ರಣಬೀರ್ ಕಪೂರ್ ವಾಣಿ ಕಪೂರ್ 'Shamshera' ಜುಲೈ 22 ರಂದು ಬಿಡುಗಡೆ

First Published | Feb 12, 2022, 11:00 AM IST

ಯಶ್ ರಾಜ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ತಯಾರಾದ ಅಕ್ಷಯ್ ಕುಮಾರ್ (AKshay Kumar) ಮತ್ತು ಮಾನುಷಿ ಛಿಲ್ಲರ್  (Manushi Chhillar) ಅಭಿನಯದ 'ಪೃಥ್ವಿರಾಜ್' (Prithviraj) ಚಿತ್ರದ ಬಿಡುಗಡೆ ದಿನಾಂಕವನ್ನು ಗುರುವಾರ ಪ್ರಕಟಿಸಲಾಗಿದೆ. ಅದೇ ಸಮಯದಲ್ಲಿ, ಯಶ್ ರಾಜ್ ಅವರ ಚಿತ್ರ ಶಂಶೇರಾ (Shamshera) ಬಿಡುಗಡೆಯನ್ನು ಶುಕ್ರವಾರ ಘೋಷಿಸಲಾಯಿತು. ಚಿತ್ರದ ಟೀಸರ್ ಅನ್ನು ಯಶ್ ರಾಜ್ ಫಿಲ್ಮ್ಸ್ ಟ್ವಿಟರ್ ಹ್ಯಾಂಡಲ್‌ನಲ್ಲಿ ಬಿಡುಗಡೆ ಮಾಡಲಾಗಿದ್ದು, ಈ ವರ್ಷ ಜುಲೈ 22 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ. 

ಶಂಶೇರಾ  ಸಿನಿಮಾದಲ್ಲಿ  ರಣಬೀರ್ ಕಪೂರ್ (Ranbir Kapoor), ವಾಣಿ ಕಪೂರ್ (Vaani Kapoor) ಮತ್ತು ಸಂಜಯ್ ದತ್ (Sanjay Dutt)  ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಹೊರ ಬಂದಿರುವ  ಟೀಸರ್‌ನಲ್ಲಿ ಮೊದಲು  ಕಾಣಿಸಿಕೊಳ್ಳುವ ಸಂಜಯ್ ದತ್  'ಗುಲಾಮಗಿರಿ, ಇತರರಿಗೆ ಅಥವಾ ನಮ್ಮವರಿಗೆ ಯಾರಿಗೂ ಒಳ್ಳೆಯದಲ್ಲ ಎಂದು ಹೇಳುವವರ ಕಥೆ ಇದಾಗಿದೆ'  ಎಂದು ಹೇಳುತ್ತಾರೆ.

'ಇದು ತಂದೆಯ ಪರಂಪರೆಯಲ್ಲಿ ಸ್ವಾತಂತ್ರ್ಯದ ಕನಸು ಕಂಡವನ ಕಥೆ' ಎಂದು  ವಾಣಿ ಹೇಳುತ್ತಾರೆ. ಇದರ ನಂತರ ರಣಬೀರ್ ಕತ್ತಲೆಯಲ್ಲಿ ಕುಳಿತು 'ಆದರೆ ಯಾರೂ ನಿಮಗೆ ಸ್ವಾತಂತ್ರ್ಯವನ್ನು ನೀಡುವುದಿಲ್ಲ, ಸ್ವಾತಂತ್ರ್ಯವನ್ನು ಕಸಿದು ಕೊಳ್ಳಲಾಗುತ್ತದೆ. ಕರ್ಮದಿಂದ ಡಕಾಯಿತ, ಧರ್ಮದಿಂದ ಮುಕ್ತ' ಎಂದು ಹೇಳುತ್ತಾರೆ.
 

Tap to resize

ನಿರ್ದೇಶಕ ಕರಣ್ ಮಲ್ಹೋತ್ರಾ ಅವರ ಈ ಸಿನಿಮಾವು 3 ಭಾಷೆಗಳಲ್ಲಿ ಅಂದರೆ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರವು ಸ್ವಾತಂತ್ರ್ಯ ಪೂರ್ವದ ಡಕಾಯಿತರ ಕಥೆಯಾಗಿದ್ದು, ಚಿತ್ರದಲ್ಲಿ ರಣಬೀರ್ ಕಪೂರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರು ಚಿತ್ರದಲ್ಲಿ ಡಕಾಯಿತ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಮೊದಲು ಈ ಚಿತ್ರವನ್ನು ಈ ವರ್ಷ ಮಾರ್ಚ್ 18 ರಂದು ಬಿಡುಗಡೆ ಮಾಡಲು ಯೋಜಿಸಲಾಗಿತ್ತು ಆದರೆ ಕೊರೋನಾ ಕಾರಣ ಅದನ್ನು ಮುಂದೂಡಲಾಯಿತು. 

ರಣಬೀರ್ ಶೀಘ್ರದಲ್ಲೇ ಅಯಾನ್ ಮುಖರ್ಜಿ ಅವರ 'ಬ್ರಹ್ಮಾಸ್ತ್ರ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರಲ್ಲದೆ, ಅಮಿತಾಬ್ ಬಚ್ಚನ್, ಡಿಂಪಲ್ ಕಪಾಡಿಯಾ, ನಾಗಾರ್ಜುನ ಅಕ್ಕಿನೇನಿ ಮತ್ತು ಮೌನಿ ರಾಯ್ ಕೂಡ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಇದಲ್ಲದೇ ಅವರು ಅನಿಮಲ್ ಚಿತ್ರಗಳಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.

ಯಶ್ ರಾಜ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ತಯಾರಾದ ಪೃಥ್ವಿರಾಜ್ ಜೂನ್ 10 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರ ಜನವರಿಯಲ್ಲಿಯೇ ಬಿಡುಗಡೆಯಾಗಬೇಕಿತ್ತು ಆದರೆ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅದನ್ನು ಮುಂದೂಡಲಾಯಿತು. 

ಚಿತ್ರದಲ್ಲಿ ಪೃಥ್ವಿರಾಜ್ ಪಾತ್ರದಲ್ಲಿ ಅಕ್ಷಯ್ ಕುಮಾರ್ ಕಾಣಿಸಿಕೊಳ್ಳಲಿದ್ದಾರೆ. ಅದೇ ಸಮಯದಲ್ಲಿ ಸಂಜಯ್ ದತ್ ಕಾಕಾ ಕಾನ್ ಪಾತ್ರವನ್ನು ನಿರ್ವಹಿಸಲಿದ್ದಾರೆ ಮತ್ತು ಸೋನು ಸೂದ್ ಮಹಾಕವಿ ಚಾಂದಬಾರ್ದಾಯಿ ಪಾತ್ರವನ್ನು ನಿರ್ವಹಿಸಲಿದ್ದಾರೆ. ಮಾಜಿ ವಿಶ್ವ ಸುಂದರಿ ಮಾನುಷಿ ಛಿಲ್ಲರ್ ಈ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಸಂಯೋಗಿತಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Latest Videos

click me!