ಆಲಿಯಾ ಭಟ್, ಜಾಹ್ನವಿ ಕಪೂರ್ ಅಲ್ಲ: ಮಗಧೀರ ಮನಮೆಚ್ಚಿದ ಸುಂದರಿ ಇವರೇ ನೋಡಿ...

First Published | Aug 25, 2024, 10:09 PM IST

ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟ ರಾಮ್ ಚರಣ್, ತಮಗೆ ಇಷ್ಟವಾದ ನಟ, ನಟಿಯರು ಮತ್ತು ಚಿತ್ರಗಳ ಬಗ್ಗೆ ಹಂಚಿಕೊಂಡರು. ಜಪಾನ್‌ನ ಅಭಿಮಾನಿಯೊಬ್ಬರು ತಮಗಾಗಿ ಬಿಡಿಸಿದ್ದ ಚಿತ್ರಕಲೆಯ ಬಗ್ಗೆಯೂ ಭಾವುಕರಾಗಿ ಮಾತನಾಡಿದರು.

ಮೆಗಾಸ್ಟಾರ್ ಚಿರಂಜೀವಿ ಪುತ್ರ ಮತ್ತು ನಟ ರಾಮ್ ಚರಣ್ ದಕ್ಷಿಣ ಭಾರತದ ಪ್ರಮುಖ ನಟರಲ್ಲಿ ಒಬ್ಬರು. ನಟ, ನಿರ್ಮಾಪಕ ಮತ್ತು ಉದ್ಯಮಿ ಎಂಬ ಬಹುಮುಖ ಪ್ರತಿಭೆಯನ್ನು ಹೊಂದಿರುವ ಅವರು ಕೊನೆಯದಾಗಿ ಆರ್‌ಆರ್‌ಆರ್ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. 

ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ನಟ ರಾಮ್ ಚರಣ್, ತಮಗೆ ಇಷ್ಟವಾದ ನಟ, ನಟಿಯರ ಬಗ್ಗೆ ಮಾತನಾಡಿದರು. ಚಿತ್ರರಂಗದಲ್ಲಿ ತಮಗೆ ಇಷ್ಟವಾದ ನಟ ಯಾರೆಂದು ರಾಮ್ ಚರಣ್ ಬಹಿರಂಗಪಡಿಸಿದರು.

Tap to resize

ಈ ಬಗ್ಗೆ ಮಾತನಾಡಿದ ಅವರು, 'ನನಗೆ ಸೂರ್ಯ ಇಷ್ಟ' ಎಂದರು. ನಂತರ ತಮಗೆ ಇಷ್ಟವಾದ ನಟಿ ಯಾರೆಂದು ಕೇಳಿದಾಗ, ನನಗೆ ಸಮಂತಾ ಇಷ್ಟ' ಎಂದರು. ಮುಂದುವರೆದು ಮಾತನಾಡಿದ ಅವರು, 'ರೋಮ್ಯಾನ್ಸ್, ಹಾಸ್ಯಪ್ರಧಾನ ಚಿತ್ರಗಳಿಗಿಂತ ಥ್ರಿಲ್ಲರ್ ಚಿತ್ರಗಳು ನನಗೆ ಇಷ್ಟ' ಎಂದು ಹೇಳಿದರು.

ತಾವು ನಟಿಸಿದ ಚಿತ್ರಗಳ ಪೈಕಿ, ಮಗಧೀರ ಚಿತ್ರವೇ ತಮಗೆ ಇಷ್ಟವಾದ ಚಿತ್ರ ಎಂದು ಹೇಳಿದ ರಾಮ್ ಚರಣ್, ಅದು ತಮ್ಮ ಮೈಲಿಗಲ್ಲು ಚಿತ್ರ ಎಂದು ಬಣ್ಣಿಸಿದರು. ಮುಂದುವರೆದು ಮಾತನಾಡಿದ ಅವರು, ಆರ್‌ಆರ್‌ಆರ್ ಪ್ರಚಾರಕ್ಕಾಗಿ ಜಪಾನ್‌ಗೆ ತೆರಳಿದ್ದಾಗ, ತಮ್ಮ ಮತ್ತು ತಮ್ಮ ಚಿತ್ರಗಳ ಅಭಿಮಾನಿಯಾಗಿದ್ದ ವೃದ್ಧೆಯೊಬ್ಬರನ್ನು ಭೇಟಿಯಾದ ಬಗ್ಗೆ ರಾಮ್ ಚರಣ್ ಹಂಚಿಕೊಂಡರು.

ಈ ಬಗ್ಗೆ ಮಾತನಾಡಿದ ಅವರು, “ಅವರ ಬಳಿ 180 ಪುಟಗಳ ಕಲಾ ಪುಸ್ತಕವಿತ್ತು, ನಾನು ನಟಿಸಿದ ಚಿತ್ರಗಳು ಮತ್ತು ಹಾಡುಗಳಿಂದ ನನ್ನ ಪ್ರತಿಯೊಂದು ಅಭಿವ್ಯಕ್ತಿಗಳನ್ನು ಅವರು ಕೈಯಿಂದ ಚಿತ್ರಿಸಿದ್ದರು. ನನ್ನನ್ನು ಜಪಾನ್‌ಗೆ ಕರೆದೊಯ್ದ ಆ ವೃದ್ಧೆಯನ್ನು ಭೇಟಿಯಾಗುವಂತೆ ಮಾಡಿದ ಆರ್‌ಆರ್‌ಆರ್ ತಂಡಕ್ಕೆ ಧನ್ಯವಾದಗಳು. ಹಳೆಯ ಪೀಳಿಗೆಯ ಒಬ್ಬರು ನನ್ನ ಅಭಿಮಾನಿಯಾಗಿರುವುದು ವಿಶೇಷ ಅನುಭವ” ಎಂದು ರಾಮ್ ಚರಣ್ ಭಾವುಕರಾಗಿ ನುಡಿದರು. 

ಇದೀಗ ರಾಮ್ ಚರಣ್, ಶಂಕರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಗೇಮ್ ಚೇಂಜರ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ರಾಜಕೀಯ ಥ್ರಿಲ್ಲರ್ ಕಥಾ ಹದರ ಹೊಂದಿರುವ ಈ ಚಿತ್ರವು ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಈ ಚಿತ್ರ ಈ ವರ್ಷದ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. 

'ಗೇಮ್ ಚೇಂಜರ್' ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ಅಂಜಲಿ, ಎಸ್‌ಜೆ ಸೂರ್ಯ, ಶ್ರೀಕಾಂತ್, ಜಯರಾಮ್, ಸುನಿಲ್ ಮತ್ತು ಸಮುದ್ರಕನಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಭ್ರಷ್ಟ ರಾಜಕಾರಣಿಗಳ ವಿರುದ್ಧ ಹೋರಾಡುವ ಐಎಎಸ್ ಅಧಿಕಾರಿಯೊಬ್ಬರ ಕುರಿತಾದ ಚಿತ್ರ ಇದಾಗಿದೆ ಎನ್ನಲಾಗಿದೆ.

Latest Videos

click me!