ಮಹಾರಾಷ್ಟ್ರದ ಹಿಂದೂ ಸಂಪ್ರದಾಯದಂತೆ ಆಮೀರ್‌ ಖಾನ್‌ ಪುತ್ರಿ ಇರಾ ಖಾನ್‌ ವಿವಾಹ ಪೂರ್ವ ಶಾಸ್ತ್ರ ಶುರು!

First Published | Nov 8, 2023, 4:57 PM IST

ಆಮೀರ್ ಖಾನ್ (Aamir Khan) ಅವರ ಮುದ್ದು ಮಗಳು ಇರಾ ಖಾನ್ (Ira Khan)  ಅವರು  ನೂಪುರ್ ಶಿಖರೆ (Nupur Shikhare) ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ, ಈಗ  ಅವರ ಮದುವೆಯ ಪೂರ್ವ ಆಚರೆಣೆಗಳು ಶುರುವಾಗಿದ್ದು, ಈ ಸಮಯದ ಕೆಲವು ಫೋಟೋಗಳನ್ನು ಇರಾ ಹಂಚಿಕೊಂಡಿದ್ದಾರೆ.

ಇರಾ ಖಾನ್ ಮತ್ತು ನೂಪುರ್ ಶಿಖರೆ ಜನವರಿ 2024 ರಲ್ಲಿ ಮದುವೆಯಾಗಲು ಸಿದ್ಧರಾಗಿದ್ದಾರೆ. ಅವರ ಪೂರ್ವ-ವಿವಾಹದ ಹಬ್ಬಗಳು ಈಗಾಗಲೇ ಪ್ರಾರಂಭವಾಗಿವೆ ಮತ್ತು ಸಮಾರಂಭದ ಫೋಟೋಗಳು ಹೊರಬಂದಿವೆ.

ಆಮೀರ್ ಖಾನ್ ಅವರ ಮೊದಲ ಪತ್ನಿ ರೀನಾ ದತ್ತಾ ಅವರ ಪುತ್ರಿ ಇರಾ ಖಾನ್ ಅವರು ತಮ್ಮ ನಿಶ್ಚಿತ ವರ ನೂಪುರ್ ಶಿಖರೆ ಅವರನ್ನು ಜನವರಿ 3, 2024 ರಂದು ಮದುವೆಯಾಗಲಿದ್ದಾರೆ. ಕಳೆದ ನವೆಂಬರ್‌ನಲ್ಲಿ ಈ ಜೋಡಿ ತಮ್ಮ ನಿಶ್ಚಿತಾರ್ಥವನ್ನು ಘೋಷಿಸಿದರು

Tap to resize

ನವೆಂಬರ್ 6 ರಂದು ಇರಾ ಖಾನ್ ಮತ್ತು ನೂಪುರ್ ಶಿಖರೆ ಅವರ ಪೂರ್ವ ವಿವಾಹ ಶಾಸ್ತ್ರಗಳು ಮಹಾರಾಷ್ಟ್ರದ ಸಾಂಪ್ರದಾಯಿಕ ಕೆಲ್ವನ್ ವಿಧಿಯೊಂದಿಗೆ ಪ್ರಾರಂಭವಾಯಿತು.
 
 

ಫೋಟೋಗಳಲ್ಲಿ, ಇರಾ ಮತ್ತು ನೂಪುರ್ ಪರಸ್ಪರ  ಹಗ್‌ ಮಾಡುವುದನ್ನು ಕಾಣಬಹುದು. ಇನ್ನೊಂದು ಫೋಟೋದಲ್ಲಿ ಇರಾ ನೂಪುರ್ ಅವರ ಮಣಿಕಟ್ಟಿಗೆ ಹೂವಿನ ಪಟ್ಟಿಯನ್ನು ಕಟ್ಟುತ್ತಿರುವುದನ್ನು ಕಂಡುಬರುತ್ತದೆ. ಇದರ ಜೊತೆ ಇರಾ ಖಾನ್‌ ಊಟದ ಸಮಯದ ವೀಡಿಯೊವೊಂದನ್ನು ಸಹ ಹಂಚಿಕೊಂಡಿದ್ದಾರೆ. ಇದರಲ್ಲಿ ಇರಾ ಮರಾಠಿ ಭಾಷೆಯಲ್ಲಿ ಪದ್ಯ ಹೇಳಿದ್ದನ್ನು ಗಮನಿಸಬಹುದು.

ಈ ಸಂದರ್ಭಕ್ಕಾಗಿ, ಸ್ಟಾರ್ ಕಿಡ್ ಆಮೀರ್‌ ಪುತ್ರಿ ಕೆಂಪು ಸೀರೆಯನ್ನು ಧರಿಸಿದ್ದರು ಮತ್ತು ಹೂವಿನ ಆಭರಣದೊಂದಿಗೆ ತನ್ನ ನೋಟವನ್ನು ಪೂರ್ಣಗೊಳಿಸಿದರು. ಮತ್ತೊಂದೆಡೆ, ನೂಪುರ್ ಹಳದಿ ಕುರ್ತಾ ಮತ್ತು ಬಿಳಿ ಪ್ಯಾಂಟ್ ಧರಿಸಿದ್ದರು. 

ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋಗಳನ್ನು  ಹಂಚಿಕೊಂಡು ಇರಾ 'ಕೆಲ್ವನ್ 2. ಉಖಾನಾ 2! ನಾನು ಅವನನ್ನು ತುಂಬಾ ಪ್ರೀತಿಸುತ್ತೇನೆ' ಎಂದು ಕ್ಯಾಪ್ಷನ್‌ನಲ್ಲಿ ಬರೆದಿದ್ದಾರೆ.

ಮಹಾರಾಷ್ಟ್ರದ ವಿವಾಹ ಸಂಪ್ರದಾಯಗಳ ಅತ್ಯಗತ್ಯ ಭಾಗವಾದ ಕೆಲ್ವನ್ ಸಮಾರಂಭ ದಂಪತಿಗಳು ಪರಸ್ಪರರ ಕುಟುಂಬಗಳಲ್ಲಿ ಒಪ್ಪಿಕೊಳ್ಳುವುದನ್ನು ಸಂಕೇತಿಸುತ್ತದೆ ಮತ್ತು ಅವರ ಪ್ರಯಾಣದ ಆರಂಭವನ್ನು ಗುರುತಿಸುತ್ತದೆ.

Latest Videos

click me!