ನಟಿ-ನಿರ್ಮಾಪಕಿ ಅನುಷ್ಕಾ ಶರ್ಮಾ(Anushka Sharma) ಇತ್ತೀಚಿನ ಸಂದರ್ಶನದಲ್ಲಿ ದೇಹದ ಕುರಿತು ಪಾಸಿಟಿವ್ ಯೋಚನೆ ಅಳವಡಿಸಿಕೊಳ್ಳುವ ಬಗ್ಗೆ ಮಾತನಾಡಿ ಮಹಿಳೆಯರಿಗೆ ಸೌಂದರ್ಯದ ಮಾನದಂಡಗಳ ಬಗ್ಗೆ ಮಾತನಾಡಿದ್ದಾರೆ.
ಜನವರಿಯಲ್ಲಿ ಮಗಳು ವಮಿಕಾ(Vamika) ಅವರನ್ನು ಸ್ವಾಗತಿಸಿದ ಅನುಷ್ಕಾ ಶರ್ಮಾ ಅವರು ದೇಹದ ಸೌಂದರ್ಯ ಕುರಿತು ಮಾತನಾಡಿದ್ದಾರೆ. ಹೆರಿಗೆಯಾಗುವ ಮೊದಲು ಒಂದು ವಾರದ ಹಿಂದೆ, ನಾನು ತಾಯಿಯಾಗುವುದಕ್ಕಿಂತ ಮುಂಚೆಯೇ, ಗರ್ಭಿಣಿಯಾಗುವ ಮುನ್ನ ಹಾಗೂ ಹೆರಿಗೆ ಆದ ಮೇಲೆ ಒಂದು ನಿರ್ದಿಷ್ಟ ರೀತಿಯಲ್ಲಿ ಹೆಣ್ಣು ಕಾಣಬೇಕೆಂದು ಮಹಿಳೆಯರ ಮೇಲೆ ಹೇರುವ ಈ ಒತ್ತಡದಿಂದಾಗಿ ನಾನು ಹೆದರುತ್ತಿದ್ದೆ. ಇದನ್ನು ನಾನು ಸ್ನೇಹಿತರಿಗೆ ಹೇಳುತ್ತಿದ್ದೆ.
ಈಗ ನಾನು ತನ್ನ ದೇಹದಲ್ಲಿ ಹಿಂದೆಂದಿಗಿಂತಲೂ ಆರಾಮದಾಯಕಳಾಗಿದ್ದೇನೆ ಎಂದಿದ್ದಾರೆ ನಟಿ. ಇದು ಮನಸ್ಸಿನ ಸ್ಥಿತಿ ಎಂದು ನಾನು ಅರಿತುಕೊಂಡೆ. ಅದಕ್ಕೂ ನಿಮ್ಮ ನೋಟಕ್ಕೂ ಯಾವುದೇ ಸಂಬಂಧವಿಲ್ಲಎಂದು ಅವರು ಹೇಳಿದ್ದಾರೆ.
ನನ್ನ ದೇಹವು ಮೊದಲಿನಂತಿಲ್ಲ, ಹಿಂದಿನಷ್ಟು ಟೋನ್ಡ್ ಆಗಿಲ್ಲ. ನಾನು ಫಿಟ್ ಆಗಿರಲು ಇಷ್ಟಪಡುವ ಕಾರಣ ನಾನು ಕೆಲಸ ಮಾಡುತ್ತಿದ್ದೇನೆ. ನನ್ನ ದೇಹದಲ್ಲಿ ಹೆಚ್ಚು ಆರಾಮದಾಯಕವಾಗಿದ್ದೇನೆ ಎಂದಿದ್ದಾರೆ.
ನಟಿ ತಾನು ಹೇಗೆ ಕಾಣುತ್ತೇನೆ ಎಂದು ಪರಿಶೀಲಿಸುವ ಗೀಳನ್ನು ನಿಲ್ಲಿಸಿದ್ದೇನೆ. ಅದನ್ನು ದಾಟಿ ನಾನು ಬಹಳ ದೂರ ಬಂದಿದ್ದೇನೆ ಎಂದಿದ್ದಾರೆ ಅನುಷ್ಕಾ.
ನಾನು ಇನ್ನು ಮುಂದೆ ಚಿಂತಿಸುವುದಿಲ್ಲ. ನಾನು ಫೋಟೋ ಕ್ಲಿಕ್ ಮಾಡುತ್ತೇನೆ. ನಾನು ಹೇಗೆ ಕಾಣುತ್ತೇನೆ ಎಂಬುದನ್ನು ಸೂಕ್ಷ್ಮವಾಗಿ ಪರಿಶೀಲಿಸದೆ ಅದನ್ನು ಪೋಸ್ಟ್ ಮಾಡುತ್ತೇನೆ ಎಂದಿದ್ದಾರೆ ನಟಿ.
ನಟಿ-ನಿರ್ಮಾಪಕಿ ಅನುಷ್ಕಾ ಶರ್ಮಾ ಈ ವರ್ಷ ಜನವರಿ 11 ರಂದು ತಮ್ಮ ಮೊದಲ ಮಗುವನ್ನು ಸ್ವಾಗತಿಸಿದರು. ಸ್ಟಾರ್ ದಂಪತಿಗಳು ಆಕೆಗೆ ವಾಮಿಕಾ ಎಂದು ಹೆಸರಿಟ್ಟರು. ಶಾಂಪೂ ಜಾಹೀರಾತಿನ ಚಿತ್ರೀಕರಣದ ಸಮಯದಲ್ಲಿ ದಂಪತಿಗಳು ಭೇಟಿಯಾದರು. ಅವರು 2017 ರಲ್ಲಿ ಇಟಲಿಯ ಟಸ್ಕನಿಯಲ್ಲಿ ಕೆಲವು ಕುಟುಂಬ ಸದಸ್ಯರ ಸಮ್ಮುಖದಲ್ಲಿಖಾಸಗಿ ಸಮಾರಂಭದಲ್ಲಿ ವಿವಾಹವಾದರು.
ರಬ್ ನೇ ಬನಾ ದಿ ಜೋಡಿ, ಪಿಕೆ, ಬ್ಯಾಂಡ್ ಬಾಜಾ ಬಾರಾತ್, ಸುಲ್ತಾನ್ ಮತ್ತು ಏ ದಿಲ್ ಹೈ ಮುಷ್ಕಿಲ್‌ನಂತಹ ಸಿನಿಮಾಗಳಲ್ಲಿ ಮಿಂಚಿದ ನಟಿ ಅನುಷ್ಕಾ ಶರ್ಮಾ, ಶಾರುಖ್ ಖಾನ್ ಮತ್ತು ಕತ್ರಿನಾ ಕೈಫ್ ಸಹ-ನಟರಾಗಿ 2018 ರ ಸಿನಿಮಾ ಝೀರೋದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು.
ನಿರ್ಮಾಪಕಿಯಾಗಿ ಅವರ ಕೊನೆಯ ಪ್ರಾಜೆಕ್ಟ್ ನೆಟ್‌ಫ್ಲಿಕ್ಸ್ ಸಿನಿಮಾ ಬಲ್ಬುಲ್ ಭಾರಿ ಯಶಸ್ಸನ್ನು ಕಂಡಿತು. ಅವರು ಕಳೆದ ವರ್ಷ ಅಮೆಜಾನ್ ಪ್ರೈಮ್ ವೀಡಿಯೊದ ಸ್ಮ್ಯಾಶ್ ಹಿಟ್ ವೆಬ್-ಸರಣಿ ಪಾಟಲ್ ಲೋಕ್ ಅನ್ನು ಸಹ ನಿರ್ಮಿಸಿದ್ದಾರೆ.