ಗ್ಲೆನ್ ಮ್ಯಾಕ್ಸ್‌ವೆಲ್‌ ಧ್ವಿಶಕತ ನಂತರವೂ ಆಫ್ಗಾನ್‌ಗೆ ಚಿಯರ್ಸ್‌ ಎಂದ ಮಿಸ್ಟರಿ ಬ್ಯೂಟಿ ವಾಜ್ಮಾ ಅಯೂಬಿ!

Published : Nov 08, 2023, 04:17 PM ISTUpdated : Nov 09, 2023, 11:54 AM IST

ಮುಂಬೈ (ನ.08): ಏಕದಿನ ಕ್ರಿಕೆಟ್‌ ವಿಶ್ವಕಪ್‌ 2023ರ ಆಸ್ಟ್ರೇಲಿಯಾ ಮತ್ತು ಆಫ್ಘಾನಿಸ್ತಾನ ಪಂದ್ಯದಲ್ಲಿ 91 ರನ್‌ಗಳಿಗೆ 7 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ಆಸ್ಟ್ರೇಲಿಯಾ ಸೋಲಿನ ಭೀತಿಯಲ್ಲಿತ್ತು. ಆಗ ಆಫ್ಘಾನ್‌ ತಂಡಕ್ಕೆ ವಿಡಿಯೋ ಮೂಲಕ ಇನ್ನು ಕೇವಲ 3 ವಿಕೆಟ್‌ ಬಾಕಿಯಿದೆ ಚಿಯರ್ಸ್‌ ಬಾಯ್ಸ್‌ ಎಂದು ವಿಶ್‌ ಮಾಡಿದ ಸುಂದರಿ ವಾಜ್ಮಾ ಅಯೂಬಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.

PREV
111
ಗ್ಲೆನ್ ಮ್ಯಾಕ್ಸ್‌ವೆಲ್‌ ಧ್ವಿಶಕತ ನಂತರವೂ ಆಫ್ಗಾನ್‌ಗೆ ಚಿಯರ್ಸ್‌ ಎಂದ ಮಿಸ್ಟರಿ ಬ್ಯೂಟಿ ವಾಜ್ಮಾ ಅಯೂಬಿ!

ಭಾರತದಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ 2023 ಪಂದ್ಯಾವಳಿಯಲ್ಲಿ ಈಗಾಗಲೇ ಭಾರತ ಮತ್ತು ದಕ್ಷಿಣ ಆಫ್ರಿಕಾ ಸೆಮೀಸ್‌ ಹಂತವನ್ನು ತಲುಪಿವೆ. ತಮ್ಮ ತಂಡಕ್ಕೆ ಬೆಂಬಲಿಸಲು ಆಗಮಿಸಿದ ಆಫ್ಘಾನಿ ಬೆಡಗಿ ವಾಜ್ಮಾ ಅಯೂಬಿ ಸೌಂದರ್ಯಕ್ಕೆ ಕ್ರಿಕೆಟ್‌ ಪ್ರೇಮಿಗಳು ಫಿದಾ ಆಗಿದ್ದಾರೆ. 

211

ವಿಶ್ವಕಪ್‌ ಪಂದ್ಯಾವಳಿಯಲ್ಲಿ ನಾಲ್ಕು ಪಂದ್ಯಗಳಲ್ಲಿ ಗೆದ್ದು 8 ಅಂಕಗಳೊಂದಿಗೆ ಸೆಮೀಸ್‌ಗೇರುವ ತವಕದಲ್ಲಿರುವ ಅಫ್ಘಾನಿಸ್ತಾನ ತಂಡಕ್ಕೆ ಸಪೋರ್ಟ್‌ ಮಾಡಲು ವಾಜ್ಮಾ ಅಯೂಬಿ ಭಾರತದಲ್ಲಿಯೇ ಉಳಿದುಕೊಂಡಿದ್ದಾರೆ.

311

ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಆಫ್ಘಾನ್‌ 291 ರನ್‌ ಟಾರ್ಗೆಟ್‌ ನೀಡಿತ್ತು. ಇನ್ನೇನು 91 ರನ್‌ಗೆ ಪ್ರಮುಖ ಬ್ಯಾಟ್ಸ್‌ಮಾನ್‌ಗಳು ಸೇರಿದಂತೆ 7 ವಿಕೆಟ್‌ಗಳನ್ನು ಕಳೆದುಕೊಂಡಿದ್ದ ಆಷ್ಟ್ರೇಲಿಯಾ ಸೋಲಿನ ಭೀತಿಯಲ್ಲಿತ್ತು.

411

ಆಫ್ಘನ್‌ ಬೌಲರ್‌ಗಳ ದಾಳಿಗೆ ತತ್ತರಿಸಿದ್ದ ಆಸ್ಟ್ರೇಲಿಯಾಗೆ ಗ್ಲೆನ್‌ ಮ್ಯಾಕ್ಸ್‌ವೆಲ್‌ ಆಸರೆಯಾಗಿ ನಿಂತು 100 ರನ್‌ ಸಿಡಿಸಿದ್ದರು. ಆಗ ಆಫ್ಘನ್‌ ಬೌಲರ್‌ಗಳಿಗೆ ಮಿಸ್ಟರಿ ಬ್ಯೂಟಿ ವಾಜ್ಮಾ ಆಯೂಬಿ ಅವರು ಓನ್ಲಿ 3 ವಿಕೆಟ್ಸ್‌ ಮೋರ್‌ ಚಿಯರ್ಸ್ ಬಾಯ್ಸ್‌ ಎಂದು ಚಿಯರ್‌ ಮಾಡಿದ್ದಾರೆ.

ವಿಶ್‌ ವಿಡಿಯೋ ಲಿಂಕ್: https://twitter.com/WazhmaAyoubi/status/1721911802433511871

511

ಆದರೆ, ಗ್ಲೆನ್ ಮ್ಯಾಕ್ಸ್‌ವೆಲ್‌ ಅವರು ನೆಲಕಚ್ಚಿ ನಿಂತಿದ್ದು ಯಾವುದೇ ಬೌಲಿಂಗ್‌ಗೂ ಜಗ್ಗದೇ ತಾನು 200 ರನ್‌ ಪೇರಿಸಿ ಆಸ್ಟ್ರೇಲಿಯಾ ತಂಡದ ಗೆಲುವಿಗೂ ಕಾರಣದಾದರು. ಈ ಮೂಲಕ ಆಸ್ಟ್ರೇಲಿಯಾ ಸೆಮೀಸ್‌ಗೆ ತಲುಪಿತು.

611

ಮಿಸ್ಟರಿ ಬ್ಯೂಟಿ ವಾಜ್ಮಾ ಅಯೂಬಿ ಅವರು ಆಫ್ಘನ್‌ ಮೂಲದವರಾಗಿದ್ದರೂ ಇಂಡಿಯಾ ತಂಡದ ಮೇಲೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ. ಇನ್ನು ಆಫ್ಘನ್‌ ಹೊರತುಪಡಿಸಿದರೆ ಭಾರತ ತಂಡವೇ ಅವರ ಫೇವರೇಟ್‌ ಆಗಿದೆ. 

711

ವಿಶ್ವದ ಅನೇಕ ಸುಂದರ ರೂಪದರ್ಶಿಯರಿಗೆ ಸವಾಲೊಡ್ಡುವ ಸೌಂದರ್ಯವನ್ನು ಹೊಂದಿರುವ ರೂಪದರ್ಶಿ ವಾಜ್ಮಾ ಅಯೂಬಿ ಅವರಿಗೆ ಭಾರತೀಯ ಚಿತ್ರರಂಗದ ಬಾಲಿವುಡ್‌ ನಟಿಯಾಗಬೇಕು ಎಂಬ ಆಸೆಯಿದೆಯಂತೆ. 

811

ಭಾರತೀಯ ಚಿತ್ರರಂಗದ ಬಾಲಿವುಡ್‌ ನಟಿಯಾಗಬೇಕು ಎಂಬ ಆಸೆಯಿದೆಯಂತೆ. ಹೀಗಾಗಿ, ಭಾರತಕ್ಕೆ ಕ್ರಿಕೆಟ್‌ ಪಂದ್ಯಾವಳಿ ವೀಕ್ಷಣೆಗೆ ಬಂದಿರುವ ವಾಜ್ಮಾ ಅಯೂಬಿ ಅವರು ಬಾಲಿವುಡ್‌ ನಟರೊಂದಿಗೆ ಫೋಸ್‌ ಕೊಟ್ಟಿದ್ದಾರೆ.

 

911

ವಾಜ್ಮಾ ಅಯೂಬಿ ಅವರು ರಿಯಲ್‌ ಎಸ್ಟೇಟ್‌ ಉದ್ಯಮಿ, ರೂಪದರ್ಶಿ ಮತ್ತು ಕ್ರಿಕೆಟ್ ಅಭಿಮಾನಿಯೂ ಆಗಿದ್ದಾರೆ. ಇನ್ನು ಅಫ್ಘಾನಿಸ್ತಾನ ಬಿಟ್ಟರೆ ತಮ್ಮ ನೆಚ್ಚಿನ ತಂಡ ಅದು ಟೀಮ್ ಇಂಡಿಯಾ ಎಂದು ಸ್ವತಃ ಅವರೇ ಹೇಳಿದ್ದಾರೆ. 

1011

ರೂಪದರ್ಶಿ ವಾಜ್ಮಾ ಅವರು  ಇನ್‌ಸ್ಟಾಗ್ರಾಮ್ ಖಾತೆಗೆ 5.76 ಲಕ್ಷ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಇನ್ನು ಕ್ರಿಕೆಟ್‌ ಅಭಿಮಾನಿಯಾಗಿರುವ ವಾಜ್ಮಾ ಇತ್ತೀಚೆಗೆ ನಡೆದ ಐಪಿಲ್‌ ಪಂದ್ಯಾವಳಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಪಂದ್ಯ ವೀಕ್ಷಣೆಗೂ ಬಂದಿದ್ದರು.
 

1111

ಸಾಮಾಜಿಕ ಜಾಲತಾಣದಲ್ಲಿ ಫುಲ್‌ ಆಕ್ಟಿವ್‌ ಆಗಿರುವ ವಾಜ್ಮಾ ಅಯೂಬಿ ಅವರು ಭಾರತವನ್ನು ತನ್ನ ಎರಡನೇ ಮನೆ ಎಂದು ಹೇಳಿಕೊಂಡಿದ್ದಾರೆ. ಭಾರತದ ಜೆರ್ಸಿಯಲ್ಲಿ ತೆಗೆಸಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗಿವೆ.

Read more Photos on
click me!

Recommended Stories