷ್ಟು ಗಲಾಟೆಗಳು ನಡೆಯುತ್ತಿವೆ.ಇತ್ತೀಚೆಗಷ್ಟೇ ಕರ್ನಾಟಕದ ಕಾಲೇಜೊಂದರ ವೀಡಿಯೋ ಬಹಿರಂಗವಾಗಿದ್ದು, ಅದರಲ್ಲಿ ಹುಡುಗಿಯೊಬ್ಬಳು ಬುರ್ಖಾ ಧರಿಸಿ ಕಾಲೇಜಿಗೆ ಬರುತ್ತಿರುವುದು ಕಂಡು ಬಂದಿದೆ. ಈ ಹುಡುಗಿಯನ್ನು ನೋಡಿದ ಅನೇಕ ವಿದ್ಯಾರ್ಥಿಗಳು ಅವಳ ಹಿಂದೆ ಹೋಗಿ ಜೈ ಶ್ರೀ ರಾಮ್ ಎಂದು ಘೋಷಣೆ ಕೂಗಿದರು.

click me!