Laal Singh Chaddha: ಆಮೀರ್‌ ಖಾನ್‌ ಸಿನಿಮಾ ಬಿಡುಗಡೆ ಡೇಟ್ ಮತ್ತೆ ಮುಂದೂಡಿಕೆ

Published : Nov 21, 2021, 11:03 AM IST

ಆಮೀರ್ ಖಾನ್ (Aamir Khan), ಕರೀನಾ ಕಪೂರ್ ಖಾನ್ (Kareena Kapoor Khan) ನಟಿಸಿರುವ  ಲಾಲ್ ಸಿಂಗ್ ಚಡ್ಡಾ (Laal Singh Chaddha) ಸಿನಿಮಾದ ಬಿಡುಗಡೆ (Release) ದಿನಾಂಕವನ್ನು (Date) ಪ್ರಕಟಿಸಲಾಗಿದೆ. ಕೋವಿಡ್ -19 ಕಾರಣದಿಂದ 'ಲಾಲ್ ಸಿಂಗ್ ಚಡ್ಡಾ' ಚಿತ್ರೀಕರಣ ವಿಳಂಬವಾಯಿತು. ಆದಾಗ್ಯೂ, ಈಗ   ಅಂತಿಮವಾಗಿ ಸಿನಿಮಾದ  ಬಿಡುಗಡೆಯ ದಿನವನ್ನು ಸಿನಿಮಾ ತಂಡ ಆನೌನ್ಸ್‌ ಮಾಡಿದೆ. ಸಿನಿಮಾ ಯಾವಾಗ ಬಿಡುಗಡೆಯಾಗುತ್ತದೆ ಎಂದು ತಿಳಿಯಲು ಮುಂದೆ ಓದಿ.

PREV
17
Laal Singh Chaddha: ಆಮೀರ್‌ ಖಾನ್‌ ಸಿನಿಮಾ ಬಿಡುಗಡೆ ಡೇಟ್ ಮತ್ತೆ ಮುಂದೂಡಿಕೆ

ಈ ಹಿಂದೆ, 'ಲಾಲ್ ಸಿಂಗ್ ಚಡ್ಡಾ' 2022 ರ ಪ್ರೇಮಿಗಳ ದಿನದಂದು ಬಿಡುಗಡೆಯಾಗಲಿದೆ ಎಂದು ವರದಿಗಳು ಹೇಳಿದ್ದವು. ಆದರೆ, ಚಿತ್ರದ ತಯಾರಕರು ದಿನಾಂಕವನ್ನು ಮುಂದೂಡಿದ್ದಾರೆ. ಇದು ಈಗ ಬೈಶಾಖಿ 2022 ರಂದು ಬಿಡುಗಡೆಯಾಗಲಿದೆ.


 

27

ಈ ಸುದ್ದಿಯನ್ನು ಅಧಿಕೃತವಾಗಿ ಅಮೀರ್ ಖಾನ್ ಪ್ರೊಡಕ್ಷನ್ಸ್ ಪ್ರಕಟಿಸಿದ್ದು, ಅಮೀರ್ ಖಾನ್ ಮತ್ತು ಕರೀನ್ ಕಪೂರ್ ಖಾನ್ ರೆಟ್ರೊ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಚಿತ್ರದ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ.

37

2019 ರಲ್ಲಿ ಆಮೀರ್ ಖಾನ್ ಅವರ ಜನ್ಮದಿನದಂದು ಈ  ಸಿನಿಮಾವನ್ನು ಘೋಷಿಸಲಾಯಿತು. ಕಳೆದ ವರ್ಷ  ಕೊರೊನಾವೈರಸ್  ಕಾರಣದಿಂದ ಚಲನಚಿತ್ರವು ಸಾಕಷ್ಟು ತಡವಾಗಿದೆ.  ಇಲ್ಲಿಯವರೆಗೆ ಕನಿಷ್ಠ ಮೂರು ಬಿಡುಗಡೆ ದಿನಾಂಕಗಳನ್ನು  ಆನೌನ್ಸ್ ಮಾಡಿದೆ.  

47

ಮೊದಲು ಈ ಫಿಲ್ಮ್‌  ಕ್ರಿಸ್‌ಮಸ್ 2020 ರ ಬಿಡುಗಡೆಗೆ ನಿಗದಿಪಡಿಸಲಾಗಿತ್ತು, ನಂತರ ಅದನ್ನು ಕ್ರಿಸ್‌ಮಸ್ 2021 ಕ್ಕೆ ತಳ್ಳಲಾಯಿತು. ಇದನ್ನು ಮತ್ತೊಮ್ಮೆ 2022  ಪ್ರೇಮಿಗಳ ದಿನಕ್ಕೆ ತಳ್ಳಲಾಯಿತು. ಆದಾಗ್ಯೂ, ಈಗ ಚಿತ್ರವು ಅಂತಿಮವಾಗಿ ಬೈಶಾಖಿಯಲ್ಲಿ ಅಂದರೆ ಮುಂದಿನ ವರ್ಷ, ಏಪ್ರಿಲ್ 14 ರಂದು ಬಿಡುಗಡೆಯಾಗುವ ನಿರೀಕ್ಷೆಯಿದೆ.

57

ಚಿತ್ರದ ಹೊಸ ಬಿಡುಗಡೆಯ ದಿನಾಂಕವನ್ನು ಬಹಿರಂಗಪಡಿಸುವ ಪೋಸ್ಟರ್‌ನಲ್ಲಿ, ಕರೀನ್ ಕಪೂರ್ ಖಾನ್ ಆಮೀರ್ ಖಾನ್ ಅವರ ಭುಜದ ಮೇಲೆ ತಲೆಯಿಟ್ಟಿದ್ದಾರೆ ಮತ್ತು ಅವರು  ಸಾಸಿವೆ ಹೊಲದ ನಡುವಿನಲ್ಲಿದ್ದಾರೆ,  3 ಈಡಿಯಟ್ಸ್ ನಂತರ ಆಮೀರ್ ಖಾನ್ ಮತ್ತು ಕರೀನಾ ಕಪೂರ್ ಖಾನ್ ಒಟ್ಟಿಗೆ ನಟಿಸುತ್ತಿರುವ ಎರಡನೇ ಚಿತ್ರ ಇದಾಗಿದೆ.

 

67

'ಲಾಲ್ ಸಿಂಗ್ ಚಡ್ಡಾ' ಎಂಬುದು ಹಾಲಿವುಡ್ ನಟ ಟಾಮ್ ಹ್ಯಾಂಕ್ಸ್ ನಟಿಸಿದ ಫಾರೆಸ್ಟ್ ಗಂಪ್‌ನ ಭಾರತೀಯ ರೂಪಾಂತರವಾಗಿದೆ. ಈ ಚಿತ್ರವು ಭಾರತೀಯ ಇತಿಹಾಸ  ಮತ್ತು ಆಮೀರ್ ಖಾನ್ ನಿರ್ವಹಿಸಿದ 'ಲಾಲ್ ಸಿಂಗ್ ಚಡ್ಡಾ' ಪಾತ್ರದ ಜೀವನದೊಂದಿಗೆ ಪರಸ್ಪರ ಸಂಬಂಧ ಹೊಂದಿದೆ.

77

ಈ ಸಿನಿಮಾದಲ್ಲಿ ನಟ ಮೋನಾ ಸಿಂಗ್ ಜೊತೆಗೆ ನಟ ನಾಗ ಚೈತನ್ಯ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು ಆಮೀರ್ ಖಾನ್ ಪ್ರೊಡಕ್ಷನ್ಸ್ ಮತ್ತು ವಯಾಕಾಮ್ 18 ಜಂಟಿಯಾಗಿ ನಿರ್ಮಿಸಿದೆ. ಅದ್ವೈತ್ ಚಂದಾ ನಿರ್ದೇಶಿಸಿದ ಈ ಚಿತ್ರವನ್ನು ಪಂಜಾಬ್, ಲಡಾಕ್, ಹಿಮಾಚಲ ಪ್ರದೇಶ ಮತ್ತು ಟರ್ಕಿಯಾದ್ಯಂತ ಹಲವಾರು ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ.

Read more Photos on
click me!

Recommended Stories