Celebrties spotted:ಮೇಕಪ್‌ ಇಲ್ಲದೆ ಕಾಣಿಸಿಕೊಂಡ ಬೇಬೋ!

First Published | Nov 21, 2021, 3:29 PM IST

ಶನಿವಾರ ಬೆಳಗ್ಗೆ ಮುಂಬೈನ(Mumbai) ಬಾಂದ್ರಾ ಪ್ರದೇಶದಲ್ಲಿ ಕರೀನಾ ಕಪೂರ್  (Kareena Kapoor)ಕಾಣಿಸಿಕೊಂಡಿದ್ದಾರೆ. ಈ ಸಮಯದಲ್ಲಿ, ಕರೀನಾ ಕಪೂರ್ ನೀಲಿ ಬಣ್ಣದ ಸಡಿಲವಾದ ಜೀನ್ಸ್ ಮತ್ತು ಬೂದು ಬಣ್ಣದ ಟೀ ಶರ್ಟ್‌ನಲ್ಲಿ ಕಾಣಿಸಿಕೊಂಡರು. ಈ ಸಮಯದಲ್ಲಿ, ಕರೀನಾ ಕಪೂರ್ ವಿಥೌಟ್‌ ಮೇಕಪ್ ಲುಕ್‌ನಲ್ಲಿ ಕಾಣಿಸಿಕೊಂಡರು.  ಈ ಲುಕ್‌ನಲ್ಲಿ ಕರೀನಾ ಮುಖ ಸ್ವಲ್ಪ ವಿಚಿತ್ರವಾಗಿ ಕಾಣುತ್ತಿದ್ದರು. ಕರೀನಾ ಕಪೂರ್ ಶೀಘ್ರದಲ್ಲೇ 'ಲಾಲ್ ಸಿಂಗ್ ಚಡ್ಡಾ' ' (Lal Singh Chaddha) ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ಆಮೀರ್ ಖಾನ್ (Aamir Khan) ಅವರೊಂದಿಗೆ ಕೆಲಸ ಮಾಡುತ್ತಿದ್ದಾರೆ. 

ಶನಿವಾರ ಬೆಳಗ್ಗೆ ಮುಂಬೈನ ಬಾಂದ್ರಾ ಪ್ರದೇಶದಲ್ಲಿ ಕರೀನಾ ಕಪೂರ್ (Kareena Kapoor) ಕಾಣಿಸಿಕೊಂಡಿದ್ದಾರೆ. ಕರೀನಾ ಕಪೂರ್ ತೆರೆದ ಕೂದಲಿನ ಜೊತೆಗೆ ಸನ್‌ಗ್ಲಾಸ್‌ ಧರಿಸಿದ್ದರು.ಈ ವೇಳೆ ಕರೀನಾ ಮುಖದಲ್ಲಿ ಸ್ವಲ್ಪಊತವಿತ್ತು. ವಿಥೌಟ್‌ ಮೇಕಪ್ ಲುಕ್‌ನಲ್ಲಿ  ಕರೀನಾರ ಮುಖ ಸ್ವಲ್ಪ ವಿಚಿತ್ರವಾಗಿ ಕಾಣುತ್ತಿದ್ದರು.  

ಇದಕ್ಕೂ ಮೊದಲು, ಕರೀನಾ ಕಪೂರ್ ಶುಕ್ರವಾರ ರಾತ್ರಿ ಪತಿ ಸೈಫ್ ಅಲಿ ಖಾನ್ (Saif Ali Khan)ಮತ್ತು ಅವರ ಇಬ್ಬರು ಮಕ್ಕಳಾದ ತೈಮೂರ್ (Taimur) ಮತ್ತು ಜೆಹ್ (Jeh) ಅವರೊಂದಿಗೆ ಪಟೌಡಿ ಅರಮನೆಯಲ್ಲಿ ಕೆಲವು ದಿನಗಳ ಕಾಲ ವಿಶ್ರಾಂತಿ ಪಡೆದ  ನಂತರ ಮುಂಬೈಗೆ ಮರಳಿದರು. 

Tap to resize

ಇತ್ತೀಚೆಗೆ ಕರೀನಾ-ಸೈಫ್ ತಮ್ಮ ಐಷಾರಾಮಿ ಅರಮನೆ ಪಟೌಡಿ ಪ್ಯಾಲೇಸ್‌ನಲ್ಲಿ ಕೆಲವು ದಿನಗಳ ಕಾಲ ಇರಲಿದ್ದಾರೆ. ಇಬ್ಬರೂ ತಮ್ಮ ಮುಂಬರುವ ಪ್ರಾಜೆಕ್ಟ್‌ನ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ ಮತ್ತು ನಂತರ ಸ್ವಲ್ಪ ಸಮಯ ವಿಶ್ರಾಂತಿ ಪಡೆಯಲು ಬಯಸಿದ್ದಾರೆ ಎಂಬ ವರದಿಗಳು ಬಂದಿದ್ದವು. 

ನಟಿ ಮಹಿಮಾ ಮಕ್ವಾನಾ (Mahima Makwana) ಇತ್ತೀಚೆಗೆ ತಮ್ಮ ಮುಂಬರುವ ಚಿತ್ರ 'ಆಂತಿಮ್' ಪ್ರಚಾರಕ್ಕಾಗಿ ಬಿಗ್ ಬಾಸ್‌ನ ಸೆಟ್‌ಗೆ ಬೇಟಿ ನೀಡಿದ್ದರು. ಈ ಸಮಯದಲ್ಲಿ, ಮಹಿಮಾ ಲೆಹೆಂಗಾದಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದರು.

ಗುಲ್ಶನ್ ಕುಮಾರ್ ಅವರ ಸೊಸೆ ದಿವ್ಯಾ ಖೋಸ್ಲಾ ಇತ್ತೀಚೆಗೆ ಜಾನ್ ಅಬ್ರಹಾಂ ಅವರೊಂದಿಗೆ ಮುಂಬೈನ ಸ್ಟುಡಿಯೊದ ಹೊರಗೆ ಕಾಣಿಸಿಕೊಂಡರು. ಇಬ್ಬರೂ ತಮ್ಮ 'ಸತ್ಯಮೇವ ಜಯತೇ 2' ಸಿನಿಮಾದ ಪ್ರಚಾರದಲ್ಲಿ ಬ್ಯುಸಿ ಇದ್ದಾರೆ  ಮತ್ತು ನವೆಂಬರ್ 25 ರಂದು ಈ ಸಿನಿಮಾ ಬಿಡುಗಡೆಯಾಗಲಿದೆ.

ಶುಕ್ರವಾರ ರಾತ್ರಿ ಮುಂಬೈ ವಿಮಾನ ನಿಲ್ದಾಣದ ಹೊರಗೆ ಹಿನಾ ಖಾನ್ (Hina Khan) ಕಾಣಿಸಿ ಕೊಂಡರು. ಈ ಸಮಯದಲ್ಲಿ, ಹಿನಾ ಜೀನ್ಸ್ ಮತ್ತು ತಿಳಿ ಹಸಿರು ಬಣ್ಣದ ಟಿ-ಶರ್ಟ್ ಧರಿಸಿದ್ದರು. ಹಿನಾ ಖಾನ್ ಮೇಕಪ್ ಇಲ್ಲದೆ ತುಂಬಾ ವಿಚಿತ್ರವಾಗಿ ಕಾಣುತ್ತಿದ್ದರು.

ಕಿರು ತೆರೆಯ ಫೇಮಸ್‌ ಕಾಮಿಡಿಯನ್‌ ಭಾರತಿ ಸಿಂಗ್ ಶುಕ್ರವಾರ ಗೋರೆಗಾಂವ್‌ನ ಫಿಲ್ಮ್‌ಸಿಟಿ ಸ್ಟುಡಿಯೊದ ಹೊರಗೆ ಕಾಣಿಸಿಕೊಂಡರು. ಈ ಸಮಯದಲ್ಲಿ ಅವರ ಪತಿ ಹರ್ಷ ಲಿಂಬಾಚಿಯಾ ಕೂಡ ಅವರೊಂದಿಗೆ ಇದ್ದರು. ಭಾರತಿ ತನ್ನ ಗಂಡನ ಜೊತೆ ಪೋಸ್ ಕೊಟ್ಟರು.

Latest Videos

click me!