ಬಾಲಿವುಡ್‌ನ ಅತ್ಯಂತ ಪ್ರತಿಭಾನ್ವಿತ ನಟಿಯರಲ್ಲಿ ಒಬ್ಬರಾದ ಐಶ್ವರ್ಯಾ ರೈ ಬಚ್ಚನ್, ಮದುವೆ ಮತ್ತು ಕೌಟುಂಬಿಕ ಜೀವನಕ್ಕಾಗಿ ತಾವು ಎಂದಿಗೂ ತನ್ನ ಸ್ವಂತಿಕೆ ಕಳೆದುಕೊಳ್ಳುವುದಿಲ್ಲ ಎಂದಿದ್ದರು. ಅಭಿಷೇಕ್ ಬಚ್ಚನ್ ನಡುವೆ ಇವರ ಡಿವೋರ್ಸ್ ಸುದ್ದಿ ಹರಾದಾಡುತ್ತಿರುವ ಹೊತ್ತಲ್ಲ, ಐಶ್ವರ್ಯಾ ರೈ ಹಳೇ ಹೇಳಿಕೆಯೊಂದು ಇದೀಗ ಮತ್ತೆ ಸದ್ದು ಮಾಡುತ್ತಿದೆ.
ಪ್ರಸ್ತುತ ಸಾಕಷ್ಟು ಗಾಸಿಪ್‌ಗಳು ಇರೋದ್ರಿಂದ ಈ ಜೋಡಿಯ ಸಂಬಂಧದ ಬಗ್ಗೆ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಈ ದಂಪತಿ 2007ರಲ್ಲಿ ದಾಂಪತ್ಯಕ್ಕೆ ಕಾಲಿಟ್ಟಿದ್ದು, ತನ್ನ ಸೌಂದರ್ಯ ಮತ್ತು ಅಭಿನಯನದಿಂದ ಬಾಲಿವುಡ್‌ನಲ್ಲಿ ಛಾಪು ಮೂಡಿಸಿದವರು. ಮಣಿ ರತ್ನಂ ನಿರ್ದೇಶನದ ಪೊಯನ್ನನ್ ಸೆಲ್ವಿ ಚಿತ್ರದಲ್ಲಿ ನಂದಿನಿಯಾಗಿ ಅಭಿಮಾನಿಗಳ ಮನಗೆದ್ದಿದ್ದಾರೆ.