ಸಿನಿಮಾಗಳಲ್ಲಿ ಸೀರಿಯಲ್ ಕಿಸ್ಸರ್, ಹೊರಗೆ ಜೆಂಟಲ್‌ಮ್ಯಾನ್, ನಿಮಗೆ ಗೊತ್ತಿರದ ಕ್ರೇಜಿ ಹೀರೋ

First Published | Aug 26, 2024, 3:59 PM IST

ಸಿನಿಮಾಗಳಲ್ಲಿ ಸೀರಿಯಲ್ ಕಿಸ್ಸರ್, ಬ್ಯಾಡ್ ಬಾಯ್ ಇಮೇಜ್ ಲೋ ಕಾಣಿಸಿಕೊಳ್ಳುವ ಇಮ್ರಾನ್ ಹಾಶ್ಮಿ ನಿಜ ಜೀವನದಲ್ಲಿ ಜೆಂಟಲ್ ಮ್ಯಾನ್. ಇಮ್ರಾನ್ ಹಾಶ್ಮಿ ಬಗ್ಗೆ ನಿಮಗೆ ಗೊತ್ತಿರದ ಇಂಟೆರೆಸ್ಟಿಂಗ್ ವಿಷಯಗಳು ಇಲ್ಲಿವೆ. 

ಬಾಲಿವುಡ್ ನಟ ಇಮ್ರಾನ್ ಹಾಶ್ಮಿ 90ರ ದಶಕದಲ್ಲಿ ಸಿನಿಮಾಗಳಿಗೆ ಎಂಟ್ರಿ ನೀಡಿದರು. ಸಿನಿಮಾಗಳಲ್ಲಿ ಸೀರಿಯಲ್ ಕಿಸ್ಸರ್ ಆಗಿ ಇಮ್ರಾನ್ ಹಶ್ಮಿ ಗುರುತಿಸಿಕೊಂಡಿದ್ದಾರೆ.

 ಸಿನಿಮಾದಲ್ಲಿ ಸೀರಿಯಲ್ ಕಿಸ್ಸರ್ ಆಗಿ, ಬ್ಯಾಡ್ ಬಾಯ್ ಇಮೇಜ್ ಇರೋ ಇಮ್ರಾನ್ ನಿಜ ಜೀವನದಲ್ಲಿ ಮಾತ್ರ ಅದಕ್ಕೆ ಅಪೋಸಿಟ್ ಕ್ಯಾರೆಕ್ಟರ್. ಬಾಲಿವುಡ್ ನಟನ ಬಗ್ಗೆ ಕೆಲವು ಆಸಕ್ತಿಕರ ವಿಷಯಗಳು ಇಲ್ಲಿವೆ. 

Tap to resize

ಇಮ್ರಾನ್ ಹಾಶ್ಮಿ, ಆಲಿಯಾ ಭಟ್ ರಿಲೇಟಿವ್ಸ್. ಇಮ್ರಾನ್ ಅಜ್ಜಿ, ಮಹೇಶ್ ಭಟ್ ಬಂಧುಗಳು. ಇಮ್ರಾನ್ ಸಿನಿಮಾಗೆ ಎಂಟ್ರಿ ಕೊಟ್ಟಿದ್ದೇ ಮಹಿಶ್ ಭಟ್ ಮೂಲಕ. ಜೀವನದಲ್ಲಿ ಏನು ಮಾಡಬೇಕೆಂದು ತಿಳಿಯದ ಇಮ್ರಾನ್ ಹಾಶ್ಮಿ ಅವರನ್ನು ಆತನ ತಂದೆ ತಮ್ಮ ಸಹೋದರ ಮಹೇಶ್ ಭಟ್ ಬಳಿ ಬಿಟ್ಟು, ಇವನಿಗೆ ಏನಾದರೂ ದಾರಿ ತೋರಿಸಿ ಎಂದು ಹೇಳಿ ಹೋಗಿದ್ದರಂತೆ.

ಇಮ್ರಾನ್ ಹಶ್ಮಿ ಮುಂಬೈನ ಸಿಡೆನ್ಹ್ಯಾಮ್ ಕಾಲೇಜಿನಿಂದ ಪದವಿ ಪಡೆದವರು. ಆದರೆ ಆತ ಮೊದಲಿನಿಂದಲೂ ಸೋಮಾರಿ. ಆಗಲೇ ಗರ್ಲ್ ಫ್ರೆಂಡ್ಸ್ ತುಂಬಾ ಇದ್ರಂತೆ. ಅದಕ್ಕೆ ಕಾಲೇಜು ಹೋಗುತ್ತಿದ್ದರಂತೆ. ಮಹೇಶ್ ಭಟ್ ಇಮ್ರನ್ ಹಶ್ಮಿಯನ್ನು ತನ್ನ ಸಹಾಯಕರನ್ನಾಗಿ ಇಟ್ಟುಕೊಂಡಿದ್ದರಂತೆ. ಆದರೆ ಇಮ್ರಾನ್ ಹೇಗಾದರೂ ಮಾಡಿ ಅವರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರಂತೆ.

ಇನ್ನು 'ಮರ್ಡರ್' ಸಿನಿಮಾ ಮೂಲಕ ಯಶಸ್ಸು ಗಳಿಸಿದ ಹಶ್ಮಿ.. 'ಮರ್ಡರ್', 'ಆಶಿಕ್ ಬನಾಯಾ ಆಪ್ನೆ', 'ಜನ್ಮತ್', 'ಗ್ಯಾಂಗ್ಸ್ಟರ್', 'ದಿ ಕಿಲ್ಲರ್', 'ಜೆಹರ್', 'ಕ್ರೂಕ್', 'ಗುಡ್ ಬಾಯ್ ಬ್ಯಾಡ್ ಬಾಯ್' ಚಿತ್ರಗಳಲ್ಲಿ ನಟಿಸಿದ್ದಲ್ಲದೇ, ಕಿಸ್ಸಿಂಗ್ ದೃಶ್ಯಗಳಲ್ಲಿಯೇ ಹೆಚ್ಚು ಕಾಣಿಸಿಕೊಂಡಿದ್ದಾರೆ. ಅದಕ್ಕೆ ಅವರಿಗೆ 'ಸೀರಿಯಲ್ ಕಿಸ್ಸರ್' ಎಂಬ ಉಪಮೆ. ಆದರೆ ನಿಜ ಜೀವನದಲ್ಲಿ ಆತ ನಿಜವಾದ ಜೆಂಟಲ್ ಮ್ಯಾನ್.

ಸಿನಿಮಾಗಳಲ್ಲಿ ಹುಡುಗಿಯರ ಜೊತೆ ರೊಮ್ಯಾನ್ಸ್ ಮಾಡೋ, ಇಮ್ರಾನ್ ನಿಜ ಜೀವನದಲ್ಲಿ ಒಬ್ಬಳೇ ಹುಡುಗಿಯನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಆಕೆಯೊಂದಿಗೆ ಹ್ಯಾಪಿ ಲೈಫ್ ನಡೆಸುತ್ತಿದ್ದಾರೆ.

ಹೈಸ್ಕೂಲ್ ಡೇಸ್‌ನಿಂದಲ್ ಹಳ್ಮಿ ತಮ್ಮ ಪತ್ನಿ ಪರ್ವೀನ್‌ರನ್ನು ಪ್ರೀತಿಸುತ್ತಿದ್ದರಂತೆ. ಹಲವು ವರ್ಷಗಳಿಂದ ಸ್ನೇಹಿತರಾಗಿದ್ದವರು. ಅವರ ಪ್ರೀತಿ, ಬಾಂಧವ್ಯಕ್ಕೆ ಯಾವತ್ತೂ ಯಾವುದೇ ಕುತ್ತಾಗಿರಲಿಲ್ಲ. ಬಹಳ ಕಾಲ ಡೇಟಿಂಗ್ ಮಾಡಿದರು. ಆ ಸಮಯದಲ್ಲಿ ಇಮ್ರಾನ್ ತನ್ನ ವೃತ್ತಿಜೀವನದಲ್ಲಿ ಸ್ಥಿರವಾಗಿ ನೆಲೆಯೂರುವುದಕ್ಕೆ ಪ್ರಯತ್ನಿಸುತ್ತಿದ್ದರೆ, ಬೆನ್ನಿಗೆ ನಿಂತವರು ಪರ್ವೀನ್. 

2006ರಲ್ಲಿ ಇಮ್ರಾನ್ ಹಾಶ್ಮಿ ತನ್ನ ಗೆಳತಿ ಪರ್ವೀನ್ ಶಹಾನಿಯನ್ನು ವಿವಾಹವಾದರು. ಈ ದಂಪತಿಗೆ ಅಯಾನ್ ಹಾಶ್ಮಿ ಎಂಬ ಮಗನಿದ್ದಾನೆ. ಆದರೆ ಆ ಹುಡುಗನಿಗೆ ನಾಲ್ಕು ವರ್ಷದವನಿದ್ದಾಗ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಮಗನನ್ನು ಉಳಿಸಿಕೊಳ್ಳಲು ದೇಶ ವಿದೇಶಗಳಲ್ಲಿರುವ ಆಸ್ಪತ್ರೆಗಳಿಗೆ ಎಡೆತಾಕಿದ್ದಾರೆ ಹಶ್ಮಿ. ಪ್ರಸ್ತುತ ಆ ಹುಡುಗ ಕ್ಯಾನ್ಸರ್‌ನಿಂದ ಮುಕ್ತನಾಗಿ ಆರೋಗ್ಯವಾಗಿದ್ದಾನೆ. ತನ್ನ ಮಗನ ಕ್ಯಾನ್ಸರ್ ವಿರುದ್ಧದ ಹೋರಾಟದ ಬಗ್ಗೆ ಹಶ್ಮಿ ಪುಸ್ತಕವನ್ನೂ ಬರೆದಿದ್ದಾರೆ.

ಸಾಮಾಜಿಕ ಮಾಧ್ಯಮ, ಸಾಮಾಜಿಕ ಜೀವನದಿಂದ ದೂರವೇ ಇರೋ ಹಶ್ಮಿ ತಮ್ಮ ಕೌಟುಂಬಿಕ ಜೀವನವನ್ನು ನಿಜವಾಗಿಯೂ ಆನಂದಿಸುತ್ತಿದ್ದಾರೆ. ಮದುವೆಯಾಗಿ ವಿಚ್ಛೇದನ ಪಡೆಯುವವರ ನಡುವೆ, ಬೇರೆಯಾಗುವವರ ನಡುವೆ ಇವರು ತಾನು ಪ್ರೀತಿಸಿದ ಹುಡುಗಿಯನ್ನೇ ಮದುವೆಯಾಗಿ ಕಳೆದ 18 ವರ್ಷಗಳಿಂದ ಸುಂದರ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. 

Latest Videos

click me!